;

ಮೊಳಕಾಲ್ಮೂರು ತಾಲ್ಲೂಕಿನ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಶಿಕ್ಷಕರು.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಕೊರೋನಾ ಸಂಕಷ್ಟದ ಬಹುದಿನಗಳಿಂದ ಬಾಗಿಲು ಮುಚ್ಚಿದ್ದ ಶಾಲೆಗಳು ಸೋಮವಾರ ಸಂಭ್ರಮ ಸಡಗರ ದಿಂದ ಆರಂಭಗೊಂಡಿದ್ದು ಮಕ್ಕಳು ಉತ್ಸಾಹದಿಂದ ಭೌತಿಕ ತರಗತಿಗಳಿಗೆ ಆಗಮಿಸಿದರು. ಬೌತಿಕ ತರಗತಿಗಳ ಆರಂಭದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ, ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಜಾರಿ ಗೊಳಿಸಲಾಗಿದೆ. ಪ್ರತಿ ಮಗುವನ್ನು ಥರ್ಮಲ್ ಸ್ಕ್ಯಾನಿಂಗ್‌ ನಡೆಸಿ ಕೊಠಡಿಗೆ ಕಳಿಸಲಾಯಿತು. ತಾಲೂಕಿನಲ್ಲಿ ಶಾಲಾ ಆರಂಭದಿಂದ ಸಡಗರ ಕಂಡುಬಂತು. ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿ ಗಳಲ್ಲಿ ಹೊಸ ಲವಲವಿಕೆ ಉತ್ಸಾಹ ಇತ್ತು. ಪೀಠೋಪಕರಣ ಸಾಮಾಗ್ರಿ, ಅಡುಗೆ ಕೋಣೆ ಸೇರಿದಂತೆ ಇಡೀ ಶಾಲಾ ಆವರಣಕ್ಕೆ ಸೋಂಕು ನಿವಾರಕ ಸಿಂಪಡಿಸಲಾಗಿತ್ತು. ಮೊದಲ ದಿನ ಮಕ್ಕಳಿಗೆ ಪುಸ್ತಕ, ಸಮವಸ್ತ್ರಗಳನ್ನು ನೀಡಿ ಸ್ವಾಗತಿಸಿದರೆ ಇನ್ನುಕೆಲ ಶಾಲೆಗಳಲ್ಲಿ ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಿ ಮಕ್ಕಳಲ್ಲಿ ಉತ್ಸಾಹ ತುಂಬಲಾಯಿತು. ಶಾಲಾ ಮುಖ್ಯ ದ್ವಾರಗಳಲ್ಲಿ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ತಾಲೂಕಿನಲ್ಲಿ ಶೇ. 45 ರಷ್ಟು ಮಕ್ಕಳ ಹಾಜರಾತಿ ದಾಖಲಾಗಿದೆ.ಷಕ್ಷೇತ್ರ ಶಿಕ್ಷಣಾಧಿಕಾರಿ ಯುವ ರಾಜನಾಯ್ಕ ಮಾತನಾಡಿ, ಕಳೆದ ಒಂದುವರೆ ವರ್ಷದಿಂದ ಕೊರೋನಾ ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಶಾಲಾ ಆರಂಭದಿಂದ ಮಕ್ಕಳಲ್ಲಿ ಉತ್ಸಾಹ ಕಂಡುಬರುತ್ತಿದೆ. ಕೊರೋನಾ ಮಾರ್ಗಸೂಚಿ ಪ್ರಕಾರ ಶಾಲೆಗಳನ್ನು ಆರಂಭಿಸಿದ್ದು ಸುರಕ್ಷತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗಿದೆ. ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ. ಜ್ವರ, ಶೀತ ಲಕ್ಷಣಗಳು ಕಂಡುಬಂದ ಮಗುವನ್ನು ಪ್ರತ್ಯೇಕ ಗೊಳಿಸಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ತಿಳಿಸಿದರು..

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;