;

ಬಣವಿಕಲ್ಲು:ನಿಲ್ಲದ ನೀರಿನ ಬವಣೆ,ಜನತಾ ಕಾಲೋನಿಯ ಜನರ ಪರದಾಟ*

*ಬಣವಿಕಲ್ಲು:ನಿಲ್ಲದ ನೀರಿನ ಬವಣೆ,ಜನತಾ ಕಾಲೋನಿಯ ಜನರ ಪರದಾಟ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಜನತಾ ಕಾಲೋನಿ ಜನರು,ತಾವು ವಾರದಿಂದ ನೀರಿಗಾಗಿ ಪರದಾಡುತಿದ್ದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಸ್ಪಂಧಿಸುತ್ತಿಲ್ಲ ಎಂದು ದೂರಿದ್ದಾರೆ.
ಜನತಾ ಕಾಲೋನಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನ ಕಲ್ಪಿಸುತ್ತಿಲ್ಲ ಎಂದು ಗ್ರಾಮ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಜನತಾಕಾಲೋನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ ನೈರ್ಮಲ್ಯತೆ ಮಾಯವಾಗಿದೆ,ಕಳೆದ ವಾರದಿಂದ ನೀರಿಲ್ಲದೇ ಪರದಾಡುವಂತಾಗಿದೆ ಎಂದು ಜನತಾ ಕಾಲೋನಿ ವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಶೀಘ್ರವಾಗಿ ಸ್ಪಂದಿಸದಿದ್ದಲ್ಲಿ ಉನ್ನತಾಧಿಕಾರಿಗಳಿಗೆ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ್ಯತೆ ವಿರುದ್ಧ ಲಿಖಿತ ದೂರು ನೀಡಲಾಗುವುದೆಂದು ಜನತಾ ನಿವಾಸಿಗಳು ಈ ಮೂಲಕ ಎಚ್ಚರಿಸಿದ್ದಾರೆ.
ಟ್ರಸನ್ಸ್ ಪರ್ಮಾರ್ ಸುಟ್ಟಿದ್ದು ಕಳೆದ ವಾರದಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿರುವುದಾಗಿ ಪಿಡಿಓ ಹೇಳುತಿದ್ದು,ಅದಕ್ಕೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಿಡಿಓ ಶೀಘ್ರವೇ ಜನತಾ ಕಲೋನಿಗೆ ಭೆಟ್ಟಿಕೊಡಬೇಕು ಮೂಲಭೂತ ಸೌಕರ್ಯಗಳ ಅಭಾವವಿದ್ದು,ಜನರ ಅಹವಾಲು ಆಲಿಸಿ ಸ್ಪಂಧಿಸಬೇಕು ಶೀಘ್ರವೇ ನೀರಿನ ವ್ಯವಸ್ಥೆ ಮಾಡಬೇಕು,ನಿರ್ಲಕ್ಷ್ಯಸಿದ್ದಲ್ಲಿ ವಿರುದ್ಧ ಮೇಲಾಧಿಕಾರಿಗಳಿಗೆ ಲಿಖಿತ ದೂರು ನೀಡಲ‍ಾಗುವುದೆಂದು ಜನತಾ ಕಾಲೋನಿ ಜನತೆ ಈ ಮೂಲಕ ಎಚ್ಚರಿಸಿದ್ದಾರೆ.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;