ಸೈನಿಕರ ತೆರಿಗೆ ನೀತಿ ಜಾರಿಗಾಗಿ ಆಗ್ರಹಿಸಿ ಸತ್ಯಾಗ್ರಹ
ಕೂಡ್ಲಿಗಿ :ಲೋಕಿಕೆರೆಯಿಂದ ಏಕವ್ಯಕ್ತಿಯಿಂದ ಸತ್ಯಾಗ್ರಕ್ಕೆ ಆರಂಭಕ್ಕೆಚಾಲನೆದೇಶಕಾಯೊ ಸೈನಿಕರಿಗೆ ಅರ್ಥಿಕಶಕ್ತಿ ತುಂಬಲು ಮತ್ತು ಅವರ ಕುಟುಂಬಗಳ ನೆರವಿಗೆಗಾಗಿ ನಿಧಿ ಸಂಗ್ರಹವಾಗುವಂತಹ ಸೈನಿಕ ತೆರಿಗೆ ನೀತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುವಂತೆ ಆಗ್ರಹಿಸಿ ಯುವ ಸಾಹಿತಿಯೊಬ್ಬ ದಿನಮಟ್ಟಿಗೆ ಸ್ವಗ್ರಾಮದಲ್ಲಿ ಸತ್ಯಾಗ್ರಹ ಮಾಡಿರುವ ಘಟನೆ ಸಮೀಪದ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಗುರುವಾರ ಜರುಗಿದೆ.
ಇಂತಹ ಆಪರೂಪದ ನೀತಿ ಜಾರಿಗೆ ಆಗ್ರಹಿಸಿ ಸತ್ಯಾಗ್ರಹ ಮಾಡಿದವರು ಕಾನಹೊಸಹಳ್ಳಿ ಸಮೀಪದ ಲೋಕಿಕೆರೆ ಗ್ರಾಮದ ಯುವ ಸಾಹಿತಿ ಧನುಂಜಯ ಎಂಬುವರಾಗಿದ್ದಾರೆ. ಈವರಿಗೆ ಸರ್ಕಾರ ಯೋಜನೆಗಳನ್ನು ಮತ್ತು ತಮ್ಮ ಹಕ್ಕುಗಳಿಗಾಗಿ, ರೈತ ಮತ್ತು ದಲಿತರ ಸಮುದಾಯದಗಳಿಗೆ ಸಮಸ್ಯೆಗಳಿಗಾಗಿ ಅವುಗಳ ಅನುಷ್ಠಾನಕ್ಕಾಗಿ ಧರಣಿ, ಉಪವಾಸ ಸತ್ಯಾಗ್ರಹ, ಪ್ರತಿಭಟನೆಗಳನ್ನು ನೋಡಿದ ಗ್ರಾಮದ ಜನರಿಗೆ ಧನುಂಜಯ ಮಾಡಿದ ಸತ್ಯಾಗ್ರಹ ತೀರ ಆಪರೂಪವಾಗಿತ್ತು. ಅಲ್ಲದೆ, ಇತನ ವಿಶಿಷ್ಟ ಸತ್ಯಾಗ್ರಹ ಕಂಡ ಹಳ್ಳಿಗರಿಗೆ ಕುತೂಹಲಕ್ಕೂ ಕಾರಣವಾಗಿತ್ತು. ಇದು ಯಾವ ಕಾಯಿದೆ, ಇದರ ಉದ್ದೇಶವೇನು ಹಾಗೂ ಏಕವ್ಯಕ್ತಿ ಸತ್ಯಾಗ್ರಹ ಮಾಡುವುದುನ್ನು ಕಂಡ ಗ್ರಾಮದ ಜನರಿಗೆ ಅರಿವಿಲ್ಲದೆ ಕೆಲವರು ಆಪಹಾಸ್ಯ ಮಾಡಿದ್ದು ಕಂಡು ಬಂತು.
ಬೇಡಿಕೆ :
ದೇಶಕಾಯೋ ಸೈನಿಕರಿಗೆ ಅರ್ಥಿಕ ಸಮಸ್ಯೆ ಬಾರದಂತೆ ಗ್ರಾಮ ಪಂಚಾಯಿತಿಯಲ್ಲಿ ಪ್ರಸುತ್ತವಾಗಿರುವಂತೆ ಮನೆ, ನೀರು ತೆರಿಗೆಯಂತೆ ಸೈನಿಕ ತೆರಿಗೆ ಕಾಲಂ ಸೇರಿಸಬೇಕು, ಸರ್ಕಾರಿ ಹುದ್ದೆಯಿರುವರು ಮತ್ತು ಬಡ್ತಿ, ವರ್ಗಾವಣೆವಾದಗ ಮತ್ತು ಸಂಘ,ಸಂಸ್ಥೆಗಳ ನೊಂದಾಯಿಸುವಾಗ ಹಾಗು ಸಭೆ, ಸಮಾರಂಭ, ಉತ್ಸವ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಪರವಾನಿಗೆ ನೀಡುವಾಗ ಸಾರ್ವಜನಿಕರಿಂದ ಪಡೆಯ ತೆರಿಗೆಯಂತೆ ಸೈನಿಕರ ಕರವನ್ನು ವಸೂಲಾತಿ ಮಾಡುವಂತಹ ಮಹತ್ವವಾದ ನೀತಿಯನ್ನು ಜಾರಿಗೆ ತರಬೇಕೆಂಬುದು ಸತ್ಯಾಗ್ರಹಿಯ ಬೇಡಿಕೆಯಾಗಿದೆ.
ಈ ಸಂದರ್ಭದಲ್ಲಿ ಯುವ ಸಾಹಿತಿ ಧನುಂಜಯ ಪತ್ರಿಕೆಯೊಂದಿಗೆ ಮಾತನಾಡಿ, ಈ ಹೋರಾಟವು ಯಾವುದೇ ವೈಯಕ್ತಿಕ ಉದ್ದೇಶವಿಲ್ಲ, ದೇಶ ರಕ್ಷಣೆಗಾಗಿ ಇಡೀ ಜೀವನ ತ್ಯಾಗ ಮಾಡುವ ಸೈನಿಕರಿಗೆ ಕಲ್ಯಾಣ ಮತ್ತು ಅರ್ಥಿಕನೆರವಿಗಾಗಿ ನನ್ನ ಹೋರಾಟವಾಗಿದೆ. ಮೊದಲು ಸ್ವಗ್ರಾಮದಲ್ಲಿ ಮಾಡಿರುವೆ ಮುಂದಿನ ದಿನಗಳಲ್ಲಿ ಹೋಬಳಿ, ತಾಲೂಕು, ಜಿಲ್ಲೆ ಕೇಂದ್ರದಲೂ ಸಹ ಸತ್ಯಾಗ್ರಹ ಮಾಡಲಾಗುವುದು ಎಂದರು…

ವರದಿ.ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
