ಕೋವಿಡ್ ಎರಡನೇ ಅಲೆ ಜೀವ ಉಳಿಸಿ ಜೀವನ ರಕ್ಷಿಸಿ ಮೂರನೇ ಅಲೆಗೆ ಸನ್ನದ್ಧರಾಗಿ.
ಇಂದು ರಾಜ್ಯಾದ್ಯಂತ ಆನ್ ಲೈನ್ ಮೂಲಕ ಮನೆ ಮನೆಯಲ್ಲಿ ಊರೂರಲ್ಲಿ ಎಡಪಕ್ಷಗಳು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಸಾರ್ವತ್ರಿಕ ಉಚಿತ ಲಸಿಕೆ, ಔಷಧಿ ಮತ್ತು ಚಿಕಿತ್ಸೆ, ನೆರ ನಗದು ಉಚಿತ ಪಡಿತರ, ರೈತರ ಕಾರ್ಮಿಕರ ವಿರೋಧಿ ಕಾನೂನುಗಳ ರದ್ದತಿಗಾಗಿ, ಇನ್ನೂರು ದಿನಗಳ ಉದ್ಯೋಗ ಖಾತ್ರಿ ನಗರಗಳಿಗೂ ವಿಸ್ತರಿಸುವಂತೆ ಕೋವಿಡ್ 19 ರ ಮುಂಚೂಣಿ ಕಾರ್ಯಕರ್ತರ ಭದ್ರತೆಗಾಗಿ ಕಾರ್ಮಿಕರಿಗೆ ಆಂಧ್ರ ಮಾದರಿಯಲ್ಲಿ ಪರಿಹಾರ ನೀಡುವಂತೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಮಾಡಬೇಕು ಬಿಸಿಯೂಟದಂತಹ ಅಸಂಘಟಿತ ವಲಯದ ಕಾರ್ಮಿಕರಿಗೆ ವೇತನ ನೀಡುವಂತೆ ಈಗಾಗಲೇ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಒತ್ತಾಯಿಸಲಾಯಿತು.ಈ ಸಂದರ್ಭದಲ್ಲಿಸಿ ಪಿ ಐ ಪಕ್ಷದ ತಾಲೂಕು ಅಧ್ಯಕ್ಷ ಸುರೇಶ್ ಹಲಗಿ, ಎಐಟಿಯುಸಿಯ ಶಾಂತರಾಜ್ ಜೈನ , ದಯಾನಂದ ಎಂ. ಭಾರತೀಯ ಸವ೯ಧಮ೯ ರಕ್ಷಣಾ ವೇದಿಕೆ ಅಧ್ಯಕ್ಷ ಬಿಚ್ಚುಗತ್ತಿ ಖಾಜಾಹುಸೇನ್ ದಯಾನಂದ ರವರ ನಿವಾಸದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ. ಬಸಣ್ಣಿ, ಬಿ. ಎಂ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
