*ಕೂಡ್ಲಿಗಿ:ಅಪಾಯದ ಅರಿವಿಲ್ಲದ ಅಧಿಕಾರಿ…!!!

ಕೂಡ್ಲಿಗಿ:ಅಪಾಯದ ಅರಿವಿಲ್ಲದ ಅಧಿಕಾರಿ
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ದೇವಸ್ಥಾನದ ಹತ್ತಿರದ,ಹೈಮಾಸ್ಕ್ ಲೈಟ್ ಕಂಬದ ಬುಡದಲ್ಲಿರುವ ಕಂಟ್ರೋಲ್ ಬೋರ್ಡ್ ಯಾವುದೇ ಸುರಕ್ಷತೆ ಇಲ್ಲದ ಸ್ಥಿತಿಯಲ್ಲಿದೆ.ಬಾಕ್ಸ್ ಬಾಗಿಲು ಬಾಯ್ತೆರೆದಿದ್ದು ಕಂಬದ ಬುಡದಲ್ಲಿ ನೆಲದ ಮೇಲಿದ್ದು, ಮಕ್ಕಳು ಆಕಸ್ಮಿಕವಾಗಿ ತಾಗಿದರೂ ಕೂಡ ಯಾವ ಕ್ಷಣದಲ್ಲಾದರೂ ಯಾವುದೇ ಅನಾವುತ ಸಂಭವಿಸಬಹುದಾಗಿದೆ.
ಪಪಂ ಕಚೇರಿಯಿಂದ ಕೂಗಳೆತ ಅಂತರದಲ್ಲಿದ್ದು ಅಪಾಯಕ್ಕೆ ಆವ್ಹಾನಿಸುವ ದುಸ್ಥಿತಿ ನಿರ್ಮಾಣವಾಗಿದ್ದು,ಕಂಡೂ ಕಾಣದಂತಿರುವ ಸಂಬಂಧಿಸಿದ ಇಲಾಖಾಧಿಕಾರಿಯ ನಿರ್ಲಕ್ಷ್ಯಕ್ಕೆ ವಂದೇ ಮಾತರಂ ಜಾಗೃತಿ ವೇದಿಕೆಯಿಂದ ತೀವ್ರ ವಿರೋಧ ಹಾಗೂ ಆಕ್ರಶೋ ವ್ಯಕ್ತವಾಗಿದೆ. ಶೀಘ್ರವೇ ಈ ದುರಾವಸ್ಥೆಯನ್ನು ಸುಸ್ಥಿತಿಗೆ ತರದಿದ್ದಲ್ಲಿ, ಸಂಭವಿಸಬಹುದಾದ ಅನಾಹುತ ಮತ್ತು ಅವಘಡಗಳಿಗೆ ಅಧಿಕಾರಿಯೇ ಹೊಣೆಗಾರರಾಗಲಿದ್ದು,ನಿರ್ಲಕ್ಷ್ಯತೆ ಮುಂದುವರೆದಿದ್ದಲ್ಲಿ ಉನ್ನತಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ಸಾರ್ವಜನಿಕರು ಈ ಮೂಲಕ ಎಚ್ಚರಿಸಿದ್ದಾರೆ.

ವರದಿ. ಡಿ, ಎಂ, ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend