ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ಕನ್ನಡ ಭವನದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ರಕ್ಷಣಾ ವೇದಿಕೆ, ಪ್ರವೀಣ್ ಶೆಟ್ಟಿ ಬಣ ವತಿಯಿಂದ ಹಮ್ಮಿಕೊಂಡಿದ್ದ ಗುಡಿಹಳ್ಳಿ ನಾಗರಾಜ್ ರವರ ಶ್ರದ್ಧಾಂಜಲಿ ಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದರು. ಪತ್ರಕರ್ತ ಮತ್ತು ರಂಗಕರ್ಮಿ ಗುಡಿಹಳ್ಳಿ ನಾಗರಾಜ್ ರವರ ನಿಧನದಿಂದ ಮಾಧ್ಯಮ ಮತ್ತು ರಂಗಭೂಮಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷರಾದ ಡಿ ಓ ಮುರಾರ್ಜಿ ತಿಳಿಸಿದರು. ಆವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ ಗುಡಿಹಳ್ಳಿ ನಾಗರಾಜ್ ರವರು ಸುಮಾರು ವರ್ಷಗಳಿಂದ ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತ ಸಾಹಿತ್ಯ, ರಂಗಭೂಮಿ, ನಾಟಕ, ಮುಂತಾದ ಕ್ಷೇತ್ರಗಳಲ್ಲಿ ಗಣನೀಯವಾದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸಾಧನೆಗೈದ ಬಹುಮುಖ ಪ್ರತಿಭೆ ಯಾಗಿದ್ದರು ಇವರ ಬರಹ ಮತ್ತು ಸಮಾಜಮುಖಿ ಚಿಂತನೆ ಸಾಹಿತ್ಯ ಕೃಷಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನಾಡಿನ ಅನೇಕ ಪ್ರಶಸ್ತಿಗಳು ಹರಸಿ ಬಂದಿವೆ ಇವರ ನಿಧನದಿಂದಾಗಿ ಕನ್ನಡದ ಚಿಂತನಾ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ ಎಂದರು ಈ ಸಭೆಯಲ್ಲಿ ಕಸಾಪ ಗೌರವಾಧ್ಯಕ್ಷರಾದ ರಾಜಶೇಖರನಾಯಕ, ರಕ್ಷಣಾ ವೇದಿಕೆ ಅಧ್ಯಕ್ಷರಾದ ಚಿಕ್ಕೇರಹಳ್ಳಿ ಮಹೇಶ್, ಮರ್ಲಹಳ್ಳಿ ಪರಮೇಶಿ ಕಾರ್ಯದರ್ಶಿ ನೀಲರಾಜ್, ಸಿನಿಮಾ ನಟ ಭಟ್ರಹಳ್ಳಿ ಧನಂಜಯ, ಇನ್ನೂ ಮುಂತಾದವರು ಉಪಸ್ಥಿತರಿದ್ದರು….

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
