;

ಸಿಂಧನೂರು: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ “

ಸಿಂಧನೂರು: “ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ”

ಕುನ್ನಟಗಿ ಹೋಬಳಿಯ ಭೂತಲದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಾಪುರು ಗ್ರಾಮದಲ್ಲಿ ಇಂದು “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ “ಎಂಬ ಶೀರ್ಷಿಕೆಯಡಿ ಮಾನ್ಯ ತಹಶಿಲ್ದಾರ್ ಮಂಜುನಾಥ ರವರು ಚಾಲನೆ ನೀಡಿದರು. ಗ್ರಾಮದ ಅಂಜನೇಯ ದೇವಸ್ಥಾನದ ಹತ್ತಿರ ಗ್ರಾಮದ ಜನರಿಂದ ತಹಸೀಲ್ದಾರ್ ಮಂಜುನಾಥ್ ಅವರನ್ನು ಸ್ವಾಗತಿಸಿದರು.
ಕಂದಾಯ ಇಲಾಖೆ ಆರಂಭಿಸಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಲ್ಲಾಪುರ ಗ್ರಾಮದಲ್ಲಿ 25 ಅರ್ಜಿಗಳನ್ನು ಸ್ವೀಕರಿಸಿದ್ದು, ಈ ಪೈಕಿ ಕೆಲವು ಅರ್ಜಿಗಳನ್ನು ಸ್ಥಳದಲ್ಲಿ ಇತ್ಯರ್ಥ ಪಡಿಸಲಾಯಿತು.
ಹಳ್ಳಿಗಳ ಜನರು ಸಣ್ಣಪುಟ್ಟ ಸಮಸ್ಯೆಗಳಿಗೂ ಜಿಲ್ಲಾಧಿಕಾರಿ, ತಹಸಿಲ್ದಾರ್ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಇಲಾಖೆ ಈ ಕಾರ್ಯಕ್ರಮ ರೂಪಿಸಲಾಗಿದೆ. ಪಿಂಚಣಿ, ಪೌತಿ ಖಾತೆ, ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು, ಪೋಡಿ ಪ್ರಕರಣ,ಇನ್ನೂ ಮುಂತಾದ ಅರ್ಜಿಗಳನ್ನು ಕಂದಾಯ ಇಲಾಖೆ ಇತ್ಯರ್ಥಗೊಳಿಸ ಲಾಗುತ್ತದೆ ಎಂದು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು.

ಗ್ರಾಮದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಕಾಲೋನಿಗಳಿಗೆ ಪಾದಯಾತ್ರೆ ನಡೆಸಿ ಮನೆಮನೆಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದ ತಹಸೀಲ್ದಾರ ಮಂಜುನಾಥ ರವರು ಕುಂದುಕೊರತೆ ಅಹವಾಲು ಸ್ವೀಕರಿಸಿದರು.
ಗ್ರಾಮದಲ್ಲಿ ಮಸೀದಿಗೆ ಭೇಟಿ ನೀಡಿ ಕೋರೊನಾ ಎಂಬ ಮಹಾಮಾರಿ ಮೂರನೇ ಅಲೆ ಪ್ರಾರಂಭವಾಗಿದ್ದು ಸರಕಾರದ ನಿಯಮಗಳನ್ನು ಪಾಲಿಸಿ, ಅಲಾಹಿ ದೇವರುಗಳನ್ನು ಮಸೀದಿಗಳಲ್ಲಿ ಇರಿಸಿ, ಅಲಾಹಿ ಕುಣಿಗಳನ್ನು ತೆಗೆಯಬೇಡಿ, ಸರಳವಾಗಿ ಆಚರಣೆ ಮಾಡಿರಿ, ಎಲ್ಲರೂ ಮಾಸ್ಕ್ ಧರಿಸಿ, ಕೊರೊನಾ ಲಸಿಕೆ ಪ್ರತಿಯೊಬ್ಬರೂ ಹಾಕಿಸಿಕೊಳ್ಳಿ ಎಂದು ಗ್ರಾಮಸ್ಥರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್ ಮೈನುದ್ದಿನ್, ದೇವರಾಜ್ ( ವಿ.ಎ. ಆರ್.ಐ ) ಶ್ರೀನಿವಾಸ್, ಶರಣು ಕುಮಾರ್, ರೇಷ್ಮಾ, ವೀರೇಶ್, ಆನಂದ್ , ಗ್ರಾಮ ಪಂಚಾಯತ್ ಸದಸ್ಯರಾದ ಯಮನಪ್ಪ, ಲಕ್ಷ್ಮಿ ವೆಂಕಟೇಶ್,ಗ್ರಾಮದಹಿರಿಯರಾದ ಮಲ್ಲಿಕಾರ್ಜುನಗೌಡ ಕಾರಿಗನೂರು,ರೆಡ್ಡಪ್ಪ ಗೌಡ ಜುಲದ್, ರಾಜಶೇಖರ್ ಕೆಸರಟ್ಟಿ ಮಾ.ಗ್ರಾ.ಪಂ.ಸ, ಮಹಾಂಕಾಳಿಪ್ಪ, ವೆಂಕೋಬ ನಾಯಕ್ ,ಅಂಬಣ್ಣ ಹರಿಜನ್, ಬೆಟ್ಟಪ್ಪ ಕುರುಬರು, ಹನುಮಂತಪ್ಪ ನಾಯಕ್, ವಿರುಪಾಕ್ಷಿ ವಾಲೇಕರ್ ಇನ್ನು ಮುಂತಾದವರು ಇದ್ದರು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;