;

ತಾಯಿ ಕುಟುಂಬದ ಆರಾಧ್ಯ ದೈವ-ಜಿಗೇನಹಳ್ಳಿಪ್ರಶಾಂತಕುಮಾರ*-

*ತಾಯಿ ಕುಟುಂಬದ ಆರಾಧ್ಯ ದೈವ-ಜಿಗೇನಹಳ್ಳಿಪ್ರಶಾಂತಕುಮಾರ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸಾರ್ವಜನಿಕ ಅಸ್ಪತ್ರೆಯ ಐಸಿಟಿಸಿಯಲ್ಲಿ,ಆಪ್ತ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿರುವ ಜಿಗೇನಹಳ್ಳಿ ಪ್ರಶಾಂತರವರು.ವಿಶ್ವ ಅಮ್ಮನ ದಿನವನ್ನು ತಮ್ಮ ತಾಯಿ ನಿವೃತ್ತ ಅಂಗನವಾಡಿ ಶಿಕ್ಷಕಿ ಶ್ರೀಮತಿ ಕೆ.ಈಶ್ವರಮ್ಮ ಗಂಡ ಮರುಳಸಿದ್ದನಗೌಡರನ್ನು,ಕುಟುಂಬ ಸಮೇತರಾಗಿ ನಮಿಸಿ ಆರಾಧಿಸುವ ಮೂಲಕ ಅವರ ಶ್ರಮದಾನವನ್ನ ತ್ಯಾಗವನ್ನ ನೆನೆದು ನುಡಿನಮನ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.
ಪ್ರಶಾಂತರವರು ಮಾತನಾಡಿ ನಮ್ಮ ತಾಯಿ ಅಂಗನವಾಡಿ ಮಕ್ಕಳಿಗೆ ಶಿಕ್ಷಕಿ ಮಾತ್ರವಲ್ಲ,ನಮ್ಮ ಕುಟುಂಬದ ಆರಾದ್ಯ ದೈವ ಹಾಗೂ ಗುರುಗಳಾಗಿದ್ದಾರೆ ಎಂದರು.1960ರಲ್ಲಿ ಸಂಡೂರು ತಾಲೂಕಿನ ಜಿಗೇನಹಳ್ಳಿ ಎಂಬ ಕುಗ್ರಾಮಕ್ಕೆ, ತಿಂಗಳ136ರೂ ಸಂಬಳಕ್ಕಾಗಿ ಅಂಗನವಾಡಿ ಶಿಕ್ಷಕಿಯಾಗಿ ಸಂದರ್ಭದಲ್ಲಿ,ಪಟ್ಟಣ ಬಿಟ್ಟು ತಂದೆ ತಾಯಿಯರವರನ್ನ ಬಿಟ್ಟು ಏಕಾಂಗಿಯಾಗಿದ್ದು ಕೊಂಡು. ಎದುರಾದ ಸಮಸ್ಯೆಗಳಿಗೆ ಎದುರುತ್ತರ ಕೊಡುತ್ತಲೇ ದಿಟ್ಟತನದಿಂದಲೇ ಜೀವನ ಸಾಗಿಸಿ,ಜಿಗೇನಹಳ್ಳಿ,ಯರ್ರಯ್ಯನಹಳ್ಳಿ,ನಡುಗುರ್ತಿ,ಡಿ.ಮಲ್ಲಾಪುರ,ಸೇರಿದಂತೆ ಹಲವು ಕುಗ್ರಾಮೀಣ ಪ್ರದೇಶಗಳಲ್ಲಿ.ಪಾದಾಚಾರಿಯಾಗಿದ್ದುಕೊಂಡು,ಅಸಮರ್ಪಕ ರಸ್ಥೆ ಹಾಗೂ ವಾಹನ ಸಂಚಾರದ ದುರ್ಗಮ ಹಾದಿಯಲ್ಲಿ ಸಂಚರಿಸಿ.ಅಂಗನಾವಾಡಿ ಮಕ್ಕಳಿಗೆ ಪಾಠ ಹೇಳಿ ಬಂದ ಅತ್ಯಲ್ಪ ಸಂಬಳ ಕೂಡಿಟ್ಟು ನಮ್ಮನ್ನ ಜಥನದಿಂದ ಕಾಪಾಡಿ ನನ್ನ ಅಣ್ಣ ಕೆ.ಪ್ರವೀಣ ಮತ್ತು ನನ್ನನ್ನು ಪದವೀಧರರನ್ನಾಗಿಸಿದ ನನ್ನ ತಾಯಿಯೇ ಪ್ರತ್ಯಕ್ಷ ದೇವತೆ, ಕುಟುಂಬದ ಆರಾಧ್ಯ ದೈವ ಎನ್ನುತ್ತಾರೆ ಕೂಡ್ಲಿಗಿ ಐಸಿಟಿಸಿ ಆಪ್ತಸಮಾಲೋಚಕ ಜಿಗೇನಹಳ್ಳಿ ಪ್ರಶಾಂತಕುಮಾರ.ಈ ಸಂದರ್ಭದಲ್ಲಿ ಪ್ರಶಾಂತರವರ ಸಹೋದರ ಪ್ರವೀಣಕುಮಾರ ಹಾಗೂ ಕುಟುಂಬ ಸದಸ್ಯರು ಇದ್ದರು.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;