ಮೊಳಕಾಲ್ಮೂರು: ಬೆಳೆ ವಿಮೆ ಪರಿಹಾರ ನೀಡುವಂತೆ ಒತ್ತಾಯಿಸಿ, ದಲಿತ ಸಂಘರ್ಷ ಸಮಿತಿ ಮನವಿ.!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನಲ್ಲಿ 2020- 21 ನೇ ಸಾಲಿನ ರೈತರ ಬೆಳೆ ವಿಮೆ ಪರಿಹಾರ ನೀಡುವಂತೆ ಒತ್ತಾಯಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೊಳಕಾಲ್ಮುರು ಶಾಖೆ ವತಿಯಿಂದ, ತಹಶೀಲ್ದಾರ್ ಸುರೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ 16 ಗ್ರಾಮ ಪಂಚಾಯಿತಿಗಳಲ್ಲಿ ಕೇವಲ 3 ಪಂಚಾಯಿತಿಗಳ ರೈತರಿಗೆ ಬೆಳೆ ಪರಿಹಾರಕ್ಕೆ ಅನುಮೋದನೆ ದೊರೆತಿದ್ದು, ಉಳಿದ 13 ಪಂಚಾಯಿತಿಗಳ ರೈತರಿಗೆ ಅನ್ಯಾಯವಾಗಿದೆ. ತಾಲೂಕಿನಲ್ಲಿ ಫಸಲ್ ಭೀಮಾ ಯೋಜನೆಯಡಿ 9501 ರೈತರು ನೋಂದಣಿ ಮಾಡಿಸಿದ್ದು, ಕೊಂಡ್ಲಹಳ್ಳಿ,ತುಮಕೂರ್ಲಹಳ್ಳಿ, ರಾಯಪುರ ಗ್ರಾಮದ 1000 ರೈತರಿಗೆ ಮಾತ್ರ ವಿಮಾ ಪರಿಹಾರದ ಅನುಕೂಲವಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ. ಕೂಡಲೇ, ಉಳಿದ 8501 ರೈತರಿಗೂ ಬೆಳೆ ವಿಮಾ ಪರಿಹಾರದ ಅನುಕೂಲವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ವಿಮಾ ಕಂಪನಿಗಳಿಗೆ ಶಿಫಾರಸು ಮಾಡಿ, ಹಣ ಬಿಡುಗಡಗೊಳಿಸುವಂತೆ ಸರ್ಕಾರಕ್ಕೆ ತಹಶೀಲ್ದಾರ್ ಮೂಲಕ, ಮನವಿ ಮಾಡಿದರು. ಇದೇ ವೇಳೆ, ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಕೊಂಡಾಪುರ ಪರಮೇಶ್ವರಪ್ಪ, ಕೋನಸಾಗರ ನಾಗೇಂದ್ರ, ಶಿವು, ಸೇರಿದಂತೆ, ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..

ವರದಿ.ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend