ಗುಂಡುಮುಣುಗು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ಜರುಗಿತು…!!!

ಗುಂಡುಮುಣುಗು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ಜರುಗಿತು.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು
ಗುಂಡುಮುಣುಗು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮೀ ದ್ಯಾಮರಾಜ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 1-09-2021ರಂದು ಗ್ರಾಮಪಂಚಾಯತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ಜರಗಿತು. ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣರವರು ಮೇಲಾಧಿಕಾರಿಗಳಿಂದ ಬಂದ ಕಾಗದ ಪತ್ರಗಳನ್ನು ಗ್ರಾಮಪಂಚಾಯಿತಿ ಸರ್ವ ಸದಸ್ಯರಿಗೆ ಓದಿ ತಿಳಿಸಿದರು. ಹಿಂದಿನ ಸಭೆಯಲ್ಲಿ ತೀರ್ಮಾನಿಸಿದ ವಿಷಯಗಳ ಬಗ್ಗೆ ಗ್ರಾಮ ಪಂಚಾಯಿತಿಯಿಂದ,ಒಪ್ಪಿಗೆ ಪಡೆದುದೃಢೀಕರಿಸುವುದು.ಗ್ರಾಮ ಪಂಚಾಯಿತಿಯಿಂದ ಕರ ವಸೂಲಾತಿ ಹಾಗೂ ಸಿಬ್ಬಂದಿಗಳ ಬಗ್ಗೆ ಕುರಿತು ಚರ್ಚೆ. ಗ್ರಾಮ ಪಂಚಾಯಿತಿಗೆ ಬಂದ ಅನುದಾನದಲ್ಲಿ ಜಮಾ ಮತ್ತು ಖರ್ಚಿನ ಬಗ್ಗೆ, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದಲ್ಲಿ ಅತಿಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಹಾಗೂ ಸಾರ್ವಜನಿಕರಿಂದ ಬಂದ ಕಾಗದಪತ್ರಗಳನ್ನು ಓದಿ ಹೇಳಿ ಸೂಕ್ತ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನಂತರ ಸಿದ್ದಾಪುರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ಪಕ್ಕದಲ್ಲಿರುವ ಪಾಳು ಭಾವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಿದ್ದಾಪುರ ಗ್ರಾಮದಸದಸ್ಯರಾದ. ಡಿ. ಎಂ. ಜೀವಪ್ರಕಾಶ್ ರವರಿಗೆ ತಿಳಿಸಿದರು . ಈ ಸಭೆಯಲ್ಲಿ. ಉಪಾಧ್ಯಕ್ಷರಾದ ಮಾರಣ್ಣ ವಿ. ಸದಸ್ಯರುಗಾಳಾದ ಮಾರಕ್ಕ. ಜಿ ಶ್ರೀಕಾಂತ. ಕೆ ಬಿ ಚಂದ್ರಗೌಡ. ಸಾರಪ್ಪ. ಅಂಜಿನಮ್ಮ. ಜೀವಪ್ರಕಾಶ. ಗಂಗಮ್ಮ ನಾಗರಾಜ. ಎ ಬಿ ವಿಜಯೇಂದ್ರ. ಜಿ ಭಾಗ್ಯಮ್ಮ. ಮಂಜಣ್ಣ. ಕೆ ಭಾಗ್ಯಮ್ಮ. ಗಂಗಮ್ಮ. ನಾಗರಾಜ ಬಿ. ಕೆ ಹೆಚ್. ಅನುಸೂಯಮ್ಮ. ಪಾರ್ವತಮ್ಮ. ಬಡಪ್ಪ. ಕೆ ಕೋಟ್ರಮ್ಮ. ಎಸ್ ಕೆ ಪರಿಮಳ. ಎಕೆ ದುರುಗಮ್ಮ. ಧನುಂಜಯ. ಗಂಟೆರ ಧ್ಯಾಮಕ್ಕ. ಪಿ ಅನಿಲಮ್ಮ. ಕೆ ಎಮ್ ಶಿವರಾಜ.ಜಿ ಕವಿತ ಸೇರಿದಂತೆ ಗ್ರಾಮಪಂಚಾಯತಿ ಸಿಬ್ಬಂದಿ ವರ್ಗ ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ವಿರೇಶ್, ಕೆ, ಎಸ್, ಹೊಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend