ಕೇಂದ್ರದ ಎಐಸಿಸಿ ಹಾಗೂ ರಾಜ್ಯ ಕೆಪಿಸಿಸಿ ನಿರ್ದೇಶನದಂತೆ ಕೋವಿಡ್ ಸಹಾಯ-ಹಸ್ತ ಪ್ರಯುಕ್ತ ಹಾಗೂ ಬೆಲೆ ಏರಿಕೆಯನ್ನು ವಿರೋದಿಸಿ ಚಳ್ಳಕೆರೆಯಲ್ಲಿ ಸೈಕಲ್ ಜಾಥಾ
ಚಿತ್ರದುರ್ಗ ಜಿಲ್ಲಾ ಉಸ್ತುವಾರಿಗಳು ಹಾಗೂ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರಾದ ವಿ.ಎಸ್ ಉಗ್ರಪ್ಪರವರು ಹಾಗೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ ರಘುಮೂರ್ತಿ ಅವರ ನೇತೃತ್ವದಲ್ಲಿ ಸೈಕಲ್ ಜಾಥಾ ಮಾಡಲಾಯಿತು
ಚಳ್ಳಕೆರೆ ಹೆಚ್ ಪಿ ಪಿ ಸಿ ಕಾಲೇಜಿನ ಜಗಜೀವನ್ ರಾಮ್ ವೃತ್ತದಿಂದ ಚಳ್ಳಕೆರೆ ನಗರದಾದ್ಯಂತ ಸೈಕಲ್ ರ್ಯಾಲಿನ್ನು ಪ್ರಾರಂಭಿಸಲಾಯಿತುಕೋವಿಡ್ ಸಹಾಯ-ಹಸ್ತ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪೆಟ್ರೋಲ್ – ಡೀಸೆಲ್ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಜಾಥ.
ಎಐಸಿಸಿ ನಿರ್ದೇಶನದಂತೆ ‘ಕೋವಿಡ್ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕರ್ನಾಟಕ ಕಾಂಗ್ರೆಸ್ ವತಿಯಿಂದ ನೇರವಾಗುವ ಸಲುವಾಗಿ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಕೋವಿಡ್ ಸಹಾಯಹಸ್ತ’ ಕಾರ್ಯಕ್ರಮಕ್ಕೆ ಇಂದು ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರಾದ ವಿ.ಎಸ್ ಉಗ್ರಪ್ಪರವರೊಂದಿಗೆ ಅಧ್ಯಕ್ಷತೆಯಲ್ಲಿ ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ ರಘುಮೂರ್ತಿ ಸೈಕಲ್ ಜಾಥಕ್ಕೆ ಚಾಲನೆ ನೀಡಿದರು.
ವಿ.ಎಸ್ ಉಗ್ರಪ್ಪರವರು ಮತ್ತು ಚಳ್ಳಕೆರೆ ಶಾಸಕರಾದ ಟಿ ರಘುಮೂರ್ತಿಯರವ ನೇತ್ರತ್ವದಲ್ಲಿ ಹಮ್ಮಿಕೊಂಡಿದ್ದ ಈ ಸೈಕಲ್ ಜಾಥಾದಲ್ಲಿ ಕಾಂಗ್ರೇಸ್ ಹಲವು ಮುಖಂಡರು ಸೇರಿದ್ದಂತೆ ಪಕ್ಷದ ಕಾರ್ಯಕರ್ತರು ಭಾಗಿಯಾಗಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿದರು.
ಈ ಸಂದರ್ಭದಲ್ಲಿ…. ನಗರಸಭೆ ಸದಸ್ಯರು ರಮೇಶ್ ಗೌಡ ತಾಲೂಕು ಪಂಚಾಯತಿ ಸದಸ್ಯರು ಅದ ವೀರೇಶ್ ಹಾಗೇ ಕಾಂಗ್ರೆಸ್ ಕಾರ್ಯಕರ್ತರು ಉಪ್ಥಿತರಿದ್ದರು.

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
