ಕೋರೋನ ಹಬ್ಬರದಲ್ಲಿ ದಿಗ್ಬ್ರಂತರಾದ ಜನ ಸಮೂಹಕ್ಕೆ ಉಪಹಾರ ನೆರವು; ಕಾಂಗ್ರೆಸ್ ಪಕ್ಷದ ಮುಖಂಡರುಗಳು..!!

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ತುಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕೊಬನಹಳ್ಳಿಯಲ್ಲಿರುವ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳಿಗೆ ಮತ್ತು ಅವರ ಸಹಾಯಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ. ” ಕೋರೋನ ಹಬ್ಬರದಲ್ಲಿ ದಿಗ್ಬ್ರಂತ ರಾದ ಜನ ಸಮೂಹಕ್ಕೆ ನೆರವು ನೀಡುವ ನಿಟ್ಟಿನಲ್ಲಿನ ಒಂದು ಭಾಗವಾಗಿ. ಇಂದಿನಿಂದ ಲಾಕ್ಡೌನ್ ಮುಗಿಯುವವರೆಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಯೋಗೇಶ್ ಬಾಬು, ಹಾಗೂ ತುಮಕೂರ್ಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮೀದೇವಿ ತಿಪ್ಪೇಸ್ವಾಮಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಗೇಶ್ ಬಾಬು ಅವರು ಕೋರೊನ ವ್ಯಾಧಿಯ ಆವಳಿಯು ಗ್ರಾಮೀಣ ಪ್ರದೇಶದಲ್ಲಿ ಹರಡಿರುವ ಕಾರಣ ಗ್ರಾಮೀಣ ಪ್ರದೇಶದ ಜನತೆಯಲ್ಲಿ ಅಸ್ತವ್ಯಸ್ತ ಉಂಟಾಗಿದೆ. ಈ ಸಂದರ್ಭದಲ್ಲಿ ನಾವು ಮತ್ತು ನಮ್ಮ ಪಕ್ಷದ ಎಲ್ಲ ಕಾರ್ಯಕರ್ತರು ಎಲ್ಲಾ ಗ್ರಾಮೀಣ ಪ್ರದೇಶದಲ್ಲಿನ ಜನಕ್ಕೆ ಇಂಥ ಸಂದಿಗ್ಧ ಪರಿಸ್ತಿಯನ್ನು ಎದುರಿಸುವ ನಿಟ್ಟಿನಲ್ಲಿ ಕೈಜೋಡಿವುದರೊಂದಿಗೆ ಅವ್ರಿಗೆ ಸ್ಪಂದಿಸುತ್ತವೆ ಹಾಗೂ ಇಂತಹ ಕಾರ್ಯಕ್ರಮಗಳನ್ನು ಇನ್ನೂ ಕ್ಷೇತ್ರದ ಎಲ್ಲಾ ಗ್ರಾಮೀಣ ಬಾಗಗಳಲ್ಲಿ ಹಮ್ಮಿಕೊಳ್ಳಲಾಗವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಹೊನ್ನೂರಪ್ಪ ಜಿ.ಟಿ, ಹಾಗೂ ಸದಸ್ಯರಾದ ಕರಿಬಸಪ್ಪ, ನಾಗರಾಜ್, ಹೇಮಣ್ಣ, ಓಬಣ್ಣ, ನಾಗಭೂಷಣ, ಓಬಳೇಶ್, ತಿಪ್ಪೇಸ್ವಾಮಿ, ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಪ್ರದೀಪ್, ಗೊಂಚಿಗರ್ ಸಣ್ಣ ಮಲ್ಲಯ್ಯ, ಶ್ರೀನಿವಾಸ, ಭಕ್ತ ಪ್ರಹಲ್ಲಾದ, ಮಹೇಶ, ಡಿಸ್ಕೋ ರಾಜು, ಗೋವಿಂದರಾಜು, ಮಾರನಾಯಕ ಹಾಗೂ ಮೊಳಕಾಲ್ಮೂರು ಕಾಂಗ್ರೆಸ್ ಮುಖಂಡರಾದ ಕಿರಣ್, ಬಾಲಚೌಡಪ್ಪ ಜಿಯಾಉಲ್ಲ ಡಾ” ದಾದಾಪೀರ್ ಯುವ ಕಾಂಗ್ರೆಸ್ ಅಧ್ಯಕ್ಷರು, ಎಲ್ಲಾ ಕಾಂಗ್ರೆಸ್ ಮುಖಂಡರುಗಳು ಉಪಸ್ತಿತರಿದ್ದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend