ಭ್ರಷ್ಟಾಚಾರದಿಂದ ತಪ್ಪಿಸಿಕೊಳ್ಳಲು ಇ.ಓ. ಪ್ರಕಾಶ್ ತನಿಖಾಧಿಕಾರಿಗಳ ಮೇಲೆ ಒತ್ತಡ ಬೆಳಕಿಗೆ ಬಂದಿದೆ.!

ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿರುವುದುರಿಂದ ತಾ.ಪಂ.ಇ.ಓ. ಪ್ರಕಾಶ್ ಅವರು ಇದರಿಂದ ತಪ್ಪಿಸಿಕೊಳ್ಳಲು ತನಿಖಾಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಹಳ್ಳಿ ಬಸವರೆಡ್ಡಿ ಆರೋಪಿಸಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ದಲಿತ ಸಂಘರ್ಷ ಸಮಿತಿಯವರ ನೇತೃತ್ವದಲ್ಲಿ ಪ್ರತಿ ಭಟನೆ ನಡೆಸಿ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ನಂದೀಶ್‌ರವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ರೈತರ ಹೊಲದಲ್ಲಿ ಎನ್.ಆರ್.ಇ.ಜಿ.ಎ.ವೈಯಕ್ತಿಕ ಕಾಮಗಾರಿಗಳಿಗೆ ರೈತರೇ ಕಟ್ಟಿಸಿರುವ ನಾಮಫಲಕಗಳ 1245 ರೈತರ 37 ಲಕ್ಷ ರೂ.ಗಳ ಅವ್ಯವಹಾರದತನಿಖೆ ನಡೆಯುತ್ತಿದ್ದು ಇ.ಓ.ಪ್ರಕಾಶ್‌ರವರು ಜಿಲ್ಲಾ ಮಟ್ಟದ ತನಿಖಾಧಿಕಾರಿಗಳ ಮೇಲೆ ಪ್ರಬಲ ರಾಜಕೀಯ ಒತ್ತಡ ಹೇರುತ್ತಿರುವುದು ಸಂಘಟನೆಗಳ ಗಮನಕ್ಕೆ ಬಂದಿದೆ ಎಂದು ದೂರಿದರು. ಭ್ರಷ್ಟಾಚಾರ ಬೆಳಕಿಗೆ ಬರಲು ನಿಷ್ಪಕ್ಷಪಾತ ತನಿಖೆ ಮಾಡಲುಎಲ್ಲಾ ರಾಜಕೀಯ ಪಕ್ಷ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತ ಹಾಗೂ ಅಧಿಕಾರಿಗಳೊಂದಿಗೆ ಸತ್ಯ ಶೋಧನಾ ಸಮಿತಿ ತಮ್ಮ ನೇತೃತ್ವದಲ್ಲಿ ರಚಿಸಿ ತನಿಖೆ ನಡೆಸಬೇಕು. ಇದುಂದ ಮಾತ್ರ ರೈತ ರಿಗೆ ನ್ಯಾಯ ಸಿಗುವ ಭರವಸೆ ಇರುವುದುಂದ ತಾವುಗಳು ತಕ್ಷಣವೇ ಸತ್ಯ ಶೋಧನೆ ಸಮಿತಿ ರಚಿಸಿ ಭ್ರಷ್ಟಾಚಾರ ಮಾಡಿರುವವರಿಂದ ಹಣ ವಸೂಲಿ ಮಾಡಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಿ.ಪಿ.ಐ.ನ ಕಾಂ|| ಜಾಫರ್ ಷರೀಫ್, ಮರ್ಲಹಳ್ಳಿ ರವಿಕುಮಾರ್, ಕೊಂಡಾಪುರ ಪರಮೇಶಪ್ಪ ಡಿ.ಎಸ್.ಎಸ್.ನ ವೈ.ಇ. ನವೀನ್, ಮಂಜಣ್ಣ, ಕನಕ ಶಿವಮೂರ್ತಿ, ನಿಂಗಣ್ಣ ಮುಂತಾದವರು ಇದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend