;

|| ಎಚ್.ಎಂ.ಮರುಳಸಿದ್ಧಯ್ಯ ನವರ 92 ನೇ ಜನ್ಮದಿನವನ್ನು ಹಿರೇಕುಂಬಳಗುಂಟೆ” ಗ್ರಾಮದ “ಪುಸ್ತಕ ಮನೆ” ಯಲ್ಲಿ , ಸರಳವಾಗಿ,ಅರ್ಥಪೂರ್ಣವಾಗಿ ಆಚರಿಸಲಾಯಿತು…!!!

ಕರ್ನಾಟಕದ ಸಮಾಜಕಾರ್ಯ ಕ್ಷೇತ್ರದ ಪ್ರಪಿತಾಮಹರೂ,ಬರಹಗಾರರೂ,ಚಿಂತಕರೂ ಆದ ಪ್ರೊಫೆಸರ್ ಡಾ|| ಎಚ್.ಎಂ.ಮರುಳಸಿದ್ಧಯ್ಯ ನವರ 92 ನೇ ಜನ್ಮದಿನವನ್ನು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ
“ಹಿರೇಕುಂಬಳಗುಂಟೆ” ಗ್ರಾಮದ “ಪುಸ್ತಕ ಮನೆ” ಯಲ್ಲಿ , ಸರಳವಾಗಿ,ಅರ್ಥಪೂರ್ಣವಾಗಿ ಆಚರಿಸಲಾಯಿತು.

ಅಕ್ಷರ ಫೌಂಡೇಶನ್ ನ ಶ್ರೀ ಎಚ್.ಬಿ.ಕಣ್ಣಿ , ಶ್ರೀ ರಮೇಶ್ ಗ್ರಾ.ಪಂ.ಅಧ್ಯಕ್ಷರು, ಜಿ.ಬಿ.ವಿಶ್ವನಾಥ ಗೌಡ ಗ್ರಾ.ಪಂ.ಸದಸ್ಯರು,ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಶ್ರೀ ಲೋಕೇಶ್,ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶಾಮಸುಂದರ್ ಸಫಾರೆ,& ಸಿಬ್ಬಂದಿ,ಪ್ರೌಢಶಾಲೆಯ ಶ್ರೀ ಮಂಜುನಾಥ್, ಶಿವಸ್ವಾಮಿ& ಸಿಬ್ಬಂದಿ,ಸ್ಥಳೀಯ ಅಂಗನವಾಡಿಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಗ್ರಾ.ಪಂ.ಅಧ್ಯಕ್ಷರಾದ ರಮೇಶ್ ಸಂದರ್ಭದಲ್ಲಿ ಮಾತಾಡುತ್ತಾ “ಡಾ|| ಎಚ್.ಎಂ.ಎಂ. ನಮ್ಮ ಭಾಗದ ಸದಾ ಕಾಲದ ಜಾಗೃತ ವ್ಯಕ್ತಿತ್ವ. ಅವರ ಗ್ರಾಮೀಣಾಭಿವೃದ್ಧಿಯ ಚಿಂತನೆಗಳು ಇಂದಿಗೂ ಸರ್ವಮಾನ್ಯವಾದುವು” ಎಂದರು.
ಸಿ.ಆರ್.ಪಿ.ಲೋಕೇಶ್, “ಡಾ|| ಎಚ್.ಎಂ.ಎಂ.ರವರ ಜೀವನ-ಚಿಂತನೆಗಳನ್ನು ತಾಲೂಕಿನ ಎಲ್ಲಾ ಶಾಲೆಯ ಮಕ್ಕಳಿಗೆ ನಿರಂತರವಾಗಿ ತಲುಪಿಸುವ ಕೆಲಸವಾಗಬೇಕಿದೆ” ಎಂದರು.
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶಾಮಸುಂದರ ಸಫಾರೆ ಯವರು “ಸಮಾಜ ಕಾರ್ಯ ಕ್ಷೇತ್ರದಲ್ಲಿ ಡಾ|| ಎಚ್.ಎಂ.ಎಂ.ರವರ ಸಾಧನೆಯು ಅದ್ವಿತೀಯವಾದುದು. ಅವರ ಕನಸುಗಳನ್ನು ಇಂದಿನ ಜನಪ್ರತಿನಿಧಿಗಳು ಅನುಷ್ಠಾನಗೊಳಿಸಿದ್ದೇ ಆದರೆ,ಗ್ರಾಮಭಾರತವು ಸಧೃಢಗೊಳ್ಳುತ್ತದೆ” ಎಂದರು.
ಅಕ್ಷರ ಫೌಂಡೇಶನ್ ನ ಶ್ರೀ ಎಚ್.ಬಿ.ಕಣ್ಣಿಯವರು ಮಾತನಾಡುತ್ತಾ “ನಿರ್ಮಲ ಕರ್ನಾಟಕದ ಕನಸು ಕಂಡವರು ಡಾ|| ಎಚ್.ಎಂ.ಎಂ.! ಅವರ ಕಾರ್ಯಕ್ಷೇತ್ರವಾದ ಈ ” ಪುಸ್ತಕ ಮನೆ” ಯು ಅಲೌಕಿಕ ಶಕ್ತಿ ಕೇಂದ್ರವಾಗಿದೆ.ದೇವಸ್ಥಾನದಂತೆ ಪವಿತ್ರವೂ ಆಗಿದೆ” ಎಂದರು.
ಸಂದರ್ಭದಲ್ಲಿ ಹಿ.ಮ.ನಾಗಯ್ಯ ಪ್ರೌಢಶಾಲೆಯ ಕೆ.ಎಂ.ಮಂಜುನಾಥ್,ಶಿವಸ್ವಾಮಿಯವರೂ ಮಾತನಾಡಿದರು.
ಕಾರ್ಯಕ್ರಮವನ್ನು “ಪುಸ್ತಕ ಮನೆ ಬಳಗ” ದ ಜಿ.ಎಂ.ನಾಗರಾಜ್ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಶ್ರೀಮತಿ ದೊಡ್ಡಬಸಮ್ಮ ಮಹಿಳಾ ಸಮಾಜದ ಸದಸ್ಯೆಯರು, ಟೈಲರಿಂಗ್ ತರಬೇತಿ ಕೇಂದ್ರದ ಮಹಿಳೆಯರು, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು,ಪ್ರೌಢ ಶಾಲೆಯ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಅಕ್ಷರ ಫೌಂಡೇಶನ್ ವತಿಯಿಂದ N -95 ಮಾಸ್ಕುಗಳನ್ನು ವಿತರಿಸಿ ಆರೋಗ್ಯ ಜಾಗೃತಿ ಮೂಡಿಸಲಾಯಿತು. ಮಕ್ಕಳಿಗೆ ಸಿಹಿಯನ್ನೂ ವಿತರಿಸಲಾಯಿತು…

ವರದಿ. ವಿರೇಶ್, ಕೆ, ಎಸ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *