ಶಾಸಕರಿಂದ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ…!!!

ದಿನಾಂಕ 28-6-2021 ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮ

ಕಾನ ಹೊಸಹಳ್ಳಿ ಗ್ರಾಮದಲ್ಲಿ ಮಾನ್ಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರಿಂದ ಕಾನ ಹೊಸಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಕಟ್ಟಡದ ಭೂಮಿ ಪೂಜ ಹಾಗು ಗ್ರಂಥಾಲಯದ ಕಟ್ಟಡದ ಭೂಮಿ ಪೂಜೆ ಮಾಡಲಾಯಿತು* ನಂತರ ಕಾನಹೊಸಹಳ್ಳಿ ಗ್ರಾಮಪಂಚಾಯಿತಿ ಹಾಗೂ ಹೊಸಹಳ್ಳಿ ಗ್ರಾಮದ ನಾಗರಿಕರಿಂದ ಕೂಡ್ಲಿಗಿ ತಾಲೂಕಿಗೆ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಕಾರಣರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರಿಗೆ ಗ್ರಾಮದ ಎಸ್ ಕೆಪಿಡಿವಿ ಪ್ರೌಢಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸದಸ್ಯರು ಸಿಬ್ಬಂದಿ ಅವರಿಂದ ಸನ್ಮಾನಿಸಲಾಯಿತು. ಹೊಸಹಳ್ಳಿ ಗ್ರಾಮದಲ್ಲಿ ಬಹುದಿನದ ಬೇಡಿಕೆಯಾಗಿದ್ದ ಗ್ರಂಥಾಲಯದ ಕಟ್ಟಡ ಹಾಗೂ ಗ್ರಾಮ ಪಂಚಾಯಿತಿ ಕಟ್ಟಡ ಗಳನ್ನು ಮಂಜೂರು ಮಾಡಿಕೊಟ್ಟ ಶಾಸಕರಿಗೆ ಸುತ್ತಮುತ್ತಲಿನ ಹಳ್ಳಿಯ ವಿದ್ಯಾರ್ಥಿಗಳಿಂದ, ಕಾನಹೊಸಹಳ್ಳಿ ನಾಗರಿಕರಿಂದ ಮುಖಂಡರಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಶ್ರೀಕಾಂತ್ ರವರು , ಬಿಜೆಪಿ ಹಿರಿಯ ಮುಖಂಡರಾದ ಕೆ ಎಂ ತಿಪ್ಪೇಸ್ವಾಮಿ, ಕೆ ಎಚ್ ವೀರನಗೌಡ, ಬಿ ಜೆ ಪಿ ಕೂಡ್ಲಿಗಿ ಮಂಡಲ ಅಧ್ಯಕ್ಷ ಚನ್ನಪ್ಪ, ಗುಂಡುಮುಣುಗು ತಿಪ್ಪೇಸ್ವಾಮಿ, ಹುರಲಿಯಾಳು ರೇವಣ್ಣ, ಹೂಡೇಮ್ ಪಾಪನಾಯಕ, ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಬೊಮ್ಮಯ್ಯ,ಉಪಾಧ್ಯಕ್ಷೆ ಬೋರಯ್ಯ, ಪಿ ಡಿ ಓ ಬಸಮ್ಮ ಗ್ರಾಮಪಂಚಯತಿ ಸರ್ವ ಸದಸ್ಯರು ಸಿಬ್ಬಂದಿಗೆ ವರ್ಗ,ಮುಖಂಡರಾದ ಕೆ ನ್ ಭೀಮಣ್ಣ, ಪಿನ್ ಬಸಣ್ಣ ಸೂರ್ಯ ಪಾಪಣ್ಣ,ಮುಖಂಡರಾದ ತುಂಬರಗುದ್ದಿ ದುರುಗೇಶ್, ಮಹಿಳಾ ಅಧ್ಯಕ್ಷೆ ಎಲ್ ಪವಿತ್ರ ಕುಂಬಾರ ಶಾರದಮ್ಮ ಸೇರಿದಂತೆ ಕಾನಹೊಸಹಳ್ಳಿ ನಾಗರಿಕರು ಸಾರ್ವಜನಿಕರು ಉಪಸ್ಥಿತರಿದ್ದರು.

ಡಿ ಎಂ ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend