;

ಹರಪನಹಳ್ಳಿ:-ಗೆದ್ದ ಶಾಸಕ ಕ್ಷೇತ್ರ ಮರೆತು ದೂರವಿದ್ದರೂ ಸಹ, ಸದಾ ತಾಲೂಕಿನ ಜನರ ಕಷ್ಟಕ್ಕೆ ಬೆಂಬಲವಾಗಿ ನಿಂತ ನಿಜವಾದ ಜನಸೇವಕಿ,ಎಂ.ಪಿ. ವೀಣಾ ಮಹಾಂತೇಶ್…!!!

ವಿಜಯನಗರ ಜಿಲ್ಲೆ ಹರಪನಹಳ್ಳಿ ಕ್ಷೇತ್ರದಲ್ಲಿ ಅಶಕ್ತರ ಆಶಾಕಿರಣ ಆಸರೆಯ ಜೀವಾಳ ಮಹಿಳಾ ಜನನಾಯಕಿ ಶ್ರೀಮತಿ ಎಂ.ಪಿ.ವೀಣಾರವರು.
ಅವರು ಪಟ್ಟಣದ ಐ‌ಯ್ಯನಕೆರೆ ಸಮೀಪದ ಆಂಜನೇಯ ಬಡಾವಣೆಯಲ್ಲಿ ಇತ್ತೀಚೆಗೆ ಆಕಸ್ಮಿಕ ಬೆಂಕಿಯಿಂದ ಮನೆ ಸುಟ್ಟು ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದ ಕುಟುಂಬಕ್ಕೆ ಅಗತ್ಯ ಸಾಮಾಗ್ರಿಗಳನ್ನು ನೀಡಿ ನಿರ‍ಶ್ರಿತರನ್ನ ಸಾಂತೈಸಿದ್ದಾರೆ, ನೊಂದವರಿಗೆ ಸಾಂತ್ವನ ಹೇಳುವ ಜೊತೆಗೆ ಆಹಾರದ ಕಿಟ್, ಹಾಸಿಗೆ, ಬಟ್ಟೆ ಹಾಗೂ ಪಾತ್ರೆ ಅಗತ್ಯ ಗೃಹಬಳಕೆ ಸಾಮಾಗ್ರಿಗಳನ್ನು ನೀಡಿದ್ದಾರೆ.

