ಮೊಬೈಲ್ ಕರೆಗೆ ಸ್ಪಂಧಿಸಿ ಹೃದಯ ವೈಶಾಲ್ಯ ಮರೆದಿರುವ ಬಳ್ಳಾರಿ ಜಿಲ್ಲಾಧಿಕಾರಿಗಳು…!!!

 

ನಮ್ಮ ಮೊಬೈಲ್ ಕರೆಗೆ ಸ್ಪಂಧಿಸಿ ಹೃದಯ ವೈಶಾಲ್ಯ ಮರೆದಿರುವ ಬಳ್ಳಾರಿ ಜಿಲ್ಲಾಧಿಕಾರಿಗಳು :-Black Fungus ನಿಂದ ನರಳುತ್ತಿರುವ ನನ್ನ ಸ್ನೇಹಿತನ ತಂದೆ ಫಕ್ರುದ್ದೀನ್ ಹೊಸಪೇಟೆ ನಗರ ನಿವಾಸಿ ಇಂದು ಬಳ್ಳಾರಿ ಕೋವಿಡ್ ಸೆಂಟರ್ ಗೆ ನಮ್ಮ ಮನವಿಗೆ ಜಿಲ್ಲಾಧಿಕಾರಿಗಳ ಸಮಯ ಸ್ಪೂರ್ತಿಯಿಂದ ದಾಖಲಾಗಿದ್ದಾರೆ.ಪವನ್ ಕುಮಾರ್ ಮಾಲಪಾಟಿ ನಿಜಕ್ಕೂ ಹೃದಯವಂತಿಕೆವಿರುವ ಸರಳ ಸಜ್ಜನಿಕೆಯ ಅಧಿಕಾರಿ.ಇಂದು ಬೆಳಿಗ್ಗೆ ನಮ್ಮ ಹೊಸಪೇಟೆಯ ಪತ್ರಕರ್ತ ಸ್ನೇಹಿತರು ನನಗೆ ಪೋನ್ ಮಾಡಿ ನಮ್ಮ ತಂದೆಗೆ ಬ್ಲಾಕ್ ಪಂಗಸ್ ಆಗಿ ವಿಪರೀತ ತೊಂದರೆ ಎದುರಾಗಿದೆ,ಸರಿಯಾದ ಚಿಕಿತ್ಸೆ ಸಿಗ್ತಾಯಿಲ್ಲ ಹಾಗೂ ಈ ಸಂಕ್ರಾಮಿಕ ಕಾಯಿಲೆಗೆ ಲಸಿಕೆಯ ಅಭಾವವೂ ಎದುರಾಗಿರುವ ಈ ಸಂದರ್ಭದಲ್ಲಿ ನಮಗೆ ಚಿಕಿತ್ಸೆಯ ವಿಚಾರವಾಗಿ ನೆರವಾಗಿ ಎಂದು ವಿನಂತಿಸಿದಾಗ ನಾನು ಕೂಡಲೇ ಹೊಸಪೇಟೆ ತಾಲೂಕು ವೈಧ್ಯಧಿಕಾರಿಗಳಾದ ಬಾಸ್ಕರ್ ಸಾರ್ ರವರಿಗೆ ಪೋನ್ ಮಾಡಿದ ನಂತರ ಅವರು ಇಲ್ಲಿ ಲಸಿಕೆಯ ಕೊರೆತೆ ಜೊತೆಗೆ ಬಳ್ಳಾರಿ ಕೋವಿಡ್ ಕೇಂದ್ರಗಳಲ್ಲಿ ಪ್ರಸ್ತುತ ಬೆಡ್ ಖಾಲಿ ಇಲ್ಲ ಎಂಬ ಮಾಹಿತಿ ನನಗೆ ನೀಡಿದ ನಂತರ ನಾನೂ ಕೂಡಲೇ ತಾವುಗಳು ಈ ಕುರಿತಂತೆ ಬಳ್ಳಾರಿ ಜಿಲ್ಲಾಸ್ಪತ್ರೆಗೆ ಪತ್ರ ನೀಡಿರಿ ಎಂದ ತಕ್ಷಣ ಪತ್ರವನ್ನು ನನ್ನ ಹೊಸಪೇಟೆ ಪತ್ರಕರ್ತ ಸ್ನೇಹಿತರಿಗೆ ನೀಡಿದ್ದಾರೆ.ಇಷ್ಟೆಲ್ಲಾ ಬೆಳವಣಿಗೆಯ ನಂತರ ನಾನು ಬೆಳಿಗ್ಗೆ 11.30 ರಿಂದ ಬಳ್ಳಾರಿ ಆರೋಗ್ಯಾಧಿಕಾರಿಗಳಾದ ಡಾ.ಜನಾರ್ಧನ್ ರವರಿಗೆ ಸಮಾರು ಸಲ ಪೋನ್ ಮಾಡಿದರೂ ಸ್ವಿಚ್ಡ್ ಆಫ್ ಅಥವಾ out of coverage ಎಂಬ ರಿಂಗ್ ಟೋನ್ ಗೊಣಗುತ್ತಲೆ ಇದೆ. ಆರೋಗ್ಯಧಿಕಾರಿಯ ಮೋಬೈಲ್ ನ ಈ ಅವಾಂತರಕ್ಕೆ ಬೇಸತ್ತು ನಾನು ಮಧ್ಯಾಹ್ನ ಜಿಲ್ಲಾಧಿಕಾರಿಗಳಾದ ಮಾಲಪಾಟಿ ಸಾರ್ ಗೆ ಪೋನ್ ಮಾಡಿದ ತಕ್ಷಣ ನನಗೆ ಸ್ಪಂಧಿಸಿ ಅವರು ವಿಮ್ಸ್ ಆಸ್ಪತ್ರೆಯ ಆಡಿಟೋರಿಯಂ ಕೋವಿಡ್ ಸೆಂಟರ್ ನಲ್ಲಿದ್ದ Dr.ರವಿ ಭೀಮಪ್ಪ ರವರಿಗೆ ತಿಳಿಸಿದ್ದರಿಂದ ರೋಗಿಯನ್ನು ಕೂಡಲೇ ಬಳ್ಳಾರಿ ವಿಮ್ಸ್ covid centre ನಲ್ಲಿ Admit ಮಾಡಿಕೊಂಡು ಚಿಕಿತ್ಸೆ ಶುರು ಮಾಡಿರುವುದರಿಂದ ಒಬ್ಬ ಅಮಾಯಕನ ನೋವು ಹಾಗೂ ಪ್ರಾಣವನ್ನು ವಿಶಾಲ ಹೃದಯದ ಜಿಲ್ಲಾಧಿಕಾರಿಗಳಾದ ಪವನ್ ಕುಮಾರ್ ಮಾಲಪಾಟಿ ರವರ ಸಮಯ ಸ್ಪೂರ್ತಿಯಿಂದ ರೋಗಿಯು ನಿರಾಳವಾಗಿರುವುದಕ್ಕೆ ನಮ್ಮ ಪತ್ರಕರ್ತರ ಪರವಾಗಿ ಅನಂತಾನಂತ ಧನ್ಯವಾದಗಳು. ಬಂಗ್ಲೆ ಮಲ್ಲಿಕಾರ್ಜುನ,ರಾಜ್ಯ ಕಾರ್ಯದರ್ಶಿಗಳು,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ.

ವರದಿ. ಎಂ.ಎಲ್. ವೆಂಕಟೇಶ್ ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend