ಮೊಳಕಾಲ್ಮೂರಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕಾರ ಹುಣ್ಣಿಮೆ ಹಬ್ಬ ಆಚರಿಸಿದ ರೈತರು…!!!

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣ ಸೇರಿದಂತೆ (ಜೂ,24) ರಂದು ತಾಲೂಕಿನ ಬಹುತೇಕ ಗ್ರಾಮಗಳಲ್ಲಿ, ಕೊರೊನಾ ಮಹಾಮಾರಿಯ ಸಂಕಷ್ಟದ ನಡುವೆಯೂ ಇಂದು,ರೈತರು ಕಾರ ಹುಣ್ಣಿಮೆ ಯನ್ನುಸರಳವಾಗಿ ಆಚರಿಸಿದರು. ಬೇಸಿಗೆ ಮುಗಿದನಂತರ, ಕೃಷಿ ಚಟುವಟಿಕೆಯಲ್ಲಿ ತೊಡಗುವ ಎತ್ತುಗಳಿಗೆ ಮೈತೊಳೆದು ಕೊರಳಿಗೆ ಗೆಜ್ಜೆಕಟ್ಟಿ, ವಿವಿಧ ರೀತಿಯಲ್ಲಿ ಅಲಂಕಾರ ಮಾಡಿ, ಮನೆಯಲ್ಲಿ ಹೋಳಿಗೆ ಸಿಹಿ ಪದಾರ್ಥಗಳನ್ನು ಮಾಡಿ, ಎತ್ತುಗಳಿಗೆ ತಿನ್ನಿಸುವ ಮೂಲಕ, ಎತ್ತುಗಳನ್ನು ದೇವಸ್ಥಾನವನ್ನು ಸುತ್ತಿಸಿದರೆ,ಇನ್ನು ಕೆಲವರು ಓಟದ ಸ್ಪರ್ಧೆ ನಡೆಸುವ ಮೂಲಕ ಖುಷಿಪಡುತ್ತಾರೆ. ಕಳೆದ ಹಲವು ವರ್ಷಗಳಿಂದ ಮಳೆ ಬೆಳೆ ಇಲ್ಲದೆ, ಎತ್ತುಗಳ ವ್ಯವಸಾಯ ಪಪಸ ಮರೀಚಿಕೆ ಆಗಿ, ಯಂತ್ರ ಬಳಕೆಯಿಂದ ಕೃಷಿ ಚಟುವಟಿಕೆ ನಡೆಸುವವರ ಮಧ್ಯೆ, ಇಂದಿಗೂ, ಎತ್ತುಗಳ ಬೇಸಾಯ ಜೀವಂತವಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend