ಸಿಂಧನೂರು: ಎಚ್ಚರಿಕೆ ಪತ್ರಿಕೆಯ ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು. ತಾಲೂಕಿನ ಭೂತಲದಿನ್ನಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಲ್ಲಿ ಬಪ್ಪೂರು ರಸ್ತೆಯಿಂದ ಮಲಾಪುರು ರಸ್ತೆಯ ಪಕ್ಕದಲ್ಲಿ ಗಿಡ ನೆಡುವ ಏಳು ದಿನಗಳ ಕೆಲಸ ನೀಡಿದ್ದು, ಕೋವಿಡ್ ನಿಯಮಗಳನ್ನು ಪಾಲಿಸುವ ಮುಖಾಂತರ ಕೂಲಿ ಕೆಲಸಗಾರರು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರು ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಆರು ಅಡಿ ಅಂತರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.ಹಿಂದೆ ಸುಮಾರು ತಂಡಗಳಲ್ಲಿ ಸಾವಿರದಿಂದ ಹದಿನೈದುನೂರು ಜನರಿಗೆ ಕೆಲಸ ನೀಡಿದ್ದರು ಮಾಸ್ಕ್ ಇಲ್ಲದೆ,ಸಾಮಾಜಿಕ ಅಂತರವಿಲ್ಲದೆ ಕೆಲಸ ನಿರ್ವಹಿಸುತ್ತಿದ್ದರು ನಮ್ಮ ಎಚ್ಚರಿಕೆಯ ಪತ್ರಿಕೆಯ ವರದಿ ಮಾಡಿತ್ತು ವರದಿಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಪಂಚಾಯಿತಿಯ ವ್ಯಾಪ್ತಿಯಲ್ಲಿ ಒಂದು ಹಳ್ಳಿಯಲ್ಲಿ ಕೇವಲ 70 ರಿಂದ 80 ಜನ ಕೆಲಸ ನೀಡಿದ್ದು, ಪಂಚಾಯಿತಿ ಸಿಬ್ಬಂದಿಗಳಾದ ನಂದಯ್ಯ, ದೊಡ್ಡಪ್ಪ, ಇವರುಗಳು ಪಲ್ಸ್ ಆಕ್ಸಿ ಮೀಟರ್ ಬಳಸಿ, ಪ್ರತಿಯೊಬ್ಬರನ್ನು ಚೆಕ್ ಮಾಡುವ ಮುಖಾಂತರ ಸ್ಯಾನಿಟೈಜರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಯೊಬ್ಬರು ಕೆಲಸ ಮಾಡಿ ಎಂದು ಕೂಲಿಕಾರರಿಗೆ ಮನವರಿಕೆ ಮಾಡಿದರು. ಇದೇ ರೀತಿ ಎಲ್ಲಾ ಪಂಚಾಯಿತಿಯವರು ನರೇಗಾ ಕೂಲಿ ಕೆಲಸಗಾರರಿಗೆ ಮನವರಿಕೆ ಮಾಡಿ ಕೆಲಸ ನೀಡಬೇಕು ಎಂದು ಕೂಲಿ ಕೆಲಸಗಾರರ ಮೇಟಿ ಗಳಾದ ರೆಡ್ಡಪ್ಪ ಜೂಲದ್, ನಾಗರಾಜ್ ನವಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
