;

ರಾಂಪುರ: ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ.!

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರದಲ್ಲಿ ಇಂದು (ಜು,29) ಶಾಸಕ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣ ಅವರಿಗೆ ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ರಾಷ್ಟ್ರೀಯಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ರಾಂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡುತ್ತ ಘೋಷಣೆಯ ಕೂಗುತ ಮಾತನಾಡಿದರು. ನುಡಿ, ಸರಳ ವ್ಯಕ್ತಿತ್ವ, ಹತ್ತಿಯಂಥ ಹಿರಿಯ ನಾಗರಿಕರ ರಾಜಕೀಯ ವ್ಯಕ್ತಿ, ಇಂಥ ರಾಜಕಾರಣಿಗಳು ಅಪರೂಪದ ಒಂದೇ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ 6 ಬಾರಿ ಶಾಸಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗೆ ಇದ್ದು ಒಂದು ಬಾರಿ ಸಚಿವರಾಗಿ ಹಾಗೂ ಡೆಪ್ಯುಟಿ ಸ್ಪೀಕರ್ ಹಾಗಿ ಹಾಗೂ ಹತ್ತಾರು ಉನ್ನಾತ ಉದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ವಿದೆ. ಕರ್ನಾಟಕ ದಲ್ಲೆ ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಯನ್ನು ಅಭಿವೃದ್ಧಿ ಮೂಲಕ ಆ ಹಣೆಪಟ್ಟನ್ನು ತೆಗೆಯುತ್ತಿದ್ದರೆ. ಇಂತವರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದರೆ ತಾಲೂಕಿನ ಅಭಿವೃದ್ಧಿಯ ಜೊತೆ ಜಿಲ್ಲೆ ಹಾಗೂ ರಾಜ್ಯಕ್ಕೂ ಒಬ್ಬ ಸಮರ್ಥ ಸಚಿವರಾಗಿ ನಿಲ್ಲುವ ನಾಯಕರಾಗುತ್ತರೆ. ನೂತನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರದಲ್ಲಿ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಾರೆ ಎಂಬ ನಂಬಿಕೆಯಿಂದ ನಮ್ಮ ಶಾಸಕರಿಗೆ ಸಚಿವ ಸಂಪುಟದಲ್ಲಿ ಸಚಿವಸ್ಥಾನ ನೀಡಬೇಕೆಂದು ರಾಂಪುರ ಎನ್ ವೈ ಗೋಪಾಲಕೃಷ್ಣ ಅವರ ಅಭಿಮಾನಿಗಳು ಕೇಳಿ ಕೊಳ್ಳುತ್ತಿದ್ದೇವೆ. ಈ ಸಂದರ್ಭದಲ್ಲಿ ರಾಂಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪರಮೇಶ್ವರಪ್ಪ, ಬಸವರಾಜ್, ಸಿದ್ದರಾಮ್, ಸಿದ್ದನಗೌಡ, ಸದಸ್ಯರಾದ ಲೋಕೇಶ್ ರೆಡ್ಡಿ, ಗೋವಿಂದಪ್ಪ, ನರಸಿಂಹ ರೆಡ್ಡಿ ತಮ್ಮನಹಳ್ಳಿ, ತಿಪ್ಪೇಸ್ವಾಮಿ ರಾಮಸಾಗರ, ಯುವ ಮುಖಂಡರಾದ ಜಿ.ಬಿ.ಭರತ್ ಕುಮಾರ್, ಹೊನ್ನರಪ್ಪ, ಕಾಡಪ್ಪ ಬಲರಾಮ, ಕೋನಪುರ ಪಾಲಯ್ಯ, ಇನ್ನು ವಿವಿಧ ಹಳ್ಳಿಯ ಅಭಿಮಾನಿಗಳು ಬಿಜೆಪಿಯ ಮುಖಂಡರುಗಳು ಉಪಸ್ಥಿತರಿದ್ದರು..

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend