*ಮಾಸ್ಕ್,ಸ್ಯಾನಿಟೇಜ್ ವಿತರಿಸಿದ ಪಪಂ ಸದಸ್ಯ-ಸೈಯದ್ ಶುಕೂರ್*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಪಪಂ ಸದಸ್ಯ ಸೈಯದ್ ಶುಕೂರ್ ರವರು ಪೊಲೀಸ್ ಠಾಣೆಯ ಸಿಬ್ಬಂದಿಗೆ ಹಾಗೂ ಪತ್ರಕರ್ತರಿಗೆ ಸ್ಯಾನಿಟೇಜ್ ಹಾಗೂ ಮಾಸ್ಕ್ ವಿತರಿಸಿದರು.
ಪಟ್ಟಣದ ಹೊಸಪೇಟೆ ಟೈಮ್ಸ್ ವರದಿಗಾರ ಬಡಿಗೇರ ನಾಗರಾಜ ರವರ ನಿವಾಸಕ್ಕೆ ತೆರಳಿ,ಅವರಿಗೆ ಸ್ಯಾನಿಟೇಜ್ ಹಾಗೂ ಮಾಸ್ಕ್ ವಿತರಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕರೋನಾ ಸೋಂಕು ನಿವಾರಣೆಗೆ,ಗಲ್ಲಿ ಗಲ್ಲಿಯಲ್ಲಿ ಸ್ಯಾನಿಟೇಷನ್ ಮಾಡಿಸಲಾಗಿದೆ.ಸೋಂಕು ಜಿಯಂತ್ರಣಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು,ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕ್ರಮಗಳನ್ನ ಕೈಗೊಳ್ಳಾಲಾಗಿದೆ ಎಂದರು.
ಲಾಕ್ ಡೌನ್ ಇರೋ ಕಾರಣ ಸಂಕಷ್ಟದಲ್ಲಿರುವ ಹಲವು ಕುಟುಂಬಗಳನ್ನ ಗುರುತಿಸಿ, ರಂಜಾನ್ ಹಬ್ಬದಂದು ಅವರಿಗೆ ಅಗತ್ಯ ಆಹಾರ ಸಾಮಾಗ್ರಿ ಕಿಟ್ ವಿತರಿಸಲಾಗಿದೆ ಎಂದರು. ಅವರೊಂದಿಗೆ ಅವರ ಸಹೋದರ ಸಂಬಂಧಿ ಕಾಂಗ್ರೇಸ್ ಯುವ ಮಖಂಡ ಮಹಮದ್ ಮಾಝ್ ಉಪಸ್ಥಿತರಿದ್ದರು.ಗೃಹರಕ್ಷಕ ದಳದ ನಾಯ್ಕ,ಮೆಕಲರ ದುರುಗಪ್ಪ ಮತ್ತಿತರರು ಇದ್ದರು.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
