;

ಮೊಳಕಾಲ್ಮೂರು: ರಾಂಪುರ/ ಯುವ ನಾಯಕ ಶ್ರಿ ಎನ್.ವೈ ಚೇತನ್ ರವರ ನೇತೃತ್ವದಲ್ಲಿ ಉಚಿತ ಮಾಸ್ಕ್ ವಿತರಣೆ..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನಲ್ಲಿ ರಾಂಪುರ ಹೋಬಳಿಯ ವ್ಯಾಪ್ತಿಯಲ್ಲಿ ಇಂದು (ಏ-24) ಯುವ ನಾಯಕ ಶ್ರಿ ‘ಎನ್.ವೈ ಚೇತನ್’ ರವರ ನೇತೃತ್ವದಲ್ಲಿ ಇಂದು ಬಂಡ್ರವಿ, ಸಂತೆಗುಡ್ಡ, ಮೇಳಿನಕನಿವೆ, ಕೆಳಗಿನಕಣಿವೆ, ಹನುಮನಗುಡ್ಡ, ಹನುಮಾಪೂರ, ಓಬಳಾಪುರ, ಮಲ್ಲೆಹರವು, ವಡ್ಡೆರಹಳ್ಳಿ ಗ್ರಾಮಗಳಿಗೆ ಉಚಿತ ಮಾಸ್ಕ್ ವಿತರಿಸಲಾಯಿತು. ಜೊತೆಗೆ ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ವಾಸಿಸುವಂತ ಜನತೆಗೆ ಕೋರೋಣದ ಬಗ್ಗೆ ಜಾಗೃತಿಯನ್ನು ಮೂಡಿಸಿ ಎಲ್ಲರೂ ಕಡ್ಡಾಯವಾಗಿ ಮಾಸ್ಕನ್ನು ಧರಿಸಿ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ, ಕೋವಿಡ್ ಸೂಕ್ತ ನಡವಳಿಕೆಗಳನ್ನು ಅನುಸರಿಸಿದರೆ ಕೋರೋನ ದಿಂದ ಸುರಕ್ಷಿತ ರಾಗಿರಬಹುದು ನಿಮ್ಮ ಕುಟುಂಬವನ್ನು ನೀವು ಕಾಪಾಡಿ ಕೊಳ್ಳುವ ಸಮಯ ಇದು ಎಂದು ತಿಳಿಸಿ ಗ್ರಾಮೀಣ ಪ್ರದೇಶದ ಜನತೆಗೆ ಜಾಗೃತಿಯನ್ನು ಮುಡಿಸಲಾಯಿತು. ಹಾಗೂ ಸುಮಾರು ೧೦ ಸಾವಿರ ಮಾಸ್ಕ್ ಗಳನ್ನು ರಾಂಪುರ ಹೋಬಳಿಯ ಹಳ್ಳಿಯ ಜನೆತೆಗೆ ವಿತರಿಸಲು ಮುಂದಾಗಿದ್ದಾರೆ. ಈ ಒಂದು ಕಾರ್ಯಕ್ರಮ ಯಶಸ್ವಿಯಾಗಿ ಸಹಕರಿಸಿದಂತ ಲೋಹಿತ್, ಶಫಿ, ತಿಪ್ಪೇಶ್, ಇನ್ನು ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;