ಮರಬನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ದಲ್ಲಿ, ದಲಿತ ಕವಿ ದಿವಂಗತ, ಡಾ ಸಿದ್ದಲಿಂಗಯ್ಯನವರಿಗೆ, ಶ್ರದ್ಧಾಂಜಲಿ ಕಾರ್ಯಕ್ರಮ…!!!

ದಿನಾಂಕ 14,6.2021 . ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಮರಬನಹಳ್ಳಿ
ತಾಲೂಕಿನ  ಮರಬನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ ದಲ್ಲಿ, ದಲಿತ ಕವಿ ದಿವಂಗತ, ಡಾ ಸಿದ್ದಲಿಂಗಯ್ಯನವರಿಗೆ, ಶ್ರದ್ಧಾಂಜಲಿ ಕಾರ್ಯಕ್ರಮ ನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿ ಮಾರಪ್ಪನವರು ಭಾಗವಹಿಸಿ, ಸಿದ್ಧಲಿಂಗಯ್ಯನವರು ಕೇವಲ ದಲಿತ ಕವಿಯಲ್ಲ ಬಡವರ ಒಡಲಾಳ ಕಳವಳ ತೆರೆದಿಟ್ಟ ಅಕ್ಷರ ಜಂಗಮ ತುಳಿತಕ್ಕೊಳಗಾದವರ ಶೋಷಿತರ ನೋವಿನ ಧ್ವನಿಯನ್ನು ಕಾವ್ಯದ ಮೂಲಕ ಜನರಿಗೆ ಅರ್ಥೈಸಿದ ಶಬ್ದಗಾರುಡಿಗ ದಲಿತ ಕವಿ ಸಿದ್ದಲಿಂಗಯ್ಯ ನವರು ನಡೆದು ಬಂದ ಜೀವನ ಚರಿತ್ರೆಯ ಬಗ್ಗೆ ಕಾವ್ಯಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಇನ್ನೂ ಅನೇಕ ದಲಿತ ವಿದ್ಯಾರ್ಥಿಗಳು ದಲಿತ ಕವಿ, ಡಾ ಸಿದ್ದಲಿಂಗಯ್ಯನವರ ಬಗ್ಗೆ ಮಾತನಾಡಿ ಸಂತಾಪ ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಡಿ ಕರಿಯಪ್ಪನವರು, ತಾಲೂಕು ಸಿಪಿಎಂ ಕಾರ್ಯದರ್ಶಿ ಹಾಗೂ ಪತ್ರಕರ್ತ ಹೆಚ್ ವೀರಣ್ಣನವರು ಅಂಗನವಾಡಿ ಕಾರ್ಯಕರ್ತೆಯರಾದ ನೀಲಮ್ಮ ಮತ್ತು ಚಿತ್ತಮ್ಮ ವಿದ್ಯಾವಂತರು ಗ್ರಾಮಸ್ಥರು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend