ನಾಣ್ಯಾಪುರ:-ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ನಾಣ್ಯಾಪುರ ಗ್ರಾಮದಲ್ಲಿ,ಹಲವು ದಶಕಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಿರಿಯರಿಗೆ.ವಂದೇ ಮಾತರಂ ಜಾಗೃತಿ ವೇದಿಕೆ ಅವರ ಜೀವಮಾನದ ಸಮಾಜ ಸೇವೆಯನ್ನ ಪರಿಗಣಿಸಿ,ಅವರನ್ನು ಗೌರವ ಸನ್ಮಾನದಿಂದ ಅಭಿನಂದಿಸಿ ಪ್ರಶಸ್ಥಿ ಪತ್ರಗಳನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಮಾತನಾಡಿದರು,
85ವಸಂತಗಳನ್ನು ಕಂಡಿರುವ ಗ್ರಾಮದ ಹಿರಿಯಜ್ಜಿ ನಾಣ್ಯಾಪುರ ಗ್ರಾಮದ ಪುರಕಲ್ ದುರುಗಮ್ಮ,ತನ್ನ ಆರು ದಶಕಗಳನ್ನು ಉಚಿತವಾಗಿ ಸೂಲಗಿತ್ತಿ ಸೇವಕಿಯಾಗಿ ಸಮಾಜ ಸೇವೆಯಿಂದ ಗರುತಿಸಿಕೊಂಡಿದ್ದಾರೆ.
65ವರ್ಷಗಳನ್ನು ಕಂಡಿರುವ ಗೊಲ್ಲರ ಚೆನ್ನಜ್ಜ ಮೂಲತಃ ಕೂಡ್ಲಿಗಿ ತಾಲೂಕಿನ ಶಿವಪುರ ಗೊಲ್ಲರಹಟ್ಟಿ ಯವರಾಗಿದ್ದು,ಇವರು ಕೆಲ ವರ್ಷಗಳಿಂದ ನಾಣ್ಯಾಪುರ ಗ್ರಾಮದಲ್ಲಿ ನೆಲೆಸಿದ್ದಾರೆ.ಇವರು ತಮ್ಮ ಬಹುತೇಕ ಆಯುಷ್ಯವನ್ನು ಉಚಿತ ನಾಟಿ ವೈದ್ಯ ಚಿಕಿತ್ಸೆಗಾಗಿ ಮೀಸಲಿರಿಸಿಕೊಂಡಿದ್ದಾರೆ,ಹತ್ತಾರು ಗಂಭೀರ ಕಾಯಿಲೆಗಳು ಸೇರಿದಂತೆ ನೂರಾರು ಖಾಯಿಲೆಗಳಿಗೆ ಉಚಿತವಾಗಿ ನಾಟಿ ಔಷಧಿ ನೀಡುತ್ತಿದ್ದಾರೆ.ಇವರಿಬ್ಬರೂ ನಾಣ್ಯಾಪುರ ಗ್ರಾಮದ ಬೆಲೆ ಕಟ್ಟದಂತಹ ಆಸ್ಥಿಯಾಗಿದ್ದಾರೆ ಎಂದು ವೇದಿಕೆ ಅಧ್ಯಕ್ಷ ವಿ.ಜಿ.ವೃಷಭೇಂದ್ರ ನುಡಿದಿದ್ದಾರೆ.

ಈ ಕಾರಣಕ್ಕೆ ಅವರನ್ನು ವೇದಿಕೆ ಅವರ ಸೇವಾ ಮನೋಭಾವಕ್ಕೆ ಗೌರವ ಸಲ್ಲಿಸಿ ಅವರಿಗೆ ಅಭಿನಂದನೆ ಸಲ್ಲಿಸಿದೆ,ಅವರಿಬ್ಬರಿಗೆ ವೇದಿಕೆ ವತಿಯಿಂದ ಜಿಲ್ಲಾಮಟ್ಟದ ಪ್ರಶಸ್ಥಿಪತ್ರವನ್ನು ನೀಡೋ ಮೂಲಕ ವೇದಿಕೆ ಜಿಲ್ಲಾಧ್ಯಕ್ಷ ವಿ.ಜಿ.ವೃಷಭೇಂದ್ರ ಸನ್ಮಾನ ಮಾಡಿದರು.ಈ ಸಂದರ್ಭದಲ್ಲಿ ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡ ಹಾಗೂ ಗ್ರಾಮದ ವಾಲ್ಮೀಕಿ ಯುವ ಮುಖಂಡ ದಿಬ್ಬದಳ್ಳಿ ಮಲ್ಲಪ್ಪ ಸೇರಿದಂತೆ,ಗ್ರಾಮದ ಹಿರಿಯರು ಮತ್ತು ಮಹಿಳೆಯರು ವಿವಿದ ಸಂಘ ಸಂಸ್ಥೆ ಮುಖಂಡರು ಇದ್ದರು…
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
