ಮೊಳಕಾಲ್ಮುರು: ಶೇಂಗಾ ಬೆಳೆ ವಿಮೆ ಬಗ್ಗೆ ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಸಭೆ ನಡೆಸುವಂತೆ; ತಹಶೀಲ್ದಾರ್ ಗೆ ಮನವಿ.!

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನಲ್ಲಿರುವ ಶೇಂಗಾ ಬೆಳೆ ವಿಮೆ ಬಗ್ಗೆ ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಚರ್ಚಿಸಲು ಅವಕಾಶ ಕೋರಿ ಪಟ್ಟಣದಲ್ಲಿಂದು ತಹಶೀಲ್ದಾರ್ ಟಿ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.* ತಾಲ್ಲೂಕಿನ ಬೆಳೆ ವಿಮೆಯಲ್ಲಿ ಆಗಿರುವ ತಾರತಮ್ಯಗಳನ್ನು ಸರಿಪಡಿಸಲು ವಿಮಾ ಕಂಪನಿಗಳ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿದ ಕಾರ್ಯಕರ್ತರು ತಾಲೂಕ್ ಸದಾ ಕಾಲ ಬರಗಾಲಕ್ಕೆ ತುತ್ತಾಗುತ್ತಿದೆ. ಎಲ್ಲ ಗ್ರಾಮಗಳ ರೈತರು ಒಂದೇ ತರದ ಬದುಕನ್ನು ಕಾಣುತ್ತಿದ್ದೇವೆ. ಹೀಗಿದ್ದರೂ, ಸಂಬಂಧಿಸಿದ ಅಧಿಕಾರಿಗಳು ಬೆಳೆ ವಿಮೆ ವ್ಯಾಪ್ತಿಗೆ ಬೆರಳೆಣಿಕೆಯಷ್ಟು ಗ್ರಾಪಂಗಳನ್ನು ಒಳಪಡಿಸಿ ಇತರೆ ಪಂಚಾಯಿತಿಗಳನ್ನು ವಿಮಾ
ವ್ಯಾಪ್ತಿಯಿಂದ ವಂಚನೆ ಮಾಡಲಾಗಿದೆ. ಈ ಕೂಡಲೆ ಬೇಳೆ ವಿಮೆಯನ್ನು ಎಲ್ಲ ಪಂಚಾಯಿತಿಗಳಿಗೆ ಒಳಪಡಿಸಲು ವಿಮಾ ಕಂಪನಿಯ ಅಧಿಕಾರಿಗಳನ್ನು ಕರೆಸಿ ತುರ್ತುಸಭೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಕಂದಾಯ ಇಲಾಖೆಯವರು ಬೆಳೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಸಹ ಕೆಲ ಗ್ರಾಮ ಪಂಚಾಯಿತಿಗಳನ್ನು ವಿಮಾ ವ್ಯಾಪ್ತಿಯಿಂದ ಕೈ ಬಿಟ್ಟಿರುವುದು ತನ್ನು ಸಂಕಷ್ಟಕ್ಕೆ ಗುರಿ ಮಾಡಿದಂತಾಗಿದೆ. ಅಧಿಕಾರಿಗಳು ಎಲ್ಲಾ ಗ್ರಾಮಗಳಿಗೂ ಅನ್ವಯವಾಗುವಂತೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಆಗಿರುವ ಅನ್ಯಾಯವನ್ನು ಸರಿ ಪಡಿಸಲು ರೈತ ಮುಖಂಡರೊಡನೆ ಸಭೆ ನಡೆಸಬೇಕು ಈ ಸಭೆಗೆ ವಿಮಾ ಕಂಪನಿಗಳ ಅಧಿಕಾರಿಗಳನ್ನು ಕರೆಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ದಸಂಸ ತಾಲೂಕು ಸಂಚಾಲಕ ಕೊಂಡಾಪುರ ಪರಮೇಶ, ಬೆಳಗಲ್ ಈಶ್ವರಯ್ಯ ಸ್ವಾಮಿ, ಸಿಪಿಐ ಕಾರ್ಯದರ್ಶಿ ಜಾಫರ್ ಷರೀಪ್, ಡಿ.ಬಿ.ಕೃಷ್ಣಮೂರ್ತಿ, ಕನಕ ಶಿವಮೂರ್ತಿ, ಮರ್ಲಹಳ್ಳಿ ರವಿಕುಮಾರ್, ಮಂಜುನಾಥ, ಯರ್ರಜ್ಜನಹಳ್ಳಿ ನಾಗರಾಜ, ಕಾಮಯ್ಯ, ಮುತ್ತಯ್ಯ, ನಿಂಗಣ್ಣ, ತಿಮ್ಮಣ್ಣ, ಚಂದ್ರಣ್ಣ ಇನ್ನಿತರರು ಉಪಸ್ಥಿತರಿದ್ದರು.

ವರದಿ.ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend