ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟ ಸೇರಿರುವ 29 ಸಚಿವರಿಗೆ ಖಾತೆ ಹಂಚಲಾಗಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ಬಳಿ ಹಣಕಾಸು, ಗುಪ್ತದಳ, ಬೆಂಗಳೂರು ನಗರಾಭಿವೃದ್ಧಿ, ಡಿಪಿಎಆರ್ ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಗೋವಿಂದ ಕಾರಜೋಳರಿಗೆ ಜಲಸಂಪನ್ಮೂಲ, ಕೆ. ಎಸ್. ಈಶ್ವರಪ್ಪರಿಗೆ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ, ಆರ್. ಅಶೋಕ್ ರಿಗೆ ಕಂದಾಯ, ಬಿ. ಶ್ರೀರಾಮುಲುರಿಗೆ ಸಾರಿಗೆ ಮತ್ತು ಎಸ್ ಟಿ ಸಚಿವಾಲಯ, ವಿ. ಸೋಮಣ್ಣರಿಗೆ ವಸತಿ, ಉಮೇಶ್ ಕತ್ತಿಗೆ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಎಸ್. ಅಂಗಾರಗೆ ಮೀನುಗಾರಿಕೆ, ಹೆಚ್. ಮಾಧುಸ್ವಾಮಿ ಅವರಿಗೆ ಸಣ್ಣ ನೀರಾವರಿ ಜೊತೆ ಸಂಸದೀಯ ಕಾನೂನು, ಆರಗ ಜ್ಞಾನೇಂದ್ರರಿಗೆ ಗೃಹ ಖಾತೆ, ಡಾ. ಅಶ್ವಥ್ ನಾರಾಯಣ್ ಗೆ ಉನ್ನತ ಶಿಕ್ಷಣ, ಐಟಿಬಿಟಿ, ಚಂದ್ರಕಾಂತ ಗೌಡ ಪಾಟೀಲ್ ಗೆ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ ಮೆಂಟ್, ಆನಂದ್ ಸಿಂಗ್ ಗೆ ಪ್ರವಾಸೋದ್ಯಮ, ಕೋಟ ಶ್ರೀನಿವಾಸ್ ಪೂಜಾರಿಗೆ ಸಮಾಜ ಕಲ್ಯಾಣ ಇಲಾಖೆ, ಪ್ರಭು ಚೌವ್ಹಾಣ್ ಗೆ ಪಶುಸಂಗೋಪನೆ, ಮುರುಗೇಶ್ ನಿರಾಣಿಗೆ ಬೃಹತ್ ಕೈಗಾರಿಕೆ, ಹೆಬ್ಬಾರ್ ಶಿವರಾಂಗೆ ಕಾರ್ಮಿಕ, ಎಸ್. ಟಿ. ಸೋಮಶೇಖರ್ ಗೆ ಸಹಕಾರ, ಬಿ. ಸಿ. ಪಾಟೀಲ್ ಗೆ ಕೃಷಿ, ಭೈರತಿ ಬಸವರಾಜ್ ಗೆ ನಗರಾಭಿವೃದ್ಧಿ, ಡಾ. ಕೆ. ಸುಧಾಕರ್ ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆ. ಗೋಪಾಲಯ್ಯಗೆ ಅಬಕಾರಿ, ಶಶಿಕಲಾ ಜೊಲ್ಲೆಗೆ ಮುಜರಾಯಿ, ಹಜ್ ಮತ್ತು ವಕ್ಫ್, ಎಂಟಿಬಿ ನಾಗರಾಜ್ ಗೆ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್, ಸಣ್ಣ ಕೈಗಾರಿಕೆ, ನಾರಾಯಣಗೌಡರಿಗೆ ಯುವಜನ ಸೇವಾ ಕ್ರೀಡೆ, ಬಿ. ಸಿ. ನಾಗೇಶ್ ರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ವಿ. ಸುನೀಲ್‌ಕುಮಾರ್ ಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ, ಹಾಲಪ್ಪ ಆಚಾರ್ ಗೆ ಗಣಿ ಮತ್ತು ಭೂ ವಿಜ್ಞಾನ, ಶಂಕರ್ ಬಿ. ಪಾಟೀಲ್ ರಿಗೆ ಜವಳಿ ಹಾಗೂ ಮುನಿರತ್ನ ಅವರಿಗೆ ತೋಟಗಾರಿಕೆ ಇಲಾಖೆ ನೀಡಲಾಗಿದೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
