;

ಕೇಂದ್ರ ಸರ್ಕಾರದ ನಡೆಯ ಬಗ್ಗೆ ಕಂಡದ್ದು ಕಂಡ ಹಾಗೆ ….!!!!

ಕಂಡದ್ದು ಕಂಡ ಹಾಗೆ ….!!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು ಸ್ವಾತಂತ್ರ್ಯದಿನದಂದು ಧ್ವಜ ಹಾರಿಸುತ್ತಿದ್ದ ಕೆಂಪು ಕೋಟೆಯನ್ನು ಲೀಸ್ ಗೆ ಕೊಟ್ಟು ಭಾರತೀಯರ ಸ್ವಾಭಿಮಾನ ಅಡ ಇಟ್ಟದ್ದು ಕಂಡೋ ….!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
70 ವರ್ಷದಲ್ಲಿ 350 ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 7 ವರ್ಷದಲ್ಲಿ 875 ಆದದ್ದು ಕಂಡೋ

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಪ್ರಧಾನಿಯೊಬ್ಬರು ಹುಸಿ ಸುಳ್ಳುಗಳ ನಾಚಿಕೆ ಇಲ್ಲದೆ ಸುಳ್ಳುಗಳನ್ನು ಹೇಳುವುದು ಕಂಡೋ

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ನವಾಮಿ ಗಂಗಾ, ಗಂಗಾನದಿಯನ್ನು ಶುಚಿ ಮಾಡುತ್ತೇವೆ ಅಂತ ಹೇಳಿ ಕೋಟಿಗಟ್ಟಲೆ ಹಣ ಸುರಿದ ನಂತರವು ಅದೇ ನದಿಯಲ್ಲಿ ಲೆಕ್ಕವಿಲ್ಲದಷ್ಟು ಹೆಣಗಳು ತೇಲುವುದನ್ನು ಕಂಡೋ….!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಕರೊನ 2ನೆ ಅಲೆ, ಗಂಗಾ ನದಿಯಲ್ಲಿ ತೇಲಿದ ಶವಗಳನ್ನು ಎಣಿಸಲು ನಿಮಗೆ ಆಗಲೆ ಇಲ್ಲ, ಹಾಗಿದ್ದರೂ ಆ ರಾಜ್ಯಕ್ಕೆ ಅತ್ಯುತ್ತಮ ಕರೋನಾ ನಿರ್ವಹಿಸಿದ ರಾಜ್ಯ ಎಂದು ಗೌರವಿಸಿದ್ದು ಕಂಡೋ …!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು ಬ್ಯಾಂಕ್ ಗಳಲ್ಲಿ ಎಲ್ಲರಿಗೂ ಖಾತೆ ಎಂದು ಹಿಂದಿನ ಸರಕಾರದ ಯೋಜನೆಯನ್ನು ತನ್ನ ಸಾಧನೆಯೆಂದು ಹೇಳಿಕೊಂಡದ್ದು ಕಂಡೋ

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಬರಿ ಖಾತೆ ತೆರೆದರಷ್ಟೇ ಸಾಲದು ಎಂದು ಅದರಲ್ಲಿ ಮಿನಿಮಮ್ ಇಷ್ಟು ಹಣವಿಡಬೇಕೆಂದು ಕಾನೂನು ತಂದು ಬಡವರ ಹಣವನ್ನುಬ್ಯಾಂಕ್ಗಳಿಗೆ ರವಾನಿಸಿ ಅದನ್ನು ಕಾರ್ಪೊರೇಟ್ ಗಳಿಗೆ ಸಾಲ ನೀಡಿದ್ದು ಕಂಡೋ……!!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಹಾಗೆ ಮಿನಿಮಮ್ ಹಣ ಇಡದವರ ಖಾತೆಗೆ ಜುಲ್ಮಾನೆ ಹಾಕಿ ಕೋಟಿ ಕೋಟಿ ಜನರ ಹಣವನ್ನು ದೋಚಿದ್ದು ಕಂಡೋ……!!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ATM ಗಳಲ್ಲಿ ಹೆಚ್ಚುವರಿ ಬಾರಿ ಹಣ ತೆಗೆದರೆ ಅದಕ್ಕೂ ಶುಲ್ಕ ಹಾಕಿದ್ದು ಕಂಡೋ

