;

ಮೊಳಕಾಲ್ಮೂರು: ಅಜೀರ್ಣದಿಂದ ನಿತ್ರಾಣಗೊಂಡು ಕರಡಿ ಸಾವು, ಅಂತ್ಯಸಂಸ್ಕಾರ ಮಾಡಿದ ರಣ್ಯ ಇಲಾಖೆ..!!!

ಚಿತ್ರದುರ್ಗ: ಮೊಳಕಾಲ್ಮುರು/ ತಾಲೂಕಿನ ಗುಡ್ಡದಹಳ್ಳಿ ಸಮೀಪದ ಗುಡ್ಡದಲ್ಲಿ ಅಜೀರ್ಣದಿಂದ ನಿತ್ರಾಣಗೊಂಡು ಕರಡಿಯೊಂದು ಮೃತಪಟ್ಟಿರುವ ಘಟನೆ ಭಾನುವಾರ ಜರುಗಿದೆ. ಕರಡಿಯೊಂದು ನಿತ್ರಾಣಗೊಂಡಿರುವ ಬಗ್ಗೆ ಶನಿವಾರ ಸಂಜೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದೆ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಯನ್ನು ಪಟ್ಟಣಕ್ಕೆ ತಂದು ಪರಿಶೀಲಿಸಿದಾಗ ಹೆಚ್ಚು ಸಪೋಟ ಕಾಯಿ ತಿಂದು ಜೀರ್ಣವಾಗದೆ ನಿತ್ರಾಣಗೊಂಡಿದೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಮೃತಪಟ್ಟಿದೆ. ಪಶು ಇಲಾಖೆ ಎಡಿಡಾ.ತಿಮ್ಮಣ್ಣಭೇಟಿ ನೀಡಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಯ ನಂತರ ಕರಡಿಯನ್ನು ಪಟ್ಟಣದ ನರ್ಸರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಹಸನ್ ಭಾಷ, ಅರಣ್ಯ ರಕ್ಷಕರಾದ ಶಿವರಾಜ್, ಚಾಂದ್ ಬಾಷ, ಸುನೀಲ್ ಇದ್ದರು…

 

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;