ಕೂಡ್ಲಿಗಿ :-ಬೈಕ್ ಗೆ ಅಪರಿಚಿತವಾಹನ ಡಿಕ್ಕಿಹೊಡೆದ ಪರಿಣಾಮ ವಾಹನಸವಾರರಿಬ್ಬರು ಮೃತಪಟ್ಟಿದ್ದಾರೆ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮೊರಬ ಗ್ರಾಮದ ಹೊರವಲಯದಲ್ಲಿ,ರಾಷ್ಟ್ರೀಯ ಹೆದ್ಧಾರಿ 50ರಸ್ಥೆಯಲ್ಲಿ ಬೆಳ್ಳಂಬೆಳಿಗ್ಗೆ1:30ಗಂಟೆಗೆ ಅಘಾತ ಸಂಭವಿಸಿದೆ.ಬೈಕ್ ಗೆ ಅಪರಿಚಿತವಾಹನ ಡಿಕ್ಕಿಹೊಡೆದ ಪರಿಣಾಮ ವಾಹನಸವಾರರಿಬ್ಬರು ಮೃತಪಟ್ಟಿದ್ದಾರೆ.

ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ 20ನೇ ವಾರ್ಡ್ ಗೋವಿಂದ ಗಿರಿತಾಂಡ ವಾಸಿ ಪೀಕ್ಯ‍ಾನಾಯ್ಕ(50)ಶಂಕರನ‍ಾಯ್ಕ(30)ಮೃತ ದುರ್ಧೈವಿಗಳಾಗಿದ್ದಾರೆ.

ಇವರು ತಮ್ಮ ಗ್ರಾಮದಿಂದ ಮೈಸೂರು ಕಡೆಗೆ ಉದ್ಯೋಗ ಅರಸಿ ಗುಳೇ ಹೊರಟಿದ್ದರು,ತಮ್ಮ ಗ್ರಾಮದಿಂದ ಗುಳೇ ಹೊರಟಿದ್ದ ವಾಹನಗಳನ್ನು ಹಿಂಬಾಲಿಸಿಕೊಂಡು ಬೈಕ್ ನಲ್ಲಿ ಚಲಿಸುತ್ತಿರುವಾಗ.ಅಪರಿಚಿತ ವಾಹನ ಬೈಕ್ ಗೆ ರಭಸವಾಗಿ ಡಿಕ್ಕಿಹೊಡೆದಿದೆ,ಪರಿಣಾಮ ಬೈಕ್ ನಜ್ಜು ಗುಜ್ಜಾಗಿದ್ದು ಬೈಕ್ ನಲ್ಲಿದ್ದ ಪೀಕ್ಯಾನಾಯ್ಕ ಸ್ಥಳದಲ್ಲಿಯೇ ಧಾರುಣವಾಗಿ ಸಾವನ್ನಪ್ಪಿದ್ದು,ಗಾಯಾಳು ಶಂಕರನಾಯ್ಕ ಬಳ್ಳಾರಿ ವಿಮ್ಸ್ ಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮದ್ಯ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದ ಕೂಡಲೇ ಕೂಡ್ಲಿಗಿ ಹೈವೇ ಪೆಟ್ರೋಲ್ ಪೊಲೀಸ್ ಸಿಬ್ಬಂದಿ ರೇವಣ್ಣ ಹಾಗೂ ಮತ್ತಿತರರು,ಕೂಡ್ಲಿಗಿ 108ಸಿಬ್ಬಂದಿ ಅಪಘಾತ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವರದಿ. ಬಸಣ್ಣಿ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend