;

ಮೊಳಕಾಲ್ಮೂರು: “ವೀಕ್ ಎಂಡ್” ಲಾಕ್ ಡೌನ್ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದ ಕೊರೊನಾ ಕಟ್ಟಿ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವಾರಂತ್ಯ (ವೀಕ್ ಎಂಡ್) ಲಾಕ್ ಡೌನ್ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡು‌ಬಂದಿದ್ದು, ಬಹುತೇಕ ಕರ್ನಾಟಕ ಸ್ತಬ್ಧಗೊಂಡಿದೆ. ರಸ್ತೆ, ಬೀದಿಗಳು ಬಿಕೋ ಎನ್ನುತ್ತಿವೆ.ಬೆಳಗ್ಗೆ 6 ರಿಂದ 10ರವರೆಗೂ ಅಗತ್ಯ ವಸ್ತು ಖರೀದಿಗಷ್ಟೇ ಮನೆಯಿಂದ ಹೊರ ಬಂದಿದ್ದ ಜನ ಡೆಡ್​ಲೈನ್​ ಸಮೀಪಿಸುತ್ತಿದ್ದಂತೆ ಮನೆ ಸೇರಿಕೊಂಡಿದ್ದಾರೆ. ಯಾರೊಬ್ಬರೂ ಕೂಡ ರಸ್ತೆಗಳಿಗೆ ಇಳಿಯುವಂತಿಲ್ಲ. ರೋಡಿಗಿಳಿದರೆ ಲಾಠಿ ಚಾರ್ಜ್ ಮಾಡುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಹೀಗಾಗಿ ರಸ್ತೆಗಳು ಬಿಕೋ ಎನ್ನುತ್ತಿವೆ. ಅನಗತ್ಯವಾಗಿ ಓಡಾಡುವವರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಅನಗತ್ಯವಾಗಿ ಬೈಕ್ ಸವಾರರು ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಖಡಕ್​ ಎಚ್ಚರಿಕೆ ಕೊಡಲಾಯಿತು. ಕಾರಣ ಇಲ್ಲದೆ ರಸ್ತೆಗಿಳಿದವರಿಗೆ ಫುಲ್ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸದಾಷಜನಜಂಗುಳಿಯಿಂದ ಕೂಡಿರುತ್ತಿದ್ದ ಮಾರುಕಟ್ಟೆ, ಬಸ್​ ನಿಲ್ದಾಣಗಳು ಬಿಕೋ ಎನ್ನುತ್ತಿತ್ತು. ಮಾಸ್ಕ್ ಹಾಕದಿರುವವರು, ಸಮಯಕ್ಕೆ ಸರಿಯಾಗಿ ಅಂಗಡಿ ಮುಚ್ಚದಿರುವವರು,ರಸ್ತೆಗಳಲ್ಲಿ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದವರ ಮೇಲೆ ದಂಡ ಪ್ರಯೋಗ ಮಾಡಲಾಗಿತ್ತು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;