ಚಿತ್ರದುರ್ಗ ಜಿಲ್ಲೆಯ ಇಂದು (ಅಗಸ್ಟ್-5) ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಚಿತ್ರದುರ್ಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಲಚೇತನರ, ಹಿರಿಯ ನಾಗರೀಕರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ದಿ ಅಸೋಸಿಯೇಷನ್ ಆಪ್ ಪೀಪಲ್ ವಿತ್ ಡಿಸೆಬಿಲಿಟಿ ಬೆಂಗಳೂರು, ಸ್ಪೂರ್ತಿ ವಿಕಲಚೇತನರ ಟ್ರಸ್ಟ್, ಜನಮುಖಿ ಸಂಸ್ಥೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಕೋವಿಡ್ -19 ಪ್ರಯುಕ್ತ ವಿಕಲಚೇತನರಿಗೆ ವ್ಯಾಕ್ಸಿನೇಷನ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ತಾಪಂ ಮಾಜಿ ಅಧ್ಯಕ್ಷರಾದ ಎಂ ಡಿ ಮಂಜುನಾಥ ರವರು ನಿಜವಾದ ವಿಕಲಚೇತನರು ಎಂದರೆ ದೇಹದ ಪ್ರತಿಯೊಂದು ಅಂಗಗಳು ಚೆನ್ನಾಗಿ ಇದ್ದರೂ ಜೀವನದಲ್ಲಿ ಏನು ಸಾಧನೆ ಮಾಡದೇ ಹಾಗೇ ಕಾಲಹರಣ ಮಾಡುವವರೇ ನಿಜವಾದ ವಿಕಲಚೇತನರು, ವಿಕವಚೇತನರಿಗಿರುವಂತ ವಿಶೇಷವಾದ ಪ್ರತಿಭೆ ಅಗಾಧವಾದ ಜ್ಞಾನ, ಶಕ್ತಿ ಬೇರೆ ಯಾರಿಗೂ ಇರುವುದಿಲ್ಲ ಧನಾತ್ಮಕವಾಗಿ ಪರಿಣಾಮಕಾರಿಯಾಗಿ ಬಳಸಿಕೊಂಡು ಜೀವನದಲ್ಲಿ ಯಶಸ್ಸು ಕಾಣಬೇಕು ಹಾಗೂ ಇತರರಿಗೆ ಮಾದರಿಯಾಗಿರಬೇಕು ಎಂದರು ಈ ಸಂಧರ್ಭದಲ್ಲಿ ಪಂಚಾಯ್ತಿ ಸದಸ್ಯರಾದ ತಿಪ್ಪೇಸ್ವಾಮಿ, ವಿದ್ಯಾರ್ಥಿಗಳು ಮತ್ತು ಸಂಬಂಧಿಸಿದ ಸಂಘ ಸಂಸ್ಥೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
