;

ಮೊಳಕಾಲ್ಮೂರು: ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶ್ರೀ ವರ್ಧಮಾನ ಮಹಾವೀರ ಜಯಂತಿ ಸರಳ ಕಾರ್ಯಕ್ರಮ..!!

ಚಿತ್ರದುರ್ಗ: ಮೊಳಕಾಲ್ಮುರು ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ವರ್ಧಮಾನ ಮಹಾವೀರ ಜಯಂತಿ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾವೀರರು ರಾಜ ಮನೆತನದಲ್ಲಿ ಹುಟ್ಟಿದರೂ ತಮ್ಮ 30 ನೇ ವಯಸ್ಸಿನಲ್ಲಿ ರಾಜ್ಯವನ್ನು ತೊರೆದು ಆಧ್ಯಾತ್ಮದಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಹಿಂಸೆಯೇ ಪರಮೋಧರ್ಮ ಎನ್ನುವ ಜೈನಧರ್ಮದ ಮೂಲ ಮಂತ್ರವನ್ನು ಜಗತ್ತಿಗೆ ಸಾರಿದ ಮಹಾವೀರರ ಆದರ್ಶಗಳನ್ನು ತಮ್ಮ ಪ್ರತಿಯೊಬ್ಬರೂ ಅಳವಡಿಸಿಕೊಳ್ಳ ಬೇಕೆಂದು ಉಪ ತಹಸೀಲ್ದಾರ್‌ ಏಳು ಕೋಟಿ ಹೇಳಿದರು. ಪರೋಮೋಧರ್ಮ ಎನ್ನುವ ಸಂದೇಶವನ್ನು ಸಾರಿದರು. ಸಮಾಜದಲ್ಲಿ ನಡೆಯು ವಂತಮೋಸ, ವಂಚನೆ ಎಲ್ಲವನ್ನು ನೋಡಿ ಜೈನ ಧರ್ಮದ ಮೂಲ ಮಂತ್ರವಾದ ತ್ಯಾಗವನ್ನೇ ಜೀವನದಲ್ಲಿ ಪ್ರಧಾನವನ್ನಾಗಿಸಿಕೊಂಡರು ಎಂದರು. ಜೈನ ಧರ್ಮದಲ್ಲಿ 24ನೇ ತೀರ್ಥಕರರಾಗಿ ಜನಿಸಿದ ಮಹವೀರರು ಸಮಕಾಲೀನ ವಿಚಾರಗಳಿಗೆ ಒತ್ತು ಕೊಟ್ಟು ಜನಸಾಮಾನ್ಯರನ್ನು ಜೈನ ಧರ್ಮಕ್ಕೆ ಆಕರ್ಷಿಸಿದರು. ತಂದೆಯ ರಾಜ್ಯಾಡಳಿತವನ್ನು ಗಮನಿಸಿದ್ದತೀರ್ಥಂಕರರು ನಾನು ಸ್ವತಂತ್ರನಾಗಬೇಕೆಂದು ನಿಶ್ಚಿಸಿದ್ದರು. ಆಧ್ಯಾತ್ಮದ ಮೂಲಕ ದೇಶ ಸಂಚಾರದ ಸಮಯದಲ್ಲಿ ವಸ್ತ್ರ ತ್ಯಾಗ ಮಾಡಿದ ಅವರು ದೇಹದ ಮೇಲಿನ ಮಮತ್ವವನ್ನು ಬಿಟ್ಟು ಒಳಗಿನ ಆತ್ಮದ ಬಗ್ಗೆ ಸದಾ ಚಿಂತಿಸುತ್ತಾ 3 ಜನಸಾಮಾನ್ಯರಿಗೆ ಉತ್ತಮ ಸಂದೇಶ ನೀಡಿದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದು ತಿಳಿಸಿದರು. ಶಿಕ್ಷಕರು ಓಬಣ್ಣ, ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ, ಮಂಜುನಾಥ, ಸುರೇಶ, ಬಿ.ಎಂ.ತಿಪ್ಪೇಸ್ವಾಮಿ, ರಂಗನಾಥ, ಮಿಜಾಮಿಲ್, ಇನ್ನು ಮುಂತಾದವರು ಉಪಸ್ಥಿತರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;