ಜಿಲ್ಲಾ ಕ್ಷಯರೋಗ ನಿರ್ಮೂಲನ ಕಛೇರಿ ಕೂಡ್ಲಿಗಿ ಹಾಗೂ ಮೈರಾಡ ಟಿ ಬಿ ರಿಚ್ ಸಹಯೋಗದಲ್ಲಿ 14ನೇ ಜೂನ್ 2021ರಂದು ಜರ್ಮಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗೆದ್ದಲಗಟ್ಟೆ ಹಳ್ಳಿಯಲ್ಲಿ ಕ್ಷಯರೋಗ ಸಹವಾದಿ ಇರುವ ಪ್ರದೇಶಗಳಲ್ಲಿ
ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ನಡೆಸಲಾಯಿತು.
ಸಕ್ರೀಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ಕೆ.ಎಂ. ಬಸವರಾಜ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರಾದ
ಎನ್. ರಾಮಸ್ವಾಮಿ, ಜಿ.ಪಂಕಜ, K. ಪಾಪಕ್ಕ ಹಾಗೂ ಕೆ.ಎಂ. ಜಾತಪ್ಪ ಬಿಲ್ ಕಲೆಕ್ಟರ್ ಗ್ರಾಮ ಪಂಚಾಯಿತಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಯ ರಾಜಕುಮಾರ್ ರವರು ಮಾತನಾಡಿ ಸಂಶಯಾತ್ಮಕ ಪ್ರದೇಶಗಳಲ್ಲಿ ಎರಡು ವಾರಕ್ಕಿಂತ ಹೆಚ್ಚು ಕಫ ಸಹಿತ ಕೆಮ್ಮು
ಜ್ವರ ಬರುವುದು
ದೇಹದ ತೂಕ ಕಡಿಮೆಯಾಗುವುದು ಲಕ್ಷಣವುಳ್ಳ ಹಾಗೂ ಸಕ್ಕರೆ ಕಾಯಿಲೆ ಮದ್ಯ ಮತ್ತು ಮಾದಕ ವ್ಯಸನಿಗಳಲ್ಲಿ ಕ್ಷಯರೋಗ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತದೆ ಹಾಗೂ ಕೋವಿಡ್ ಎರಡನೆಯ ಅಲೆಯಿಂದಾಗಿ ಜನರು ಸ್ವಯಂ ಪ್ರೇರಿತರಾಗಿ ಕಫ ಪರೀಕ್ಷೆಗೆ ಬರುತ್ತಿಲ್ಲ ಕಾರಣ ಈ ದಿನ ನಗರದ ಕೆಲ ಕೊಳಚೆ ಪ್ರದೇಶದಲ್ಲಿ ಸಕ್ರಿಯ ಕ್ಷಯರೋಗ ಆಂದೋಲನ ಹಮ್ಮಿಕೊಂಡು ಹಾಗೂ ಸಮೀಕ್ಷೆಯನ್ನು ಸಹ ಯಶಸ್ವಿಯಾಗಿ ನಡೆಸಿಕೊಡಲಾಯಿತು.
2025 ರೊಳಗೆ ಕ್ಷಯರೋಗ ಮುಕ್ತ ಭಾರತ ಮಾಡಲು ಎಲ್ಲರೂ ಸ್ವಯಂಸೇವಕರಾಗಿ ಕೆಲಸ ಮಾಡಬೇಕು ಎಂದು ಈ ಸಂದರ್ಭದಲ್ಲಿ ಮೈರಾಡ ಸಂಸ್ಥೆಯ
ಮಲ್ಲಿಕಾಜು೯ನ ಕೆ. ತಿಳಿಸಿದರು
ಈ ದಿನದ ಸಮೀಕ್ಷೆಯಲ್ಲಿ ಎನ್.ಟಿ. ಇ.ಪಿ. ಸಿಬ್ಬಂದಿಗಳಾದ
k ಮಾಹಂತೇಶ್ STLS,
ರಾಜಕುಮಾರ ಹಿರಿಯು ಚಿಕಿತ್ಸಾ ಮೆಲ್ವಿಚಾರಕರು
ಶಿವರಾಜ, ತಿಪ್ಪೇಶ್ ಅವಿನಾಶ್ ಮತ್ತು ಮಾಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳು
ಮೈರಾಡ ಸಂಸ್ಥೆಯ
ರಾಜ
ಮಲ್ಲಿಕಾರ್ಜುನ ಮತ್ತು ಗೌರಮ್ಮ
ಹಾಗೂ ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕತರು ಸಹ ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
