ಕಲ್ಯಾಣ ಕರ್ನಾಟಕ ಸಂಘದ ಕಾರ್ಯ ಶ್ಲಾಘನೀಯ
ಕೂಡ್ಲಿಗಿ: ಗ್ರಾಮೀಣ ಭಾಗಗಳಲ್ಲಿ ಕೃಷಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು ಹಾಗೂ ಸರಳ ಸಾತ್ವಿಕ ವ್ಯಕ್ತಿತ್ವದ ಶ್ರೀ ಬಸವರಾಜ್ ಪಾಟೀಲ್ ಸೇಡಂ ಜೀ ನಮ್ಮೆಲ್ಲರಿಗೂ ಆದರ್ಶ ಎಂದು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಶ್ರೀ ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.
ಸೋಮವಾರ ತಾಲೂಕಿನ ಬಣವಿಕಲ್ಲು ಗ್ರಾಮದ ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಸಂಘದ ವತಿಯಿಂದ ಪರೇಡ್ ಬ್ಯಾಂಡ್ ಸೆಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣವು ಮಕ್ಕಳನ್ನು ಸಂಸ್ಕಾರಭರಿತರನ್ನಾಗಿಸುವಜೊತೆಗೆ ಸಮಾಜದಲ್ಲಿ ಸುಶಿಕ್ಷಿತರನ್ನು ಸೃಷ್ಟಿಸುವಂತಿರಬೇಕು ಎಂದರು. ಮುಖ್ಯೋಪಾಧ್ಯಾಯರಾದ ಶ್ರೀ ಮರುಳಸಿದ್ದಯ್ಯ ಮಾತನಾಡಿ ಸಹಾಯ ಮತ್ತು ಸೇವೆಯ ಮಹತ್ವವನ್ನು ತಿಳಿಸಿದರು ಮತ್ತು ಕಲ್ಯಾಣ ಕರ್ನಾಟಕ ಸಂಘದ ಘನ ಅಧ್ಯಕ್ಷರಾದ ಶ್ರೀ ಬಸವರಾಜ ಪಾಟೀಲ್ ಸೇಡಂ ಜೀ ಅವರು ವಿಧಾನಪರಿಷತ್ ಸದಸ್ಯರಾಗಿದ್ದಾಗಿನ ಅವರ ಕಾರ್ಯ ವೈಖರಿಯನ್ನು ಕೊಂಡಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಲ್ಲೇಶ್ ನಾಯ್ಕ್ ಇವರು ಶಿಕ್ಷಣ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಸಂಘದ ಕೊಡುಗೆಗೆ ಧನ್ಯವಾದ ತಿಳಿಸಿದರು.. ಕಲ್ಯಾಣ ಕರ್ನಾಟಕದ ಜಿಲ್ಲಾ ಸಂಯೋಜಕರಾದ ಸುಲ್ತಾನಪ್ಪ ಇವರು ಮಾತನಾಡಿ ಕಲ್ಯಾಣ ಕರ್ನಾಟಕ ಸಂಘದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.. ತಾಲೂಕು ಪ್ರಮುಖರಾದ ಶ್ರೀ ಮಲ್ಲಿಕಾರ್ಜುನಯ್ಯ ಮಾತನಾಡಿ ಮಕ್ಕಳು ಮೊಬೈಲ್ ದಾಸರಾಗದೇ ವ್ಯಕ್ತಿತ್ವ ವಿಕಸಕ್ಕೆ ಪೂರಕವಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕೂಡ್ಲಿಗಿ ತಾಲೂಕಿನ ಸಂಯೋಜಕರಾದ ಶ್ರೀ ಮಲ್ಲೇಶ್, ಶ್ರೀ ಮಂಜುನಾಥ , ಶ್ರೀ ಅಯ್ಯಣ್ಣ, ಶ್ರೀ ತಿಮ್ಮಪ್ಪ ಹಾಗೂ ಶ್ರೀಮತಿ ಗಾಯತ್ರಿ, ಪ್ರೌಢಶಾಲೆಯ ಸಿಬ್ಬಂದಿ ವರ್ಗ ಹಾಗೂ ಬಣವಿಕಲ್ಲು ಗ್ರಾಮದ ಸಲಹಾ ಸಮಿತಿ ಸದಸ್ಯರು ಮತ್ತು ಪ್ರಗತಿ ಕೇಂದ್ರ ಮತ್ತು ಕೌಶಲ್ಯ ಕೇಂದ್ರದ ಮಹಿಳಾ ಪ್ರಮುಖರು ಭಾಗವಹಿಸಿದ್ದರು..

ವರದಿ.ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
