;

ಮೊಳಕಾಲ್ಮೂರು: ಆಧಾರ್ ನೋಂದಣಿ ಮತ್ತು ತಿದ್ದುಪಡಿಗಾಗಿ ಜನರು ಪರದಾಡುವ ಸ್ಥಿತಿ.!!

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕು ಕಚೇರಿಯಲ್ಲಿ ಆಧಾರ ಕಾರ್ಡ್ ಮಾಡುವುದು ಕಳೆದ ತಿಂಗಳಿನಿಂದಲೂ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಆಪೇಕ್ಷಿತರು ಅರ್ಜಿ ಸಲ್ಲಿಸುವುದು ಹಾಗೂ ತಿದ್ದುಪಡಿ ಮಾಡಿಸುವುದೇ ಸವಾಲಾಗಿದೆ! ಯಾವುದೇ ಗ್ರಾಮದಲ್ಲಿ ಆಧಾರ ಕಾರ್ಡ್ ಮಾಡದಿದ್ದರೂ ಪಟ್ಟಣದಲ್ಲಿ ಗ್ಯಾರೆಂಟಿಯಾಗಿ ಆರ್ಜಿ ಪಡೆಯುತ್ತಾರೆ, ತಿದ್ದುಪಡಿ ಮಾಡಿಕೊಡುತ್ತಾರೆ ಎನ್ನುವ ಆಪೇಕ್ಷಿತರ ನಂಬಿಕೆ ಕಳೆದ ತಿಂಗಳಿನಿಂದಲೂ ಬೊರಲು ಬಿದ್ದಕಾರಣ ಆಧಾರ ಕಾರ್ಡ್ ಆಪೇಕ್ಷಿತರು ಬೆಳ್ಳಂಬೆಳಗ್ಗೆ ನೂರಾರು ಸಂಖ್ಯೆಯಲ್ಲಿ ಪಟ್ಟಣದ ಪಿಕೆಜಿಬಿ ಹಾಗೂ ಎಸ್‌ಬಿಐ ಬ್ಯಾಂಕ್ ಮುಂದೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ವರ್ಷದ ಹಿಂದೆ ತರಬೇತಿ ಕೊಟ್ಟು, ಹೊಸ ಕಿಟ್ ನೀಡಿ ಕಡ್ಡಾಯವಾಗಿ ಆಧಾರ ಕಾರ್ಡ್ ಮಾಡಿಕೊಡಬೇಕು ಎನ್ನುವ ಜಿಲ್ಲಾಧಿಕಾರಿ ಆದೇಶಕ್ಕೂ ಕಿಮ್ಮತ್ತು ನೀಡದ ಸ್ಥಳೀಯ ಗ್ರಾ.ಪಂ ಪಿಡಿಒಗಳ ಆಡಳಿತ ವೈಖರಿಯಿಂದ ಆಧಾರ್ ಕಿಟ್ ಗಳು ಧೂಳು ಹಿಡಿಯುತ್ತಿವೆ. ಆದರೆ ಪಟ್ಟಣದ ಅಂಚೆ ಇಲಾಖೆ ಅಧಿಕಾರಿಗಳು ಮಾತ್ರ ನಮಗೆ ಸಿಬ್ಬಂದಿ ಕೊರತೆ ಎಂದು ಹರಕೆ ಉತ್ತರಕೊಟ್ಟು ಮಧ್ಯಾಹ್ನದ ನಂತರ ಬಂದವರಿಗೆ ನಾವು ಆಧಾರ ಕಾರ್ಡ್ ಮಾಡಿಕೊಡುತ್ತಿದ್ದೇವೆ ಎಂಬ ಸಬೂಬು ಹೇಳುತ್ತಲೇ ಇದ್ದಾರೆ. ತಾಲೂಕು ಆಡಳಿತದ ಆಧಾರ ಕಾರ್ಡ್ ಕೇಂದ್ರದ ಕಂಪ್ಯೂಟರ್ ಹಾಳಾಗಿ ತಿಂಗಳು ಕಳೆಯುತ್ತಿದೆ. ಇದು ಸರಿಹೋಗಲು ಇನ್ನೂ ಹತ್ತು ದಿನವಾದರೂ ಬೇಕಾಗುತ್ತದೆ. ಕಳೆದ ಏಳೆಂಟು ವರ್ಷದ ಹಿಂದೆ ಸರಬರಾಜಾಗಿದ್ದ ಈ ಕಂಪ್ಯೂಟರ್‌ಗೆ ಆಧಾರ ಸಾಫ್ಟ್‌ವೇರ್ ಸಮೀರ್ ಮಾಡದ ಕಾರಣ ಈ ಸಮಸ್ಯೆ ಆಗಾಗ್ಗೆ ಕಾಣುತ್ತಲೇ ಇರುತ್ತದೆ. ಕಂಪ್ಯೂಟರ್ ಸಮಸ್ಯೆ ಕಂಡಾಗೆಲ್ಲ ಹದಿನೈದು ಇಪ್ಪತ್ತು ದಿನ ಆಧಾರ ಕಾರ್ಡ್ ಕೆಲಸ ಸ್ಥಗಿತವಾಗುತ್ತದೆ. ಇದು ಹೊಸ ಸಿಸ್ಟಮ್ ನೀಡುವವರೆಗೂ ಚಾಲ್ತಿಯಲ್ಲಿರುತ್ತದೆ. ತಿಂಗಳಿನಿಂದಲೂ ಪಟ್ಟಣಕ್ಕೆ ಆಗಮಿಸುವ ತಾಲೂಕಿನ ನಾನಾ ಗ್ರಾಮಗಳ ಆಧಾರ ಕಾರ್ಡ್ ಆಪೇಕ್ಷಿತರು ಈಗಾಗಲೇ ತಾಲೂಕು ಕಚೇರಿಗೆ ತೆರಳುವುದನ್ನು ಕೈಬಿಟ್ಟು ಏಕೆಜಿಬಿ ಹಾಗೂ ಎಸ್‌ಬಿಐ ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಲ್ಲಲು ತೆರಳುತ್ತಿದ್ದಾರೆ. ಈ ಎರಡೂ ಕಡೆ ದಿನವೊಂದಕ್ಕೆ 25 ರಂತೆ ಲೆಕ್ಕಹಾಕಿ ವಾರದವರೆಗೂ ಒಂದೇಭಾರಿ ಟೋಕನ್ ನೀಡುತ್ತಾರೆ. ಇದರ ಮಧ್ಯೆ ಹೋದವರಿಗೆ 5 ಟೋಕನ್ ದೊರೆಯುವರಿಗೆ ಯಾವುದೇ ಕಾರಣಕ್ಕೂ ಆಧಾರ ಕಾರ್ಡ್ ಮಾಡಿಸಲು ಸಾಧ್ಯವಿಲ್ಲ ಎನ್ನುವಂತಾಗಿದೆ..

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;