ವಿದ್ಯುತ್ ಮಸೂದೆ 2021; ವಿದ್ಯುತ್ ವಲಯದ ಖಾಸಗೀಕರಣ ಹಿಂಪಡೆಯಲು ಆಗ್ರಹ.
ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಹಾಗೂ ಆಲ್ ಇಂಡಿಯಾ ಪವರ್ ಮೆನ್ಸ್ ಫೆಡರೇಶನ್ (AIPF) ವತಿಯಿಂದ ಜನವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ, ವಿದ್ಯುತ್ ಮಸೂದೆ 2021. ವಿದ್ಯುತ್ ವಲಯದ ಖಾಸಗೀಕರಣ ಹಿಂಪಡೆಯಲು ಆಗ್ರಹಿಸಿ ಬಳ್ಳಾರಿಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಇಂಧನ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಐಯುಟಿಯುಸಿ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಎ.ದೇವದಾಸ್, ಜಿಲ್ಲಾ ಸಮಿತಿ ಸದಸ್ಯರಾದ ಸುರೇಶ್.ಜಿ, ನಿಂಗರಾಜ್.ಇದ್ದರು.
*ಬೇಡಿಕೆಗಳು*
🔹ವಿದ್ಯುತ್ ತಿದ್ದುಪಡಿ ಮಸೂದೆ 2021 ರದ್ದುಗೊಳಿಸಿ.
🔹 ವಿದ್ಯುತ್ ವಲಯದ ಎಲ್ಲಾ ಹಂತಗಳ ಖಾಸಗೀಕರಣ ಕೈಪಿಡಿ.
🔹 ಎಲ್ಲಾ ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಿ.
🔹 ಲಾಕ್ಡೌನ್ ಅವಧಿಯಲ್ಲಿ ಕೇಂದ್ರ ಸರ್ಕಾರ ತುಂಬಿದ ಪಿ.ಎಫ್ ನೌಕರರ ಪಾಲಿನ ಕಂತಿನ ಹಣ ನೌಕರರ ವೇತನಕ್ಕೆ ಜಮಾ ಮಾಡಿ.
🔹 ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸಿ
ಈ ಬೇಡಿಕೆಗಳಿಗೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತವಾದ ಅಖಿಲ ಭಾರತ ವಿದ್ಯುತ್ ನೌಕರರ ಫೇಡೆರೇಷನ್ (ಎಐಫಿಎಫ್), ಗೆ ಸೇರಿದ
ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘ (ರಿ), ಕರ್ನಾಟಕ ರಾಜ್ಯ ವಿದ್ಯುತ್ ಸರಬರಾಜು ಕಂಪನಿಗಳು ಗುತ್ತಿಗೆ ನೌಕರರ ಸಂಘ(ರಿ), ಕರ್ನಾಟಕ ರಾಜ್ಯ ಮತ್ತು ವಿದ್ಯುತ್ ವಿಂಡ್ ಮತ್ತು ಸೋಲಾರ್ ನೌಕರರ ಸಂಘ(ರಿ) ಗಳು ತನ್ನ ವಿರೋಧ ವ್ಯಕ್ತಪಡಿಸಿವೆ.
ಈ ಮಸೂದೆ ವಿದ್ಯುತ್ ಕಾಯ್ದೆ 2020 ಇದುವರೆಗೂ ಅಂದರೆ ಸರ್ಕಾರದ ದಲ್ಲಿ ಇರುವಂತಹ ಉತ್ಪಾದನೆ, ಸರಬರಾಜು ಕಾರ್ಯಗಳನ್ನು ಒಂದೇ ಏಟಿಗೆ ಖಾಸಗಿ ಕುಳಗಳಿಗೆ ಒಪ್ಪಿಸುವ ಉದ್ದೇಶವನ್ನು ಹೊಂದಿದೆ. ಈ ಮಸೂದೆಯನ್ನು *ರಾಜ್ಯದಲ್ಲಿ ಜಾರಿಗೊಳಿಸಿದಲ್ಲಿ ರಾಜ್ಯದ ಕೆಪಿಸಿಎಲ್, ಕೆಪಿಟಿಸಿಎಲ್, ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಹಾಗೂ ಜೆಸ್ಕಾಂ* ಇತ್ಯಾದಿ ವಿದ್ಯುತ್ ಉತ್ಪಾದನೆ ಸರಬರಾಜು ಹಾಗೂ ಕಂಪನಿಗಳು ಖಾಸಗಿ ಕಾರ್ಪೊರೇಟ್ ಕಂಪನಿಗಳ ಕೈ ವಶವಾಗಲಿವೆ.
ಇದುವರೆಗೂ ದೊಡ್ಡ ಉದ್ಯಮಿಗಳಿಗೆ ವಾಣಿಜ್ಯ ಉದ್ದೇಶಗಳಿಗೆ ಹೆಚ್ಚಿನ ದರವನ್ನು ವಿಧಿಸುವ ಮೂಲಕ ಜನಸಾಮಾನ್ಯರಿಗೆ ಅತ್ಯಂತ ಅಗ್ಗದ ದರದಲ್ಲಿ ಸಿಗುವಂತೆ ನೀತಿಯನ್ನು ಪಾಲಿಸುತ್ತಾ ವಿದ್ಯುತ್ ಒಂದು ಸೇವೆಯಾಗಿತ್ತು. ಆದರೆ ಈ ಉದ್ದೇಶ ಮಸೂದೆಯು ಈ ಕ್ರಾಸ್ ಸಬ್ಸಿಡಿಗೆ ಹೊಡೆತವನ್ನು ನೀಡುತ್ತದೆ. ಈಗಾಗಲೇ ದೆಹಲಿ ಹಾಗೂ ಇತರ ಇತರ ರಾಜ್ಯಗಳಲ್ಲಿ ರಿಲಯನ್ಸ್ ಟಾಟಾ ಮತ್ತಿತರ ಖಾಸಗಿ ಕಂಪನಿಗಳ ಹಿಡಿತಕ್ಕೆ ಇರುವುದರಿಂದ ಅಲ್ಲಿ ನಾಲ್ಕೈದು ಪಟ್ಟು ದರಗಳು ಹೆಚ್ಚಾಗಿವೆ. ಜನಸಾಮಾನ್ಯರ ಮೇಲೆ ವಿಪರೀತ ಹೊರೆಬಿದ್ದಿದೆ. ಮಿಲಿಯಾಂತರ ಕೃಷಿ ಪಂಪ್ ಸೆಟ್ ಗಳ ರೈತರ ಕುಟುಂಬಗಳು ಭಾಗ್ಯ ಹಾಗೂ ಕುಟೀರ ಜ್ಯೋತಿ ಯೋಜನೆಗಳಿಂದ ಕೋಟ್ಯಂತರ ಬಡ ಕುಟುಂಬಗಳು ಹಾಗೂ ಮಿಲಿಯಾಂತರ ಸಣ್ಣ ಕೈಗಾರಿಕೆಗಳ ಕುಟುಂಬಗಳು ಉಚಿತ ಹಾಗೂ ಸಹಾಯಧನ ಆಧಾರದಲ್ಲಿ ವಿದ್ಯುತ್ ಪ್ರಯೋಜನ ಪಡೆಯುತ್ತಿವೆ ಇವೆಲ್ಲರು ಅಂತಹ ಪ್ರಯೋಜನವನ್ನು ಕಳೆದುಕೊಳ್ಳಬೇಕಾಗುತ್ತದೆ. ಮಾತ್ರವಲ್ಲ ಅವರಿಗೆ ಬಹುತೇಕ ಉದ್ಯೋಗ ವಂಚಿತರಾಗಬೇಕಾಗುತ್ತದೆ.
ಇನ್ನು ಇದುವರೆಗೂ ಸರ್ಕಾರಿ ಸ್ವಾಮ್ಯದಲ್ಲಿ ಸಾರ್ವಜನಿಕ ವಲಯದಲ್ಲಿ ಇತರ ನೌಕರರ ಹಾಗೂ ಕಾರ್ಮಿಕರ ಪರವಾದ ಸೌಲಭ್ಯಗಳನ್ನು ಒಂದೊಂದಾಗಿ ಕಣ್ಮರೆ ಮಾಡಿ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗೂ ನೌಕರರ ಹಾಗು ಕಾರ್ಮಿಕ ಮತ್ತಿತರ ಉದ್ಯೋಗ ಭದ್ರತೆ ಅಪಾಯ ಎದುರಾಗುತ್ತದೆ.
ಆದ್ದರಿಂದ ಈ ಜನವಿರೋಧಿ, ನೌಕರರ ವಿರೋಧಿ ವಿದ್ಯುತ್ ಕಾಯ್ದೆ ತಿದ್ದುಪಡಿ 2021 ಹಾಗೂ ಕಾಸಗೀಕರಣ ನೀತಿಯಿಂದ ಹಿಂದೆ ಸರಿಯಬೇಕೆಂದು ಎಐಯುಟಿಯುಸಿ ಮತ್ತು ಅದರ ಸಂಯೋಜಿತ ಯೂನಿಯನ್ ಗಳು ಒತ್ತಾಯಿಸುತ್ತವೆ…

ವರದಿ. ಎಂ. ಎಲ್. ವೆಂಕಟೇಶ್ ಬಳ್ಳಾರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
