ಮುನಿರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ, ಕರೋನ ಸರಪಳಿಯನ್ನು ತಪ್ಪಿಸುವ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಇವರ ಆದೇಶದನ್ವಯ ಮುನಿರಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೂಕ್ತವಾದ ಕಟ್ಟುನಿಟ್ಟಿನ ಕ್ರಮವನ್ನು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುಪ್ರೀತ್ ಪಾಟೀಲ್ ರವರ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿದೆ .ಅನಾವಶ್ಯಕವಾಗಿ ರಸ್ತೆಯಲ್ಲಿ ತಿರುಗಾಡುತ್ತಿರುವ ಜನರನ್ನ ಮತ್ತು ಬೈಕ್ ಗಳನ್ನ ತಡೆಹಿಡಿದು ಪರಿಶೀಲಿಸಿ ಸುಖಾಸುಮ್ಮನೆ ತಿರುಗಾಡು ವವರ ವಿರುದ್ಧ ಕ್ರಮಗಳನ್ನು ಕೈಗೊಂಡು ದಂಡ ವಿಧಿಸಲಾಗುತ್ತದೆ .ಮತ್ತು ಮಾಸ್ಕ್ ಧರಿಸದೇ ಅವರ ವಿರುದ್ಧವೂ ಸಹ ಕ್ರಮ ಕೈಗೊಳ್ಳಲಾಗುತ್ತಿದೆ .ಹನುಮಂತ ಭಜಂತ್ರಿ ಮತ್ತು ಚಂದ್ರು ಅವರ ನೇತೃತ್ವದಲ್ಲಿ ಹುಲಿಗಿ ಗ್ರಾಮ ಮತ್ತು ಮುನಿರಾಬಾದ್ ಗ್ರಾಮದಲ್ಲಿ ಸುಖಾಸುಮ್ಮನೆ ತಿರುಗಾಡುತ್ತಿರುವ ಜನರನ್ನ ಮತ್ತು ಬೈಕ್ ಗಳನ್ನು ಪರಿಶೀಲಿಸಿ ಸೂಕ್ತವಾದ ದಂಡವನ್ನು ವಿಧಿಸಿ ಬೈಕ್ ಗಳನ್ನು ಸೀಜ್ ಮಾಡಲಾಗುತ್ತಿದೆ ನಿನ್ನೆ 1ದಿನಕ್ಕೆ ಸುಮಾರು ಐವತ್ತಕ್ಕೂ ಹೆಚ್ಚು ಬೈಕ್ ಗಳನ್ನು ಸೀಜ್ ಮಾಡಲಾಗಿದೆ .ಹನುಮಂತು ಭಜಂತ್ರಿಯವರ ಕಟ್ಟುನಿಟ್ಟಿನ ಕ್ರಮಕ್ಕೆ ಮತ್ತು ಕರ್ತವ್ಯ ಪಾಲನೆಗೆ ಹುಲಿಗಿಯ ಗ್ರಾಮ ಸ್ಥರು ಮುನಿರಾಬಾದ್ ನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .
ವರದಿ. ಮಂಜುನಾಥ್ ದೊಡ್ಡಮನಿ