ಭಾರತ ರಕ್ಷಿಸಿ ದಿನ ದೇಶವ್ಯಾಪಿ ಪ್ರತಿಭಟನೆ…!!!

ಭಾರತ ರಕ್ಷಿಸಿ ದಿನ ದೇಶವ್ಯಾಪಿ ಪ್ರತಿಭಟನೆ.
ಬಳ್ಳಾರಿ. ಸ್ಕಿನ್ ವರ್ಕರ್ಸ್ ಫೆಡರೇಷನ್ ಆಫ್ ಇಂಡಿಯಾ, swfi ಸಂಯೋಜಿತ.
ವತಿಯಿಂದ ಇಂದು ದೇಶಾದ್ಯಂತ ಸುಮಾರು ಒಂದು ಕೋಟಿ ಸ್ಕೀಮ್ ವರ್ಕರ್ ಅದರಲ್ಲಿಯೂ ಬಹುತೇಕವಾಗಿ ಮಹಿಳೆಯರು ಅಂಗನವಾಡಿ ಶಿಕ್ಷಕರು ಮತ್ತು ಸಹಾಯಕರು ಆಶಾ ಕಾರ್ಯಕರ್ತರು, ಬಿಸಿಯೂಟ ನೌಕರರು,
ಭಾರತ ರಕ್ಷಿಸಿ ದಿನದ ಅಂಗವಾಗಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನ ಮಂತ್ರಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ರಾಜ್ಯ ಕಾರ್ಯದರ್ಶಿಗಳಾದ ಡಿ ನಾಗಲಕ್ಷ್ಮಿ ಅವರು ಮಾತನಾಡುತ್ತಾ ಇವರೆಲ್ಲರೂ ಪ್ರಧಾನವಾಗಿ
ಗ್ರಾಮೀಣ ಪ್ರದೇಶಗಳಲ್ಲಿ ಹಗಲಿರುಳೆನ್ನದೆ ಸಮಾಜದ ಅತ್ಯಂತ ತಳಮಟ್ಟದ ಮತ್ತು ನಿರ್ಗತಿಕ ಸಮುದಾಯಗಳ ಸಾಮಾಜಿಕ ಅವಶ್ಯಕತೆಗಳನ್ನು ಪೂರೈಸಲು ಕೆಲಸ ಮಾಡುತ್ತಿದ್ದಾರೆ.
ಹಲವಾರು ದಶಕಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದರು ಸಹ ಅವರಿಂದ ಸ್ಕಿನ್ ವರ್ಕರ್ಸ್ ಎಂಬ ಹೆಸರಿನಲ್ಲಿ ಬಿಡಿಗಾಸಿಗೆ ದುಡಿಸಿಕೊಳ್ಳುಲಾಗುತ್ತಿದೆ.
ಈ ನೌಕರರು ಸ್ವತಹ ಅತ್ಯಂತ ಬಡವರು ಮತ್ತು ಸಮಾಜದ ಅತ್ಯಂತ ತಳಮಟ್ಟದ ಜನರಾಗಿದ್ದಾರೆ. ಅವರಲ್ಲಿ ಹಲವಾರು ಮಂದಿ ಅಥವಾ ಬೆಂಬಲ ಇಲ್ಲದ ವಿಧವೆಯರು ಹಾಗೂ ಕುಟುಂಬದಿಂದ ದೂರ ತಳ್ಳಲ್ಪಟ್ಟ ಒಂಟಿ ಮಹಿಳೆಯರಾಗಿದ್ದಾರೆ ನೌಕರರು ಸರಕಾರದ ವಿವಿಧ ಇಲಾಖೆಗಳಲ್ಲಿ ನೇರವಾಗಿ ದುಡಿಯುವ ಅತ್ಯಂತ ಹೆಚ್ಚು ಶೋಷಣೆಗೆ ಒಳಗಾಗುವ ನೌಕರರು ಎಂಬುದು ಗೊತ್ತಿದ್ದರೂ ಸಹ ಅವರು ಹಲವಾರು ತಿಂಗಳಲ್ಲಿ ದುಡಿಯುತ್ತಿದ್ದಾರೆ ಅವರ ತಿಂಗಳ ವೇತನ 1010 ರಿಂದ rs.10000.
ಇದನ್ನು ಅಂತರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಶಿಫಾರಸ್ಸು 21 ಸಾವಿರ ರೂಪಾಯಿ ಕನಿಷ್ಠ ವೇತನಕ್ಕೆ ತಾಳೆ ಹಾಕುವುದು ದೂರದ ಮಾತೇ ಸರಿ.
ಈ ವೇತನವನ್ನು ಸಹ ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ ಕಷ್ಟಪಟ್ಟು ಗಳಿಸಿದ ವೇತನವನ್ನು ಪಡೆಯಲು ಅವರು ತಿಂಗಳಾನುಗಟ್ಟಲೆ ಅಲೆಯಬೇಕು. ಕೆಲವು ಸಮಯ ಮೀರಿ ಹೋಗಿದೆ ಎಂಬ ನೆಪ ಹೇಳಿ ಅವರದಲ್ಲದ ತಪ್ಪಿಗೆ ಅವರಿಗೆ ವೇತನ ವಂಚನೆಯ ಬರೇ ಎಳೆಯಲಾಗುತ್ತದೆ. ಜೀವಮಾನವಿಡೀ ಸರ್ಕಾರಿ ನೌಕರರ ಸಮಾನ ಸಮಾನಕ್ಕೆ ದುಡಿದರೂ ನಿವೃತ್ತಿ ಹೊಂದಿದ ಮೇಲೆ ಅವರಿಗೆ ಯಾವುದೇ ಸಾಮಾಜಿಕ ಭದ್ರತೆ ಇರುವುದಿಲ್ಲ.
ಕೋವಿಡ್ 19 ಸಂದರ್ಭದಲ್ಲಿಯೂ ಆಶಾ ಅಂಗನವಾಡಿ ಕಾರ್ಯಕರ್ತರನ್ನು ಮುಂಚೂಣಿ ಯೋಧರೆಂ ದು ಕರೆದರು, ಹೊಗಳಿಕೆ ಪ್ರಶಂಸೆಯಿಂದ ಕಾರ್ಯ ಮಾಡಿಸಿಕೊಂಡರೆ ಹೊರತು ಅವರ ಸೇವೆಗೆ ತಕ್ಕ ಪ್ರತಿಫಲ ನೀಡಲಿಲ್ಲ.
ಬಿಸಿಊಟ ಕರ್ಮಿಕರಿಗೆ ಹಲವಾರು ತಿಂಗಳುಗಳಿಂದ ಕೊಡುವ ಅಲ್ಪ ಗೌರವಧನ ನೀಡುವುದಿಲ್ಲ ಈ ಎಲ್ಲಾ ತಿಂಗಳಿಗೆ ಸರ್ಕಾರವೇ ಮಾಲಿಕ ಆದರೂ ಸಹ ಸರ್ಕಾರ ಒಬ್ಬ ಮಾದರಿ ಮಾಲೀಕ ನಂತಹ ವರ್ತಿಸುತ್ತಿರುವುದು ವಿಪರ್ಯಾಸ ಎಂದರು.
ಎಐಯುಟಿಯುಸಿ, ಜಿಲ್ಲಾ ಕಾರ್ಯದರ್ಶಿ, A ದೇವದಾಸ್ , ರವರು ಮಾತನಾಡುತ್ತಾ ಎ ಐ ಯು ಟಿ ಯು ಸಿ, ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘಗಳು, ಸ್ಕೀಮ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾ, ಅಡಿಯಲ್ಲಿ ಸಂಘಟಿತರಾಗಿ ರುವ ಸ್ಕೀಮ್ ನೌಕರರಾದ ಆಶಾ ಅಂಗನವಾಡಿ ಬಿಸಿಯೂಟ ಕಾರ್ಯಕರ್ತೆಯರು ಹಾಗೂ ಕೆಜಿಬಿವಿ ನೌಕರರು ಈ ದಿನ ಆಗಸ್ಟ್ 9 2021 ರಂದು *ಭಾರತ ರಕ್ಷಿಸಿ* ದಿನದಂದು ದೇಶದ ವಿವಿಧ ಕಾರ್ಮಿಕ ರೈತ ರೊಂದಿಗೆ ಎಲ್ಲಾ ದುಡಿಯುವ ವರ್ಗದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತೇವೆಂದು ಎಂದು ಹೇಳಿದರು. ಈ ಪ್ರತಿಭಟನೆ ಅಧ್ಯಕ್ಷತೆ ಶಾಂತ ರವರು ವಹಿಸಿದ್ದರು. ಈ ಸಂದರ್ಭದಲ್ಲಿ s.g. ನಾಗರತ್ನ ಗೀತಾ,ರಾಮಕ್ಕ, ರೇಷ್ಮಾ, ಅಂಬಿಕಾ, ಜಯರಾಜ್ ನೀಲಪ್ಪ ವಿಜಯಕುಮಾರ್, ಕೃಷ್ಣನಾಯಕ್, ಮಂಜುಳ ನಾಯಕ್, ಲಕ್ಷ್ಮಿ, ನೀಲಮ್ಮ, ಇತರರು ಉಪಸ್ಥಿತರಿದ್ದರು.
ಹಕ್ಕೊತ್ತಾಯಗಳು.
ಆಶಾ ಅಂಗನವಾಡಿ ಕಾರ್ಯಕರ್ತರು ಸಹಾಯಕಿ ಬಿಸಿಯೂಟದ ಕಾರ್ಮಿಕರಿಗೆ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ ಐ ಎಲ್ ಸಿ ದ ಶಿಫಾರಸ್ಸಿನಂತೆ ಕನಿಷ್ಠ ರೂಪಾಯಿ 21,000 ಮಾಸಿಕ ವೇತನ ಮತ್ತು rs.10000 ಪಿಂಚಣಿ ನೀಡಬೇಕು.
ಕೋವಿಡ್ 19 ಸಾಂಕ್ರಾಮಿಕ ದ ಸಂದರ್ಭದಲ್ಲಿ ಸೇವೆಸಲ್ಲಿಸುತ್ತಿರುವ ಬಿಸಿಯೂಟ ಕಾರ್ಮಿಕರಿಗೆ ಅಗತ್ಯವಿರುವಷ್ಟು ಮಾಸ್ಕ್, ಮತ್ತುಎಲ್ಲಾ ಸುರಕ್ಷಿತ ಸಾಮಾಗ್ರಿಗಳನ್ನು ಒದಗಿಸಬೇಕು. ಕಳೆದ ಆರು ತಿಂಗಳಿಂದ ನೀಡದ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು.

ವರದಿ ಎಂ.ಎಲ್. ವೆಂಕಟೇಶ್.
ಉಪಸಂಪಾದಕರು ಬಳ್ಳಾರಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend