ಮೊಳಕಾಲ್ಮೂರು: ಸಂಧ್ಯಾ ಸುರಕ್ಷಾ, ವಿಧವೆಯರ ವೇತನ ನೀಡುವಂತೆ ಆಗ್ರಹಿಸಿ, ಬಾಂಡ್ರಾವಿ ಗ್ರಾಮದ ವೃದ್ದರು ಧರಣಿ.!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಸಂಧ್ಯಾ ಸುರಕ್ಷಾ, ವಿಧವೆಯರ ವೇತನ ನೀಡುವಂತೆ ಆಗ್ರಹಿಸಿ ತಾಲೂಕಿನ ಬಾಂಡ್ರಾವಿ ಗ್ರಾಮದ ವೃದ್ದರು ತಹಸೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ. ತಾಲೂಕು ಕಚೇರಿ ಆವರಣದಲ್ಲಿ ಕುಳಿತಿದ್ದ ಹತ್ತಾರು ವೃದ್ದರಿಗೆ ಕಳೆದ 7 ತಿಂಗಳಿನಿಂದ ಸಂದ್ಯಾ ಸುರಕ್ಷಾ, ವಿಧವಾ ವೇತನ ನೀಡಿಲ್ಲ ಪರಿಣಾಮ ಸಂಕಷ್ಟಕ್ಕೀಡಾಗುವಂತಾಗಿದೆ. ಕನಿಷ್ಟ ಔಷಧಗಳನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ. ವೇತನಕ್ಕಾಗಿ ಬ್ಯಾಂಕಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ. ವೇತನದಿಂದ ಸ್ವಲ್ಪವಾದರೂ ನೆರವಾಗುತ್ತದೆ ಹಾಗಾಗಿ ನಮಗೆ ವೇತನ ಕೊಡಿಸಿ ಎಂದು ಮಾಧ್ಯಮದ ಮೂಲಕ ಮನವಿ ಮಾಡಿಕೊಂಡರು. ತಾಲೂಕಿಗೆ ಗಡಿ ಗ್ರಾಮವಾಗಿರುವ ನಾವುಗಳು ತಾಲೂಕು ಕಚೇರಿಗೆ ಬರಲು ಸಾಧ್ಯವಾಗುವುದಿಲ್ಲ, ಬಸ್‌ಗಳಲ್ಲಿ ಹತ್ತಿ ಇಳಿಯಲು ಕಷ್ಟವಾಗುತ್ತದೆ. ನಮಗೆ ನಿಂತಿರುವ ವೇತನ ಕೊಡಿಸುವಂತೆ ಒತ್ತಾ ಯಿಸಿದಾಗ ಸ್ಥಳಕ್ಕೆ ಬಂದ ತಾಲೂಕು ಕಚೇರಿ ಸಿಬ್ಬಂಧಿ ವೃದ್ದರ ಸಮಸ್ಯೆಯನ್ನು ಆಲಿಸಿ ಎಲ್ಲರ ದಾಖಲೆಗಳನ್ನು ಪರಿಶೀಲಿಸಿದರು. ಕೆಲವರ ಬ್ಯಾಂಕ್ ಖಾತೆಗಳು ಮತ್ತು ಆಧಾರ್
ಸಂಖ್ಯೆಯಲ್ಲಿ ಲೋಪಗಳಿರಬಹುದು ಎಂದು ದಾಖಲೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ರಾಮಕ್ಕ, ನಿಂಗಮ್ಮ, ಗಂಗಮ್ಮ, ಆಂಜಿನಮ್ಮ, ಭಾಗ್ಯಮ್ಮ, ಹೊನ್ನೂರಮ್ಮ, ಗಂಗಮ್ಮ, ಜಯಮ್ಮ, ಇನ್ನಿತರರು ಉಪಸ್ಥಿತರಿದ್ದರು..

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend