ಬೆಂಗಳೂರು:ಎಸ್ ಡಬ್ಲೂ ಎಪ್ ಐ ಹಾಗೂ ಸಿಐಟಿಯು ರಾಜ್ಯ ಮಟ್ಟದ ಕಾರ್ಯಗಾರ…!!!

ಬೆಂಗಳೂರು:ಎಸ್ ಡಬ್ಲೂ ಎಪ್ ಐ ಹಾಗೂ ಸಿಐಟಿಯು ರಾಜ್ಯ ಮಟ್ಟದ ಕಾರ್ಯಗಾರ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪೆಡರೇಷನ್(ರಿ),ಪದಾಧಿಕಾರಿಗಳ ಹಾಗೂ ಸದಸ್ಯರಿಗೆ ರಾಜ್ಯ ಮಟ್ಟದ ಸೆ 5ಮತ್ತು6ರಂದು 2ದಿನ ಕಾರ್ಯಗಾರವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.ಕಾರ್ಯಗಾರದ ಮೊದಲ ದಿನವಾದ ಸೆ 5ರಂದು ಬೆಳಿಗ್ಗೆ ಕಾರ್ಯಗಾರವನ್ನು,ರಾಜ್ಯ ಪ್ರಮುಖರು ಹಾಗೂ ವಕೀಲರಾದ ವೆಂಕಟೇಶ ಗೌಡ ಉದ್ಘಾಟಿಸಿದರು.ನಂತರ ಕಾರ್ಮಿಕ ರಾಜ್ಯ ಮುಖಂಡರಾದ ಮೀನಾಕ್ಷಿ ಸುಂದರಂ ರವರು ಕಟ್ಟಡ ಕಾರ್ಮಿಕ ಚಳುವಳಿ ಮತ್ತು ಸಿಐಟಿಯು ಕಣ್ಣೋಟ ಕುರಿತು ಉಪನ್ಯಾಸ ನೀಡಿದರು. ಸಂಘಟನೆಯ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಸುರೇಶ ಕಲ್ಲಾಗಾರ ರವರು ಸಮಿತಿಗಳ ರಚನೆ ಕಾರ್ಯನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಸಂಘಟನೆಯ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಬಾಲಕೃಷ್ಣಶೆಟ್ಟಿರವರು ಸಮಿತಿಗಳ ಹಣಕಾಸು ನಿರ್ವಹಣೆ ಮತ್ತು ಲೆಕ್ಕಪತ್ರ ಕುರಿತಂತೆ ಮಾತನಾಡಿದರು.
ಸೆ6ರಂದು ಜರುಗಲಿರುವ ಕಾರ್ಯಗಾರದಲ್ಲಿ ಸಂಘಟನೆ ಪ್ರಮುಖರಾದ ಡಾ॥ಅನಿಲ್ ಕುಮಾರ್ ರವರು ಕಟ್ಟಡ ಕಾರ್ಮಿಕರಿಗೆ ಆರೋಗ್ಯ ಹಾಗೂ ವೈಜ್ಞಾನಿಕ ಅರಿವು ಕರಿತಂತೆ ಅರಿವು ಮೂಡಿಸಲಿದ್ದಾರೆ.ಮತ್ತು ಮುಖಂಡರು ಹಾಗೂ ಕಾರ್ಯಗಾರದಲ್ಲಿ ಪಾಲ್ಗೊಂಡಿರುವವರ ನಡುವೆ,ವಿಷಯಗಳ ಕುರಿತು ಪ್ರೆಶ್ನೋತ್ತರ ಕಾರ್ಯಕ್ರಮ ಜರುಗಲಿದೆ.ತದನಂತರ ಡಾ॥ಪ್ರಕಾಶ್ ರವರಿಂದ ಕಟ್ಟಡ ಕಾರ್ಮಿಕರ ನಡುವೆ ವರ್ಗ ಪ್ರಜ್ಞೆ ಬೆಳೆಸುವುದು ಹೇಗೆ?ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.
ಕೆ.ಮಹಾಂತೇಶ ರವರು ಕಟ್ಟಡ ಕಾರ್ಮಿಕರು ಮತ್ತು ಸಂಘಟನೆ ವಿಸ್ತರಣೆಗೆ ಅವಕಾಶ,ಕುರಿತು ಸವಿಸ್ಥರವಾಗಿ ಮಾಹಿತಿ ನೀಡಿ ಮಾತನಾಡಲಿದ್ದಾರೆ.ನಂತರ ಸಂಘಟನಾ ಚರ್ಚೆ ತದನಂತರ ಸಂಘಟನೆಯ ಪ್ರಮುಖರಾದ ಲಿಂಗರಾಜು ರವರು ಮಾಧ್ಯಮ ಹಾಗೂ ಸಾಮಜಿಕ ಜಾಲತಾಣ ಬಳಸುವ ಬಗೆ ಹೇಗೆ ಕುರಿತಂತೆ ಮಾತನಾಡಲಿದ್ದಾರೆ.ತದನಂತರ ಪ್ರೆಶ್ನೋತ್ತರ ಕೊನೆಗೆ ಕಾರ್ಯಗಾರದ ಸಮಾರೋಪ ಸಮಾರಂಭ ಜರುಗಲಿದೆ. ಎರೆಡು ದಿನಗಳ ಕಾಲ ಬೆಂಗಳೂರಿನಲ್ಲಿ ಜರುಗುವ ರಾಜ್ಯಮಟ್ಟದ ಈ ಕಾರ್ಯಗಾರದಲ್ಲಿ,ರಾಜ್ಯದ ಮೂಲೆ ಮೂಲೆಗಳಿಂದ ತಾಲೂಕು ಮಟ್ಟದ ಸಂಘಟನೆಯ ಮುಖಂಡರು ಸಂಘಟನಾಕಾರರು ಪಾಲ್ಗೊಂಡಿದ್ದಾರೆ.ಸಂಘಟನೆಯ ಪ್ರಭಾವಿ ರಾಜ್ಯ ಮುಖಂಡರು ಕಾರ್ಯಗಾರಲ್ಲಿ ಭಾಗವಹಿಸಿ ಕಾರ್ಯಗಾರವನ್ನು,ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ನೆರವೇರಲು ಕಾರಣೀಭೂತರಾಗಿದ್ದಾರೆ.ಕಾರ್ಯಗಾರದ ಸಂದರ್ಭದಲ್ಲಿ ಭಾಗಿಯಾದವರಿಗೆ,ಸುಸಜ್ಜಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಾರ್ಯಗಾರದಲ್ಲಿ ಮಾಡಲಾಗಿತ್ತು…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend