;

ಚಿಕ್ಕಜೋಗಿಹಳ್ಳಿ ಮನೆಯವರು ಮಲಗಿದ್ದಾಗ, ಕಳ್ಳರ ಕೈಚಳಕ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಚಿಕ್ಕಜೋಗಿಹಳ್ಳಿ, ಮನೆಯವರು ಮನೆಯಲ್ಲಿ ಮಲಗಿರುವಾಗಲೇ ಕಳ್ಳರು ಕೈಚಳಕ ತೋರಿ ಹದಿಮೂರೂವರೆ ತೊಲ ಬಂಗಾರ ಮತ್ತು 340 ಗ್ರಾಂಬೆಳ್ಳಿ ಕದ್ದೊಯ್ದ ಘಟನೆ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಇಂದು ನಸುಕಿನ ಜಾವ ನಡೆದಿದೆ ಎನ್ನಲಾಗಿದೆ.

ಚಿಕ್ಕಜೋಗಿಹಳ್ಳಿಯ ವಾಸಿ ಗ್ರಾಮ ಲೆಕ್ಕಾಧಿಕಾರಿಯಾಗಿರುವ ವಾಣಿ ಎನ್ನುವವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಕಳ್ಳರು ಮನೆಯ ಬಾಗಿಲ ಚಿಲುಕ  ಹಾಕಿಕೊಂಡು ಮನೆಯವರೆಲ್ಲಾ ಮಲಗಿಕೊಂಡಿದ್ದು, ಬಾಗಿಲ  ಹೊರಗಡೆಯ ಕಬ್ಬಿಣದ ಸೇಫ್ಟಿ ಡೋರ್ ಗೆ ಬೀಗ ಹಾಕಿರಲಿಲ್ಲ ಎನ್ನಲಾಗಿದೆ. ಮನೆಯೊಳಗೆ ಪ್ರವೇಶ ಮಾಡಿರುವ ಕಳ್ಳರು ಬಿರುವೋ ಲಾಕ್ ಮುರಿದು ಬಂಗಾರದ ಕೊರಳ ಚೈನ್, ಓಲೆ, ಬ್ರಾಸ್ ಲೆಟ್ ಸೇರಿದಂತೆ ಹದಿಮೂರೂವರೆ ತೊಲ ಬಂಗಾರದ ಆಭರಣ ಮತ್ತು ಬೆಳ್ಳಿ ಚೈನ್, ಲಕ್ಷ್ಮಿ ವಿಗ್ರಹ ಸೇರಿದಂತೆ  340ಗ್ರಾಂ ಬೆಳ್ಳಿ ಸಾಮಾನುಗಳನ್ನು ಕಳ್ಳರು ಕದ್ದಿದ್ದಾರೆ.

ಮನೆಯ ಬೀರುವಿನಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಕಳ್ಳತನವಾಗಿರುವುದು ಮನೆಯವರಿಗೆ  ನಸುಕಿನ ಜಾವ  ಗೊತ್ತಾಗಿದೆ.

ಮನೆಯೊಡತಿ ಹೊಸಹಳ್ಳಿ ಪೊಲೀಸರಿಗೆ ಮಾಹಿತಿ ತಿಳಿದಿದ್ದು,

ತಕ್ಷಣ  ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ ಐ ನಾಗರತ್ನಮ್ಮ, ಎಎಸ್ ಐ.ಟಿ. ಪ್ರಕಾಶ್, ಮುಖ್ಯಪೇದೆ ಇರ್ಷಾದ್ , ಮಾರೇಶ್ ಪೇದೆ ಸುರೇಶ್ ಭೇಟಿ ನೀಡಿದ್ದಾರೆ. ಬಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ ಗ್ರಾಮ ಲೆಕ್ಕಾಧಿಕಾರಿ ವಾಣಿ ನೀಡಿದ ದೂರಿನಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;