;

ತಹಶಿಲ್ದಾರರ ಕಚೇರಿಯಲ್ಲಿ ಸ್ವಾತಂತ್ರ್ಯೊತ್ಸವ ಪೂರ್ವಭಾವಿ ಸಭೆ…!!!

ತಹಶಿಲ್ದಾರರ ಕಚೇರಿಯಲ್ಲಿ ಸ್ವಾತಂತ್ರ್ಯೊತ್ಸವ ಪೂರ್ವಭಾವಿ ಸಭೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಹಶಿಲ್ದಾರರ ಕಚೇರಿಯಲ್ಲಿ ಆ 4ರಂದು, ತಹಶಿಲ್ದಾರ್ ಟಿ.ಜಗದೀಶ್ ರವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡಂತೆ ಸ್ವಾತಂತ್ರ್ಯ್ರೋತ್ಸವ ಪೂರ್ವಭ‍ವಿ ಸಭೆ ಜರುಗಿತು.ತಹಶಿಲ್ದಾರರಾದ ಟಿ.ಜಗದೀಶರವರು ಮಾತನಾಡಿ 70ನೇ ಸ್ವಾತಂತ್ರ್ಯೋತ್ಸವವನ್ನು ವಿಶೇಷ ವಾಗಿ ಆಚರಿಸಬೇಕಿದೆ, ಆದರೆ ಕೋವಿಡ್ 3ನೇ ಅಲೆಯ ಆತಂಕ ಮನೆ ಮಾಡಿರುವುದರಿಂದಾಗಿ ಜಾಗೃತಿ ಅಗತ್ಯ ಎಂದರು.

ತಹಶಿಲ್ದಾರರ ಕಚೇರಿಯಲ್ಲಿ ಸ್ವಾತಂತ್ರ್ಯೊತ್ಸವ ಪೂರ್ವಭಾವಿ ಸಭೆ*-

ವಿಜಯನಗರ ಜಿಲ್ಲೆ ಕೂಡ್ಲಿಗಿ ತಹಶಿಲ್ದಾರರ ಕಚೇರಿಯಲ್ಲಿ ಆ 4ರಂದು, ತಹಶಿಲ್ದಾರ್ ಟಿ.ಜಗದೀಶ್ ರವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡಂತೆ ಸ್ವಾತಂತ್ರ್ಯ್ರೋತ್ಸವ ಪೂರ್ವಭ‍ವಿ ಸಭೆ ಜರುಗಿತು.ತಹಶಿಲ್ದಾರರಾದ ಟಿ.ಜಗದೀಶರವರು ಮಾತನಾಡಿ 70ನೇ ಸ್ವಾತಂತ್ರ್ಯೋತ್ಸವವನ್ನು ವಿಶೇಷ ವಾಗಿ ಆಚರಿಸಬೇಕಿದೆ, ಆದರೆ ಕೋವಿಡ್ 3ನೇ ಅಲೆಯ ಆತಂಕ ಮನೆ ಮಾಡಿರುವುದರಿಂದಾಗಿ ಜಾಗೃತಿ ಅಗತ್ಯ ಎಂದರು.
ಸರ್ಕಾರದ ನಿಯಮಗಳನ್ನ ಪಾಲಿಸುವ ಮೂಲಕ ಎಲ್ಲರೂ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕಿದೆ,


ತಾಲೂಕಾಡಳಿತದಿಂದ ಸಾರ್ವಜನಿಕವಾಗಿ ಧ್ವಜಾರೋಹಣ ಹಾಗೂ ಪೂರಕ ಕಾರ್ಯಕ್ರಮಗಳನ್ನು ನಿಯಮಾನುಸಾರ ಆಚರಿಸಲಾಗುತ್ತದೆ.
ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಾರ್ವಜನಿಕ ಸ್ವಾತಂತ್ರ್ಯೊತ್ಸವ ಕಾರ್ಯಕ್ರಮ ಸಂದರ್ಭದಲ್ಲಿ, ಪ್ರತಿಯೊಬ್ಬರು ಕೋವಿಡ್ ನಿಯಮಗಳನ್ನ ಪಾಲಿಸುವುದು ಖಡ್ಡಾಯವಾಗಿದೆ ಎಂದರು. ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿರುವ ಎಲ್ಲಾ ಕಚೇರಿಗಳಲ್ಲಿ ಧ್ವಜಾರೋಹಣ ಖಡ್ಡಾಯ, ಹಳೇ ಹಾಗೂ ಮಾಸಿದ ಧ್ವಜವನ್ನ ಬಳಸದೇ ಎಲ್ಲರೂ ಸ್ವಚ್ಛ ಹಾಗೂ ಶಭ್ರ ಧ್ವಜವನ್ನ ನಿಯಮಾನುಸಾರ ಹಾರಿಸಬೇಕೆಂದರು. ಇಲಾಖೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನ ಗುರುತಿಸಿ,ಅವರನ್ನು ಆಯಾ ಇಲಾಖಾ ಕಚೇರಿಯ ಆವರಣದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಅಭಿನಂಧಿಸಿ ಸನ್ಮಾನಿಸಿ ಗೌರವಿಸಬೇಕಾಗಿದೆ ಎಂದರು. ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಅಧಿಕಾರಿಗಳು ಸರ್ವಾನು ಮತದಿಂದ ಸಮ್ಮತಿ ಸೂಚಿಸಿದರು,ಪ್ರತಿ ಭಾರಿಯ ಸ್ವಾತಂತ್ರ್ಯೊತ್ಸವದಲ್ಲಿ ಜವಾಬ್ದಾರಿಗಳನ್ನು,ಈ ಭಾರಿಯ ಸ್ವಾತಂತ್ರ್ಯೋತ್ಸವದಲ್ಲಿ ಎತಾವತ್ತಾಗಿ ನಿರ್ವಹಿಸುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಸಿಪಿಐ ವಸಂತ ಅಸೋದೆ,ಅಪರಾಧ ಪಿಎಸ್ಐ ಮಾಲಿಕ್ ಸಾಬ್ ಕಿಲಾರಿ,ಪಿಎಸ್ಐ ಶರತ್ ಕುಮಾರ,ಟಿಹೆಚ್ಓ ಷಣ್ಮುಖ ನಾಯ್ಕ್,ಶಿಕ್ಷಣ ಇಲಾಖೆಯ ತಳವಾರ ಶರಣಪ್ಪ,ಎಸ್ಟಿ ಇಲಾಖಾಧಿಕಾರಿ ಮೆಹಬೂಬ್ ಭಾಷಾ,ಪಪಂ ಮುಖ್ಯಾಧಿಕಾರಿ ಪಕೃದ್ಧೀನ್ ,ಪಿ.ವಿ.ಕೊತ್ಲಪ್ಪ,ಶಾಸಕರ ಆಪ್ತ ಸಹಾಯಕ ಶ್ರೀಕಾಂತ್, ಸೇರಿದಂತೆ ವಿವಿದ ಇಲಾಖಾಧಿಕಾರಿಗಳು ಸಭೆಯಲ್ಲಿದ್ದರು.

 

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;