;

ಕೊಪ್ಪಳ ತಾ.ಪಂ. ವಾಹನ ಚಾಲಕ ವಯೋನಿವೃತ್ತಿ : ವಿಶೇಷ ಬೀಳ್ಕೊಡುಗೆ…!!!

ಕೊಪ್ಪಳ ತಾ.ಪಂ. ವಾಹನ ಚಾಲಕ ವಯೋನಿವೃತ್ತಿ : ವಿಶೇಷ ಬೀಳ್ಕೊಡುಗೆ.
ಕೊಪ್ಪಳ, ಸೆ.01: ಕೊಪ್ಪಳ ತಾಲ್ಲೂಕ ಪಂಚಾಯತಿಯ ವಾಹನ ಚಾಲಕರಾಗಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಚನ್ನಬಸಪ್ಪ ಹಾದಿಮನಿ ಅವರು ಮಂಗಳವಾರದoದು  ವಯೋನಿವೃತ್ತಿ ಹೊಂದಿದ ಪ್ರಯುಕ್ತ ಕೊಪ್ಪಳ ತಾಲ್ಲೂಕ ಪಂಚಾಯತಿ ವತಿಯಿಂದ ಬೀಳ್ಕೊಡಲಾಯಿತು.
ತಾ.ಪಂ. ವಾಹನ ಚಾಲಕ ವಯೋನಿವೃತ್ತಿ ಪ್ರಯುಕ್ತ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ವತಃ ತಾವೇ ಸರ್ಕಾರಿ ವಾಹನದಲ್ಲಿ ವಾಹನ ಚಾಲಕರಾಗಿ ಚನ್ನಬಸಪ್ಪ ಅವರನ್ನು ಮನೆಗೆ ತಲುಪಿಸಿ ಅವರಿಗೆ ವಿಶೇಷವಾಗಿ ಬೀಳ್ಕೊಟ್ಟರು. ಚಾಲಕ ಮತ್ತು ಅಧಿಕಾರಿ ಎನ್ನುವ ಬೇಧಭಾವ ತೋರದೇ ಇರುವ ಅಧಿಕಾರಿಗಳ ಕಾರ್ಯ ಶ್ಲಾಘನೀಯವಾದುದು.
ತಾಲ್ಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚನ್ನಬಸಪ್ಪ ಸುಮಾರು ವರ್ಷಗಳಿಂದ ವಾಹನ ಚಾಲಕರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಸರ್ಕಾರದ ನಿಯಮಾನುಸಾರ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಯೋನಿವೃತ್ತಿ ಆಗಲೇಬೇಕು. ಆದ್ದರಿಂದ ಎಲ್ಲರೂ ಅದನ್ನು ಪಾಲಿಸಲೇಬೇಕು ಎಂದರು.
ನAತರ ತಾಲ್ಲೂಕ ಪಂಚಾಯತಿ ವತಿಯಿಂದ ಚನ್ನಬಸಪ್ಪ ಹಾದಿಮನಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ಸಹಾಯಕ ನಿರ್ದೇಶಕಿ(ಗ್ರಾಉ) ಸೌಮ್ಯ ಕೆ., ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನಮಂತಪ್ಪ ಎಚ್., ತಾಲ್ಲೂಕ ಯೋಜನಾಧಿಕಾರಿ ಆರ್.ಎಚ್ ನದಾಫ್, ತಾಲ್ಲೂಕ ಪಂಚಾಯತಿಯ ವ್ಯವಸ್ಥಾಪಕ ಸಂಗಮೇಶ ಎನ್.ಪಾಟೀಲ್ ಸೇರಿದಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲ್ಲೂಕ ಪಂಚಾಯತಿಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ. ದಾವಲ್ ಮಲ್ಲಿಕ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;