;

ಕೋವಿಡ್ ನಿಯಂತ್ರಿಸಲು ಚಳ್ಳಕೆರೆ ಶಾಸಕರಿಂದ ವಿನೂತನ ಪ್ರಯೋಗ…!!!

ಕೋವಿಡ್ ನಿಯಂತ್ರಿಸಲು ಚಳ್ಳಕೆರೆ ಶಾಸಕರಿಂದ ವಿನೂತನ ಪ್ರಯೋಗ.

ಕೊರೋನಾ ನಿಯಂತ್ರಿಸಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೈಕ್ರೋ ಕೋವಿಡ್ ಸೆಂಟರ್ ಆರಂಭ ನಿರ್ಧಾರ.ಜಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೈಕ್ರೋ ಕೋವಿಡ್ ಸೆಂಟರ್ ಉದ್ಘಾಟಿಸಿದ ಶಾಸಕ ಟಿ ರಘುಮೂರ್ತಿ. ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಗೆ ಬ್ರೇಕ್ ಹಾಕುವುದರ ಜೊತೆಗೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ಕೋವಿಡ್ ಅಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ದಾಖಲಾಗಿದ್ದು, ತಾಲೂಕು ಮಟ್ಟದ ಕೋವಿಡ್ ಅಸ್ಪತ್ರೆಗಳ ಒತ್ತಡವನ್ನು ತಗ್ಗಿಸುವ ಸಲುವಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ ರಘುಮೂರ್ತಿ ಅವರು ಇಂದು ಜಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ತಾತ್ಕಾಲಿಕ ಮೈಕ್ರೋ ಕೋವಿಡ್ ಕೇರ್ ಸೆಂಟರ್‌ ಅನ್ನು ಉದ್ಘಾಟಿಸಿದರು.
ಕೋವಿಡ್ ಕೇರ್ ಸೆಂಟರ್ ಪರಿಶೀಲಿಸಿದ ಮಾನ್ಯ ಶಾಸಕರು, ಕೋವಿಡ್ ಕೇರ್ ಸೆಂಟರ್ ದಾಖಲಾಗುವ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಸೌಲಭ್ಯಗಳನ್ನು ಒದಗಿಸಿ, ಸೋಂಕಿತರ ಗುಣಮುಖರಾಗಲು ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮಾನ್ಯ ಅಧಿಕಾರಿ ವರ್ಗಕ್ಕೆ ಸೂಚಿಸಿದರು.

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;