ಮಹಿಳೆಯರು ಹಾಗೂ ಮಕ್ಕಳೊಂದಿಗೆ ಬೆರೆತು ನಾಗರ ಪಂಚಮಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ ವೀಣಾಮಹಾಂತೇಶ್!!
ಹರಪನಹಳ್ಳಿ ಕ್ಷೇತ್ರದ ಜನನಾಯಕಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ, ಕ್ಷೇತ್ರದ ಜನತೆಯೊಂದಿಗೆ ಸರ್ವ ಕಾರ್ಯದಲ್ಲಿ ಬೆರೆಯುವ ಕರುಣಾಮಯಿ ಶ್ರೀಮತಿಎಂ ಪಿ ವೀಣಾ ಮಹಾಂತೇಶ್ಅವರು ಇಂದು ನಾಗರ ಪಂಚಮಿ ಹಬ್ಬದ ಪ್ರಯುಕ್ತ ಕ್ಷೇತ್ರ ವ್ಯಾಪ್ತಿಯ ಚಿಗಟೇರಿ ಗ್ರಾಮಕ್ಕೆ ಭೇಟಿನೀಡಿ ಗ್ರಾಮದ ನಾಗದೇವರ ದೇವಸ್ಥಾನಕ್ಕೆ ಸ್ಥಳೀಯ ಮಹಿಳೆಯರು ಹಾಗೂ ಮಕ್ಕಳೊಂದಿಗೆ ಬೆರೆತು ನಾಗಪ್ಪನಿಗೆ ಹಾಲೆರೆಯುವ ಮೂಲಕ ಹಬ್ಬವನ್ನು ಆಚರಿಸಿ ಗ್ರಾಮಸ್ಥರ ಅಭಿಮಾನಕ್ಕೆ ಪಾತ್ರವಾದರು.
ಪ್ರತಿ ವರ್ಷ ತಮ್ಮ ಕುಟುಂಬ ಸದಸ್ಯರೊಡನೆ ಹಬ್ಬವನ್ಬು ಆಚರಿಸುವ ರೂಢಿಯಲ್ಲಿದ್ದ ಜನತೆಗೆ ಎಂ.ಪಿ ವೀಣಾಕ್ಕ ಅವರ ಆಗಮನ ಹರ್ಷವನ್ನುಂಟು ಮಾಡಿತ್ತು. ಇಂತಹ ಸಡಗರದಲ್ಲಿ ನಮ್ಮೊಂದಿಗೆ ಪಾಲ್ಗೊಂಡು ಹಬ್ಬದ ಕಳೆಯನ್ನು ಹೆಚ್ಚಿಸಿದ ಜನನಾಯಕಿ ವೀಣಕ್ಕನವರ ಕಾರ್ಯ ಶ್ಲಾಘನೀಯ, ಎಂದಿಗೂ ನಮ್ಮೊಂದಿಗೆ ಬೆರೆತು ನಡೆಯುವ ಸರಳ ಮನಸ್ಥಿತಿ ಮೆಚ್ಚುವಂತದ್ದು ಎನ್ನುವ ಮಾತುಗಳನ್ನು ಗ್ರಾಮಸ್ಥರು ಹಾಡಿಹೊಗಳಿ ಶ್ಲಾಘಿಸಿದರು .
ಈ ಸಂದರ್ಭದಲ್ಲಿ ಚಿಗಟೇರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ರೇಕಮ್ಮ ಮತ್ತು ಬಳ್ಳಾರಿ ಜಿಲ್ಲಾ ಸೋನಿಯಾಗಾಂಧಿ ಬಿ ಗ್ರೇಟ್ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ಗಾಯತ್ರಿ ದೇವಿ ಹಾಗೂ ಚಿಗಟೇರಿ ಗ್ರಾಮದ ಕಾಂಗ್ರೆಸ್ ಮುಖಂಡರುಗಳಾದ ಜ್ಯೋತೆಪ್ಪ ಶ್ರೀ ಮತ್ತಿಹಳ್ಳಿ ಗುರುಸಿದ್ದಪ್ಪ ಶ್ರೀ ಮುದಜ್ಜಿ ಶ್ರೀ ಸಾಗರ್ ಪಾಟೀಲ್ ಶ್ರೀ ಚಂದ್ರಪ್ಪ ಶ್ರೀ ಬಡಿಗೇರ್ ಈರಣ್ಣ ಶ್ರೀ ಗೋಣೆಪ್ಪಶ್ರೀ ವಿಜಯಕುಮಾರ್ ಶ್ರೀ ರವಿಕುಮಾರ್ ಶ್ರೀ ತೀರ್ಥ ರಾಜ್ಶ್ರೀ ಮತ್ತೆ ಹಳ್ಳಿ ರಮೇಶ್ ಹಾಗೂ ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ದಾದಾಪೀರ್ ಮಕರಬ್ಬಿ ಮತ್ತು ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಸಿ…
ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