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು ಬಯಲು ಶೌಚ ಮುಕ್ತ ಮಾಡುವೆನೆಂದು ತೆರಿಗೆದಾರರಿಂದ ಹೆಚ್ಚುವರಿ ಸೆಸ್ ವಸೂಲಿ ಮಾಡಿದ್ದನ್ನು ಕಂಡೋ, ಅದರ credit ಅನ್ನು ಸೆಸ್ ತೆರಿಗೆ ಕಟ್ಟಿದವರಿಗೆ ಕೊಡದೆ ತನ್ನ ಸಾಧನೆ ಎಂದು ಕೊಚ್ಚಿಕೊಂಡ ಪ್ರಧಾನಿಯನ್ನು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಚಹ ಮಾರುತ್ತಿದ್ದೆ ಎಂದು ಹೇಳಿ ದೇಶದ ಪ್ರತಿಷ್ಠಿತ ಕಾರ್ಖಾನೆಗಳನ್ನು ಮಾರಿದ್ದು

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಕರೋನ ನಿರೋಧಕ ಲಸಿಕೆಯನ್ನು ಉಚಿತವಾಗಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಮೇಲೆ ಉಚಿತವಾಗಿ ನೀಡಿ ಆ ಸರ್ಟಿಫಿಕೇಟ್ ಮೇಲೆ ತನ್ನ ಫೋಟೊ ಹಾಕಿಸಿಕೊಂಡವರನ್ನು ಕಂಡೋ…..!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಸಾಲು ಮರದ ತಿಮ್ಮಕ್ಕನಂತವರ ಕೇಲಸಕ್ಕೆ ತಾವು ಲಾಭ ಪಡೆಯುವುದುನ್ನು ಕಂಡೋ…!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ವಿಶೇಷ ವ್ಯಕ್ತಿಗಳ ವಾಹನಗಳಿಂದ ಕೆಂಪು ದೀಪ ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದರೂ ಸಹ ಪಕ್ಷಾಂತರಿಗಳಿಗೆ ತನ್ನ ಶಾಸಕರಿಗೆ ಜೀರೋ ಟ್ರಾಫಿಕ್ ಮಾಡಿದ್ದು ಕಂಡೋ….!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ನೇಪಾಳ, ಭೂತಾನ್ ಗಳಂತಹ ನೆರೆಯ ಸಣ್ಣ ರಾಷ್ಟ್ರಗಳು ಭಾರತವನ್ನು ಗೌರವಿಸುತ್ತಿದ್ದವರು ಈಗ ತೊಡೆ ತಟ್ಟುವ ಹಂತಕ್ಕೆ ತಲುಪಿದ್ದು ಕಂಡೋ….!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು ಜನರಿಗೆ ತನ್ನ whatsapp university ಮತ್ತು ಮೀಡಿಯಾದಿಂದ ಚೀನಾ ದೇಶವನ್ನು ವಿರೋಧಿಸುವ ಹಾಗೆ ಪ್ರಚಾರ ಮಾಡಿ ಅದರಿಂದಲೇ ಸ್ಟ್ಯಾಚು ಆಫ್ ಯೂನಿಟಿ ಪ್ರತಿಮೆ ಕಟ್ಟಿಸಿದ್ದು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಚೀನ ಭಾರತದ ನೆಲವನ್ನು ಆಕ್ರಮಿಸಿದಾಗ ಜನರಿಗೆ ಸತ್ಯ ಹೇಳದೆ ನುಣುಚಿಕೊಂಡದ್ದು ಕಂಡೋ…!!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಜನರಿಗೆ ಪಾಕಿಸ್ತಾನದ ವಿರುದ್ಧ ಭಾವನೆ ತುಂಬಿ ತಾನು ಅಲ್ಲಿ ಹೋಗಿ ಬಿರಿಯಾನಿ ತಿಂದದ್ದು ಕಂಡೋ…..!!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
2019ರ ಎಲೆಕ್ಷನ್ನಿನ ಮೋದಲು, ಪೂಲ್ವಾಮದಲ್ಲಿ ನಡೆದ ನಮ್ಮ ಸೈನಿಕರ ಭಯಂಕರ ಮಾರಣ ಹೋಮದ ಜೊತೆಗೆ ಹುಟ್ಟಿಕೊಂಡಪ್ರಶ್ನೆಗಳಿಗೆ ತನಿಖೆ ಮಾಡಿ ಇಂದು ಸಹ ಉತ್ತರದಿರುವುದನ್ನು ಕಂಡೋ….!!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ನಮ್ಮ ರಕ್ಷಣಾ ವ್ಯವಸ್ಥೆಗೆ ರಫೆಲ್ ಖರೀದಿಯ ಫೈಲ್ ಕಳುವು ಮಾಡಿದವರಿಗೆ ಶಿಕ್ಷೆ ಆಗದೇ ಇದ್ದದ್ದು ಕಂಡೋ….!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಸೈನ್ಯಕ್ಕೆ ಆಧುನಿಕ ಶಸ್ತ್ರ ನೀಡುತ್ತಿದ್ದೇವೆ ಅಂತ ಹೇಳಿದರೂ ಸ ನಮ್ಮ ನೂರಾರು ಸೈನಿಕರು ಉಗ್ರರ ಗುಂಡಿಗೆ ಬಲಿಯಾಗುತ್ತಿರುವುದನ್ನು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ರಫೇಲ್ ಖರೀದಿಯಲ್ಲಿ ಅಕ್ರಮವಿರಬಹುದು ಎಂದು ಫ್ರಾನ್ಸ್ ತನಿಖೆಗೆ ಆದೇಶ ನೀಡಿದರೂ ಸಹ ತುಟಿ ಬಿಚ್ಚದ ಸರಕಾರವನ್ನು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ದಿಲ್ಲಿಯ ತಬ್ಬಲಿಗಿಗಳ ಹೇಸರಲ್ಲಿ ಮಾಧ್ಯಮಗಳ ಮುಖಾಂತರ ದೇಶಾದ್ಯಂತ ಕರೋನ ಬಗ್ಗೆ, ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದು, ಕುಂಭಮೇಳ ಗಳಂತಹ ಕಾರ್ಯಕ್ಕೆ ಅನುಮತಿ ನೀಡಿ ಸ್ವಧರ್ಮ ಪಕ್ಷಪಾತ ಮಾಡಿದ್ದು ಕಂಡೋ…..!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಕರೋನಾ ಸಮಯದಲ್ಲಿ ಸಹಸ್ರಾರು ಜನ ಬೀದಿಯಲ್ಲಿ ನಡೆದು ಹೋಗುವಾಗ ಅವರಿಗೂ ನಮಗೂ ಸಂಬಂಧವಿಲ್ಲ ಎಂದು ಟಿವಿ ನೋಡುತ್ತಾ ಕುಳಿತ್ತಿದ್ದ ನಿರ್ದಯಿಗಳನ್ನು ಕಂಡೋ….!!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಸಿಎಎ ಹೇಸರಿನಲ್ಲಿ ಅಸ್ಸಾಂಮನಲ್ಲಿ ನಡೆಯುತ್ತಿರು ಅನ್ಯಾಯ ಅಕ್ರಮಗಳನ್ನು ಮಾರೆಮಾಚಲು ಪ್ರಯತ್ನಿಸಿದನ್ನು ಕಂಡೋ..????

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ರಾಮ ಮಂದಿರ ನಿರ್ಮಾಣಕ್ಕೆ ಸುಪ್ರಿಂ ಕೋರ್ಟಿನ ನ್ಯಾಯಾಧಿಶರಿಗೆ ಹೇಣ್ಣಿನ ಹೇಸರಲ್ಲಿ ಬ್ಲ್ಯಾಕ್ ಮೆಲ್ ಮಾಡಿ ಅವರಿಗೆ ಪಾರ್ಲಿಮೆಂಟ್ ನಲ್ಲಿ ಸ್ಥಾನ ಒದಗಿಸಿದ್ದು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ರಾಮಮಂದಿರ ನಿರ್ಮಾಣ ಸಮಯದಲ್ಲಿ ಸಿಕ್ಕ ಬುದ್ಧನ ನಾಡು ಎನ್ನುವ ಕುರುಹುಗಳನ್ನು ಕಡೆಗಣಿಸಿ, ಹೊರ ದೇಶಗಳಲ್ಲಿ “I am from land of Budha” ಅಂತ ಹೇಳಿಕೊಂಡ ನಾಚಿಕೆಯಿಲ್ಲದ ಪ್ರಧಾನಿಯನ್ನು ಕಂಡೋ….!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ರಾಮ ಮಂದಿರ ನಿರ್ಮಾಣ ಮಾಡುವೆವು ಅಂತಹೇಳಿ ಕೊಟಿಗಟ್ಟಲೆ ಬಡ ಭಾರತಿಯರ ಹಣ ಖರ್ಚು ಮಾಡಿ, ಅದರಿಂದ ಪೂಜಾರಿಗಳಿಗೆ ಮಾತ್ರ ವರಮಾನ ಬರುವಂತೆ ಮಾಡುವುದನ್ನು ಸುತ್ತ ಮುತ್ತಲಿನ ಜಾಗ ಖರೀದಿಯಲ್ಲಿ ಅಕ್ರಮ ನಡೆದರು ಮೂಕರಾಗಿರುವ ಸರಕಾರಗಳನ್ನು ಕಂಡೋ….???

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಆರ್ಟಿಕಲ್ 𝟑𝟕𝟎 ರದ್ದತ್ತಯಿಂದ ಲಾಭವಾದದ್ದು ಭಾರತದ ಎರಡೆ ಎರಡು ಮನೆತನಗಳಿಗೆ ಮಾತ್ರ ಎಂಬುದನ್ನು ಮುಚ್ಚಿಟ್ಟ ಸರಕಾರವನ್ನು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಚೀನಾವನ್ನು ಹಿಮ್ಮೆಟ್ಟಿಸುವುದು ಹೇಗೆಂದು ಇಂದಿರಾ ಹಾಗು ರಾಜಿವ್ ಗಾಂಧಿಯವರ ಕಾಲದ ಭಾರತದ ಇತಿಹಾಸವನ್ನು ಸರಕಾರ ಕಲಿಯದೇ ಇದ್ದದ್ದು ಕಂಡೋ…!!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಪಾಕಿಸ್ತಾನಕ್ಕೆ ಅವರದೇ ನೆಲದಲ್ಲಿ ನುಗ್ಗಿ ಹೊಡೆಯುವುದು ಈಗೀನದಲ್ಲ ಅದು ಇದು, ಸುಮಾರು ವರ್ಷಗಳಿಂದ ನಡೆದು ಬಂದಿರುವ ಕೆಲಸ, ಇದಕ್ಕಾಗಿ ನಮ್ಮ ಸೈನಿಕರು ತಮ್ಮ ಜೀವ ಕೊಡುತ್ತಾರೆ, ಅದು ನನಮ್ಮ ಸಾಧನೆ ಎಂದು ಹೇಳಿ ಕೊಳ್ಳುತ್ತಿರುವುದನ್ನು ಕಂಡೋ…..!!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ನಮ್ಮ ವಿಜ್ಞಾನಿಗಳ ಪರಿಶ್ರಮದಿಂದ ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಯಾಗುವುದಕ್ಕೆ ಕಾರಣವಾದ ಸಂಸ್ಥೆಯನ್ನು ಕಟ್ಟಿದ ಹಿಂದಿನ ಪ್ರಧಾನ ಮಂತ್ರಿಗಳಲು courtesy ಗೂ ಸಹ ನೆನೆಯದೆ ನನ್ನ ಸಾಧನೆ ಎಂದು ಹೇಳಿಕೊಂಡ ಪ್ರಧಾನಿಯವರನ್ನು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ವಿಶ್ವದಲ್ಲಿ ಯೋಗ ಸಾಧನೆ ಬುದ್ಧನ ಕಾಲದಿಂದ ನಡೆದು ಬಂದಿದೆ ಎಂಬ ಇತಿಹಾಸದ ಅಲ್ಪ ಜ್ಞಾನವು ಇಲ್ಲದ ಸರಕಾರವನ್ನು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಯೋಗವನ್ನು ಪ್ರಚಾರ ಮಾಡಲು ತನ್ನ ಆತ್ಮೀಯನಿಗೆ ಲಾಭ ಮಾಡಿ ಕೊಟ್ಟವರನ್ನು ಕಂಡೋ…..!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ರೈತರ ಖಾತೆಗೆ ವಾರ್ಷಿಕ 𝟔𝟎𝟎𝟎 ಹಾಕುತ್ತೀನಿ ಎಂದು ರಸಗೊಬ್ಬರಗಳ ಬೆಲೆ ಏರಿಸಿದ ಸರಕಾರವನ್ನು ಕಂಡೋ….!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಬಹುಸಂಖ್ಯಾತ ಬಹುಜನರಿಗೆ ಹಾಗು ಹಿಂದುಳಿದವರಿಗೆ ಅನ್ಯಾಯ ಆಗುವ ಹಾಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿ ಅದನ್ನು ತರಾತುರಿಯಲ್ಲಿ ಜಾರಿಗಳಿಸುತ್ತಿರುವ ಸರಕಾರವನ್ನು ಕಂಡೋ…..!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಹೊಸ ಕೃಷಿ ಕಾನೂನಿನ ವಿರುದ್ಧ ದಿಲ್ಲಿಯಲ್ಲಿ ಕೃಷಿಕರು ಒಂದು ವರ್ಷದಿಂದ ನಡೆಸುತ್ತಿರು ಸ್ಟ್ರಕ್ ಅಮಾನವಿಯರಾದ ಸರಕಾರನ್ನು ಮತ್ತು ಅದನ್ನು ಹೊಡೆಯಲು ಪಿತೂರ ಮಾಡುವಂತಹ ನೀಚ ಸರಕಾರವನ್ನು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಕರೋನಾಗೆ ಲಸಿಕೆ ಕಂಡು ಹಿಡಿದ ವಿಜ್ಞಾನಿಗಳನ್ನು ಗೌರವಿಸದೆ ಅದನ್ನು ತನ್ನ ಸಾಧನ ಎಂದು ಬಿಂಬಿಸಿಕೊಂಡ ತೆವಲುಗಾರ ಪ್ರಧಾನಿಯನ್ನು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಕೇರಳದಲ್ಲಿ ಅತೀ ವೃಷ್ಟಿ ಆದಾಗ, ಸಹಾಯ ಹಸ್ತ ನೀಡದೆ, ಕೊಲ್ಲಿ ರಾಷ್ಟ್ರಗಳು ಸಹಾಯ ಮಾಡಲು ಮುಂದೆ ಬಂದರೆ, ಅದಕ್ಕೂ ಆಸ್ಪದ ಕೊಡದೆ ತನ್ನ ನಿಜ ಬುದ್ದಿ ತೋರಿಸಿದವರನ್ನು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು ಆತ್ಮ‌ ನಿರ್ಭರ ಅಂತ ಹೇಳಿ ಹಂತ ಹಂತವಾಗಿ ಕಾರ್ಖಾನೆಗಳನ್ನು ಮುಚ್ಚಿ ಆತ್ಮ ಬರ್ಭರ ಮಾಡಿದ ಆಡಳಿತವನ್ನು ಕಂಡೋ….!!!?

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಲಾಭದಲ್ಲಿ ಇದ್ದ ಬ್ಯಾಂಕ್ ಗಳನ್ನು ವಿಲೀನ ಮಾಡಿ ಇವಾಗ monopoly ಮಾಡಿ, monopoly ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನುವುದನ್ನು ಅರ್ಥ ಮಾಡಿಕೊಳ್ಳದ ಸರಕಾರವನ್ನು ಕಂಡೋ….!!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ದೇಶದಲ್ಲಿ ರಸ್ತೆ ಸುರಕ್ಷತೆಗೆ ಆಧ್ಯತೆ ನೀಡದೆ ಕೇವಲ ಟೋಲ್ ಶುಲ್ಕ ಮತ್ತು ಸಂಚಾರ ಕಾನೂನು ಉಲ್ಲಂಘನೆಗಳ ದಂಡ ಹೆಚ್ಚಿಸಿ ಸಾಮಾನ್ಯ ಜನರ ರಕ್ತ ಹೀರುವ ಆಡಳಿತವನ್ನು ಕಂಡೋ….!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ಬಹುಜನರ ಓಡಾಟದ ಜೀವನಾಡಿಯಾಗಿದ್ದ ರೈಲ್ವೆಯನ್ನು ಹಂತ ಹಂತವಾಗಿ ಖಾಸಗಿಯವರ ಮಡಿಲಿಗೆ ಹಾಕಿ ಜನರ ಬದುಕು ಬರ್ಬಾತ್ತು ಮಾಡಲು ಹೊರಟಿರುವ ನಾಯಕರನ್ನು ಕಂಡೋ…!!!*

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
*ನೋಟ್ ಬ್ಯಾನ್ ಮಾಡಿ ಕಪ್ಪುಹಣ ನಿಲ್ಲಿಸುವೆವು ಅಂತ ಹೇಳಿ, ಅದರ ಬೆನ್ನಲ್ಲೆ ನೂರಾರು ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡಿದಾಗ ಅದನ್ನು ಕಂಡು ಕಾಣದ ಹಾಗೆ ಇದ್ದ ಪ್ರಾಮಾಣಿಕರನ್ನು ಕಂಡೋ…!!!

ಪೆಟ್ರೋಲ್ ನೂರಾದ್ದುದರ ಜೊತೆಗೆ ನಾವು ಕಂಡದ್ದು
ನೋಟ್ ಬ್ಯಾನ್ ಮಾಡಿ ಕಪ್ಪು ಹಣ ನಿಲ್ಲಿಸುವೆವು ಎಂದು ಸಹಸ್ರಾರು ಸಣ್ಣ ಕೈಗಾರಿಕೆಗಳಿಗೆ ಬೀಗ ಜಡಿಸಿ ಕೂಲಿ ಕಾರ್ಮಿಕರನ್ನು ಬೀದಿಗೆ ತಳ್ಳಿದ ಮಹಾನುಭವರನ್ನು ಕಂಡೋ…!!!

ಎದ್ದೇಳಿ ಭಾರತೀಯರೆ, ನಮ್ಮನ್ನು ಭಾವನಾತ್ಮಕವಾಗಿ ಮರಳು ಮಾಡಿ ನಮ್ಮನ್ನು ಮುರ್ಖರನ್ನಾಗಿಸುತ್ತಿದ್ದಾರೆ ….. ಜಾಗೃತರಾಗಿ..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *