ಸರ್ಕಾರದ ಹಣದಲ್ಲಿ ನಡೆಯುವ ಕ್ಯಾಂಟೀನ್ ಗೆ ಇಂದಿರಾ ಹೆಸರು ಬೇಡ | ಸಿ.ಟಿ.ರವಿ ಕಿಡಿ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಕೊಡುಗೆಯಾದ ಇಂದಿರಾ ಕ್ಯಾಂಟೀನ್ ನ ಹೆಸರನ್ನು ಬದಲಿಸುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಇಂದಿರಾ ಕ್ಯಾಂಟಿನ್ ನ್ನು ಅನ್ನಪೂರ್ಣೇಶ್ವರಿ ಕ್ಯಾಂಟೀನ್ ಎಂದು ಹೆಸರನ್ನು ಬದಲಿಸಬೇಕು ಎಂದು ಆಗ್ರಹಿಸಿರುವ ಸಿ.ಟಿ.ರವಿ, ಕಾಂಗ್ರೆಸ್ ತನ್ನ ದುಡ್ಡಿನಲ್ಲಿ ಕ್ಯಾಂಟೀನ್ ಮಾಡುವುದಾದರೆ, ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ, ಸೋನಿಯಾ ಗಾಂಧಿ ಎಂದು ಬೇಕಾದರೆ ಹೆಸರಿಡಲಿ, ಆದರೆ, ಸರ್ಕಾರದ ಹಣದಲ್ಲಿ ನಡೆಯುವ ಕ್ಯಾಂಟೀನ್ ಗೆ ಇಂದಿರಾ ಎಂದು ಹೆಸರಿಡದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಇಂದಿರಾ ಕ್ಯಾಂಟೀನ್ ಮೂಲಕ ಕಾಂಗ್ರೆಸ್ ನವರು ಕೊಳ್ಳೆ ಹೊಡೆದಿದ್ದಾರೆ. ಕ್ಯಾಂಟೀನ್ ಉಸ್ತುವಾರಿ ಯಾರ ಬೀಗರಿಗೆ ಕೊಟ್ಟಿದ್ದಾರೆ. ಆ ಬೀಗರು ಎಷ್ಟು ಹಣ ಲೂಟಿ ಮಾಡಿದ್ದಾರೆ ಎಂದು ಗೊತ್ತಿದೆ ಎಂದು ರವಿ ಕಿಡಿಕಾರಿದ್ದಾರೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
