ಮೊಳಕಾಲ್ಮೂರು: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ ಅವರು ದಿನ ಬಿಟ್ಟು ದಿನ ಲಾಕ್ ಡೌನ್ ಆದೇಶ; ಜನರು ಉತ್ತಮ ಸ್ಪಂದನೆ.!!

ಚಿತ್ರದುರ್ಗ: ಮೊಳಕಾಲ್ಮೂರು : ರಾಜ್ಯ ಸರ್ಕಾರ ಕೊರೊನಾ ಮಹಾಮಾರಿ ಅಟ್ಟಹಾಸವನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಲಾಕ್ ಡೌನ್  ಆದೇಶಶಹೊರಡಿಸಿದ್ದಾರೆ. ಜಿಲ್ಲೆಯಲ್ಲೂ ಸಹ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ ಯವರು ದಿನ ಬಿಟ್ಟು ದಿನ  ಲಾಕ್ ಡೌನ್ ಆದೇಶ ಮಾಡಿರುವ ಹಿನ್ನೆಲೆಯಲ್ಲಿ, ಮೊಳಕಾಲ್ಮುರಿನಲ್ಲಿ ಇಂದು ಮೇ-31 ಇಂದು 10:00 ಗಂಟೆ ವರೆಗೂ ಜನರು ತರಕಾರಿ ಸೇರಿದಂತೆ ದಿನಸಿ ಪದಾರ್ಥಗಳನ್ನು  ಖರೀದಿಸಲು ಅವಕಾಶ ನೀಡಲಾಗಿತ್ತು. ಜನರು ವಾರಾಂತ್ಯದ ಲಾಕ್ ಡೌನ್ ಇದ್ದ ಕಾರಣ, ಇಂದು ಖರೀದಿಯ ಭರಾಟೆ ಯಲ್ಲಿ ತೊಡಗಿದ್ದರು. ನಂತರ, 10 ಗಂಟೆಯಾಗುತ್ತಿದ್ದಂತೆ. ಸ್ವಯಂ ಪ್ರೇರಿತರಾಗಿ ಆಸ್ಪತ್ರೆ, ಔಷಧಿ ಅಂಗಡಿಗಳನ್ನು ಹೊರತುಪಡಿಸಿ,  ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಸರ್ಕಾರದ ನಿಯಮಗಳನ್ನು ಪಾಲಿಸಿದರು. ಜನರು ಸಹ, ತಮ್ಮ ತಮ್ಮ ಮನೆ ಹಾಗೂ ಗ್ರಾಮಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಒಟ್ಟಾರೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ, ಸರ್ಕಾರದ ಆದೇಶಕ್ಕೆ ಉತ್ತಮ ಸ್ಪಂದಿಸುತ್ತಿದ್ದಾರೆ.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend