ಹಿರಿಯೂರಿನ ಹೆಸರಾಂತ ಶಾಸಕಿಯಿಂದ ಕುಡಿಯುವ ನೀರಿನ ಕಾಮಗಾರಿ ಪರಿಶೀಲನೆ…

ಹಿರಿಯೂರು ತಾಲೂಕು ವಿ ವಿ ಸಾಗರ ಜಲಾಶಯದಿಂದ ಐಮಂಗಲ ಹೋಬಳಿ 138 ಹಾಗೂ ಜೆ ಜಿ ಹಳ್ಳಿ ಹೋಬಳಿ ಗಾಯಿತ್ರಿ ಜಲಾಶಯದಿಂದ 39 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಯನ್ನು ಶಾಸಕರಾದ ಶ್ರೀಮತಿ.ಕೆ.ಪೂರ್ಣಿಮಾಶ್ರೀನಿವಾಸ್ ಅವರು ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಮುಖ್ಯ ಇಂಜಿನಿಯರ್ ಏಜಾಜ್ ಹುಸೇನ್ ರವರು ಕಾಮಗಾರಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಐಮಂಗಲ ಹೋಬಳಿ 2 ತಿಂಗಳು ಹಾಗೂ ಜೆ ಜಿ ಹಳ್ಳಿ ಹೋಬಳಿ 4 ತಿಂಗಳಲ್ಲಿ ಕಾಮಗಾರಿ ಮುಗಿಸಿ ಗ್ರಾಮಗಳಿಗೆ ನೀರು ಕೊಡಲು ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ಕಾರ್ಯಪಾಲಕ ಎಂಜಿನಿಯರ್ ಜ್ಞಾನೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ಟಿ ಚಂದ್ರಶೇಖರ್, ಜೆ ಜಿ ಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ ತಿಮ್ಮರಾಯಪ್ಪ, ಮಹೇಶ್, ಹಾಲಿ ಅಧ್ಯಕ್ಷೆ ಶಬಾನಾ ಪರ್ವಿನ್, ಸದಸ್ಯರಾದ ಕೃಷ್ಣಮೂರ್ತಿ, ಮುಖಂಡರಾದ ಶ್ರೀರಾಮಣ್ಣ, ಗಿಯಾಜ್, ನಾಗೇಂದ್ರಪ್ಪ, ಸುರೇಶ್, ಬಸವರಾಜ್, ರಾಜಾನಾಯ್ಕ್ ಕುಮಾರ್ ನಾಯ್ಕ ನರಸಿಂಹಮೂರ್ತಿ ಮುಂತಾದವರು ಉಪಸ್ಥಿತರಿದ್ದರು..

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend