;

ಧರ್ಮ ಪುನರುತ್ಥಾನದ ಕರ್ತ- ಶ್ರೀಶಂಕರಾಚಾರ್ಯರು-ಪಂಪಾಪತಿ…!!!

*ಧರ್ಮ ಪುನರುತ್ಥಾನದ ಕರ್ತ- ಶ್ರೀಶಂಕರಾಚಾರ್ಯರು-ಪಂಪಾಪತಿ*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಇಂದು ಆದಿ ಗುರು ಶ್ರೀಶಂಕರಾಚಾರ್ಯರ ಜಯಂತ್ಯೋತ್ಸವ ಸರಳವಾಗಿ ಆಚರಿಸಲಾಯಿತು.ಕಾರ್ಯಕ್ರಮ ಕುರಿತು ಮಾತನಾಡಿದ ಇಲಾಖಾಧಿಕಾರಿ,ಪಂಪಾಪತಿ ಭಾರತದಲ್ಲಿ ಹಿಂದೂ ಧರ್ಮವು ಅನ್ಯ ಧರ್ಮಗಳ ಪ್ರಭಾವದಿಂದ ಕ್ಷೀಣಿಸುತಿದ್ದಾಗ.ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನ ಮಾಡಿದಂತ ಮಹಾನ್ ಅವತಾರ ಪುರುಷ ಶ್ರೀ ಶಂಕರಾಚಾರ್ಯರು ಎಂದು ಅಭಿಪ್ರಾಯಪಟ್ಟರು, ನಿಲಯ ಮೇಲ್ವಿಚಾರಕ ಸಿ. ಅಂಜಿನಪ್ಪ ಮಾತನಾಡಿ, ಶಂಕರಾಚಾರ್ಯರು ತಮ್ಮ ಕಾಲ್ನಡಿಗೆಯಲ್ಲಿ ದೇಶ ಸುತ್ತಿ ಶಾರದಾ ಪೀಠಗಳನ್ನು ನಿರ್ಮಾಣ ಮಾಡಿದರು. ಅದ್ವೈತ ಸಿದ್ದಂತ ಪ್ರತಿಪಾದಿಸಿ ಹಿಂದುಗಳನ್ನು ಒಂದು ಗೂಡಿಸಿದ ಮಹಾನೀಯರು ಎಂದರು. ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಅಹಮದ್ ಸಾಹೇಬ್ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;