ಚಿತ್ರದುರ್ಗ: ಜಿಲ್ಲಾ ಮೊಳಕಾಲ್ಮೂರು ತಾಲ್ಲೂಕಿನ ಉದ್ಯೋಗ ಖಾತ್ರಿ ಯೋಜನೆಯಡಿ
ನೇರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಮರ್ಲಹಳ್ಳಿ, ಹಾಗೂ ಬಂಡೆ ಸುರಯ್ಯನ ಹಟ್ಟಿ, ಸರ್ಕಾರಿ ಹಳ್ಳದಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿರುವವರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸರಕಾರದ ದೂರದೃಷ್ಟಿಯ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಕೂಲಿ ಕಾರ್ಮಿಕರಿಗೆ ಆರ್ಥಿಕವಾಗಿ ಸಹಕಾರಿಯಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ಎನ್.ಜಿ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ಜನರ ದುಡಿಯುವ ಕೈಗಳಿಗೆ ಉದ್ಯೊಗವನ್ನು ನೀಡುವ ವೈಶಿಷ್ಟ್ಯಪೂರ್ಣ ಯೋಜನೆಯಾಗಿದೆ. ಒಂದು ಆರ್ಥಿಕ ವರ್ಷದಲ್ಲಿಸ್ವ ಆಸಕ್ತಿಯಿಂದ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವ ಕುಟುಂಬಕ್ಕೆ 100 ದಿನಗಳ ಕಾಲ ಉದ್ಯೋಗ ನೀಡಲಾಗುತ್ತದೆ ಎಂದರು. ನರೇಗಾ ಯೋಜನೆಯಲ್ಲಿಮಹಿಳೆ ಮತ್ತು ಪುರುಷರಿಗೂ ಸಮಾನವಾದ ಕೂಲಿ ನೀಡಲಾಗುತ್ತದೆ. ಶ್ರಮದ ಪ್ರತಿಫಲವನ್ನು ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗುತ್ತದೆ. ಯೋಜನೆ ಲಾಭವನ್ನು ಪಡೆಯಬೇಕು ಎಂದು ಕೂಲಿ ಕಾರ್ಮಿಕರಿಗೆ ಮನವಿ ಮಾಡಿದರು.

ವರದಿ. ಮಂಜುನಾಥ್, ಎಚ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