ನೋಡಿ ನಾವು ನಿಜವಾದ ಜನಸೇವಕರನ್ನು ಮರೆತು ಎಲೆಕ್ಷನ್ ಸಮಯದ, ಮರುಳು ಮಾತಿಗೆ ಮರುಳಾಗಿ ಮೋಸಹೋಗುವುದ್ದಕ್ಕಿಂತ, ಇಂತಹ ಜನಸೇವೆಯೇ ಜನಾರ್ಧನ ಸೇವೆಯಂದು ತಿಳಿದಿರುವ, ಎಂ. ಪಿ. ಪಿ. ಕುಟುಂಬಕ್ಕೆ ನಾವು ಸದಾ ಚಿರಋಣಿ ಎನ್ನುತ್ತಾರೆ ತಾಲೂಕಿನ ಹಲವು ಹಳ್ಳಿಗಳ ಸಾರ್ವಜನಿಕರು. ಶಾಸಕ ಎನ್ನುವ ಬಿರುದು ಸಿಗುವ ತನಕ ಹಗಲು ರಾತ್ರಿ ಕಷ್ಟ ಪಟ್ಟ, ಕರುಣಾಕರರೆಡ್ಡಿ ತಾಲೂಕಿನ ಸಾರ್ವಜನಿಕರ ಕಷ್ಟವನ್ನು ಆಲಿಸುವುದು ಬಿಟ್ಟು ಇಂದು “ಕಾಣೆಯಾಗಿದ್ದಾರೆ “ಮುಂಬರುವ ಚುನಾವಣೆಯಲ್ಲಿ ತಾಲೂಕಿನ ಜನರು ಅಲ್ಲ ರಾಜ್ಯದಲ್ಲಿ ಯಾವ ತಾಲೂಕಿನಲ್ಲಿ ಸ್ಪರ್ಧೆ ಮಾಡಿದರು ಸಹ ಇಂತವರಿಗೆ ಜನರು ಸರಿಯಾಗಿ ಬುದ್ದಿಯನ್ನು ಕಲಿಸಬೇಕು, ಹರಪನಹಳ್ಳಿ ಕ್ಷೇತ್ರದಲ್ಲಿ, ರಸ್ತೆ ಸರಿಯಾಗಿ ಇಲ್ಲ ಕೋವಿಡ್ ಸಂದರ್ಭದಲ್ಲಿ ಕ್ಷೇತ್ರಕ್ಕೆ ಭೇಟಿ ಕೊಡದೆ ಕಾಣೆಯಾದ ಶಾಸಕ, ಕರುಣಾಕರ ರೆಡ್ಡಿ, ಏನೂ ಇದೆ ಸಂದರ್ಭದಲ್ಲಿ, ಎಂ. ಪಿ.ವೀಣಾ ಮಹಾಂತೇಶ್ ರವರ ಸಹಾಯದ ಕಾರ್ಯವನ್ನು ತಾಲೂಕಿನ ಜನರು ಎಂದಿಗೂ ಮರೆಯುವುದಿಲ್ಲ ತಾಲೂಕಿನ ಜನತೆ ಸದಾ ಅವರ ಒಂದು ಕಾರ್ಯಕ್ಕೆ ಚಿರಋಣಿ ಅನ್ನುತ್ತಾರೆ. ಕಷ್ಟ ಅಂದರೆ ಸಾಕು ಅಲ್ಲಿಗೆ ತಮ್ಮ ತಂಡದೊಂದಿಗೆ ಬಂದು ನಿಂತು ಪರಿಹಾರಿಸುವುದೇ ಅವರ ಮೂಲ ಉದ್ದೇಶ ಇದಕ್ಕೆ ನೈಜ್ಯ ಸುದ್ದಿ ಮೊನ್ನೆ ನಡೆದ ಐಯ್ಯನಕೆರೆಯ ಚಿತ್ರಣವೇ ನೋಡಿ ಅಶ್ರಯ ಇಲ್ಲ ಅನ್ನುವ ವಿಷಯನ್ನು ಕೇಳಿದ ಅವರು  ಕೂಡಲೇ ಅವರತಂಡದೊಂದಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು ಬೇಕಾಗುವ ಸಲಕರಣೆಗಳನ್ನು ನೀಡಿದ್ದಾರೆ,ಈ ಮೂಲಕ ನಿರಾಶ್ರಿತರಿಗೆ ತುರ್ತು ಆಶ್ರಯ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ನೆರೆದ ನೊಂದ ಕುಟುಂಬಗಳ ಆಹುವಾಲಗಳನ್ನು ಸ್ವೀಕರಿಸಿದ್ದು, ಕಂದಾಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ದೊರಕುವಂತೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿ ಧೈರ್ಯ ತುಂಬಿದರು. ಡಾಕ್ಟರ್ ಮಹಾಂತೇಶ್ ಚರಂತಿಮಠ, ಕೆಪಿಸಿಸಿ ವೈದ್ಯ ಘಟಕದ ಉಪಾಧ್ಯಕ್ಷರು ಶ್ರೀಮತಿ ಕವಿತಾ ವಾಗೀಶ್,ಮಾಜಿ ಪುರಸಭೆ ಅಧ್ಯಕ್ಷ ದಾದಾಪೀರ್ ಮಕರಬ್ಬಿ, ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿ. ಮಂಜುನಾಥ್, ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಪ್ರಜ್ವಲ್, ಅರುಣ್ ಕುಮಾರ್, ಮದನ್ ಸ್ವಾಮಿ, ಸಾಗರ್ ಪಾಟೀಲ್, ಗುರು ಬಸವರಾಜ್, ಜೆ.ಕೆ.ಮಾರುತಿ, ರೂಪ ಮುಂತಾದವರಿದ್ದರು….

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *